ನ್ಯೂಯಾರ್ಕ್, ಮಾ.10- ಸರಿಯಾಗಿ ಬೇಯಿಸಿದ ಹಂದಿ ಮಾಂಸ ತಿಂದರೆ ಅಂತವರ ಮೆದುಳಿನಲ್ಲಿ ಜೀವಂತ ಹುಳುಗಳು ವಾಸ ಮಾಡುವ ಮೂಲಕ ಆತನ ಅನಾರೋಗ್ಯಕ್ಕೆ ಕಾರಣವಾಗಲಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಅಮೆರಿಕದ 52 ವರ್ಷದ ವ್ಯಕ್ತಿಯೊಬ್ಬರಿಗೆ ಕಳೆದ ನಾಲ್ಕೈದು ತಿಂಗಳುಗಳಿಂದ ಇನ್ನಿಲ್ಲದಂತೆ ಅರ್ಧ ತಲೆನೋವು ಕಾಣಿಸಿಕೊಂಡಿತಂತೆ. ನೋವು ತಡೆಯಲಾರದೆ ಆಸ್ಪತ್ರೆಗೆ ಹೋದ ಆತನನ್ನು ಪರೀಕ್ಷಿಸಿದ ವೈದ್ಯರಿಗೆ ಅಚ್ಚರಿಯೊಂದು ಕಾದಿತ್ತು.
ರೋಗಿಯ ತಲೆ ಸ್ಕ್ಯಾನ್ ಮಾಡಿದ ವೈದ್ಯರಿಗೆ ಆತನ ಮೆದುಳಿನಲ್ಲಿ ಟೇಪ್ ವರ್ಮ್‍ಗಳು ಮೊಟ್ಟೆಇಟ್ಟು ಗೂಡುಕಟ್ಟಿಕೊಂಡಿರುವುದು ಕಾಣಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಈ ಕುರಿತಂತೆ ರೋಗಿಯನ್ನು ಪ್ರಶ್ನಿಸಿದಾಗ ಆತ ಅತಿಯಾಗಿ ಬೇಯಿಸದ ಹಂದಿ ಮಾಂಸ ತಿನ್ನುವುದಕ್ಕೆ ಆಧ್ಯತೆ ನೀಡುವುದಾಗಿ ತಿಳಿಸಿದ್ದಾನೆ. ಇದೇ ಆತನ ತಲೆಯಲ್ಲಿ ಹಂದಿ ಹುಳುಗಳು ಮೊಟ್ಟೆ ಇಟ್ಟು ಗೂಡು ಕಟ್ಟಿಕೊಳ್ಳಲು ಸಾಧ್ಯವಾಗಿರುವುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ವೈದ್ಯರು ಅವನಿಗೆ ಪರಾವಲಂಬಿ ಸೋಂಕಿನ ನ್ಯೂರೋಸಿಸ್ಟಿಸರ್ಕೋಸಿಸ್ ಎಂದು ರೋಗನಿರ್ಣಯ ಮಾಡಿದರು, ಇದು ಪರಾವಲಂಬಿ ಮೊಟ್ಟೆಗಳನ್ನು ಇಡುವ ವೈಜ್ಞಾನಿಕ ಪದವಾಗಿದ್ದು ಅದು ದೇಹದ ಹಲವಾರು ಪ್ರದೇಶಗಳಿಗೆ ಸೋಂಕು ತರುತ್ತದೆ.ಆ ಮನುಷ್ಯನ ಕಾಯಿಲೆಯ ವಿವರಗಳನ್ನು ಇತ್ತೀಚೆಗೆ ಅಮೇರಿಕನ್ ಜರ್ನಲ್ ಆಫ್ ಕೇಸ್ ರಿಪೋಟ್ರ್ಸ್‍ನಲ್ಲಿ ಪ್ರಕಟಿಸಲಾಗಿದೆ. ರೋಗಿಯನ್ನು ತೀವ್ರ ನಿಗಾ ಘಟಕಕ್ಕೆ ಕರೆದೊಯ್ಯಲಾಯಿತು ಮತ್ತು ಅವನ ಮೆದುಳಿನಲ್ಲಿನ ಊತವನ್ನು ಕಡಿಮೆ ಮಾಡಲು ಕಾರ್ಟಿಕೊಸ್ಟೆರಾಯ್ಡ ಡೆಕ್ಸಾಮೆಥಾಸೊನ್ ಅನ್ನು ದಿನಕ್ಕೆ ನಾಲ್ಕು ಬಾರಿ ನೀಡಲಾಯಿತು.
ಅವರಿಗೆ ಎರಡು ವಾರಗಳ ಕಾಲ ಅಲ್ಬೆಂಡಜೋಲ್ ಮತ್ತು ಪ್ರಾಜಿಕ್ವಾಂಟೆಲ್ ಅನ್ನು ನೀಡಲಾಯಿತು, ಇದನ್ನು ವರ್ಮ್ ಸೋಂಕಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದರ ಪರಿಣಾಮವಾಗಿ ಮೇದುಳಿನಲ್ಲಿದ್ದ ಹಂದಿ ಹುಳುಗಳ ಚೀಲಗಳು ಕಣ್ಮರೆಯಾಯಿತು ಮತ್ತು ಅವನ ಮೈಗ್ರೇನ್ ಸುಧಾರಿಸಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.