Saturday, November 23, 2024
Homeಆರೋಗ್ಯ / ಜೀವನಶೈಲಿಮೂತ್ರಪಿಂಡ ದಿನ : ಯುವಜನರಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಳ

ಮೂತ್ರಪಿಂಡ ದಿನ : ಯುವಜನರಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಳ

ಜಗತ್ತಿನಲ್ಲಿ ವಿಶ್ವ ಮೂತ್ರಪಿಂಡ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಯುವಜನರಲ್ಲಿ ಯೂರಿಕ್ ಆಸಿಡ್‌ನ ಮಟ್ಟ ಹೆಚ್ಚಳವಾಗುತ್ತಿರುವ ಕಾಳಜಿಯ ವಿಷಯವನ್ನು ಗಮನಿಸುವುದು ಮುಖ್ಯವಾಗಿದೆ. ಒಂದು ಕಾಲದಲ್ಲಿ ಕೇವಲ ಹಿರಿಯ ವಯಸ್ಕರನ್ನು ಪ್ರಾಥಮಿಕವಾಗಿ ಕಾಡುವ ಸ್ಥಿತಿ ಇದು ಎಂದು ಯೋಚಿಸಲಾಗಿತ್ತು. ಆದರೆ, ಈಗ ಯುವಜನರಲ್ಲಿ ಯೂರಿಕ್ ಆಸಿಡ್‌ನ ಮಟ್ಟ ಹೆಚ್ಚಾಗುತ್ತಿರುವುದು ಸಾಮಾನ್ಯವಾಗಿದೆ. ಈ ವಿಷಯದಲ್ಲಿ ಗಮನಹರಿಸಬೇಕಾಗಿದೆ. ಅಲ್ಲದೆ, ನಮ್ಮ ಯುವಜನರ ಆರೋಗ್ಯವನ್ನು ಸುರಕ್ಷಿತವಾಗಿ ಸಂರಕ್ಷಿಸಲು ಸಕ್ರಿಯ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಈ ತೊಂದರೆಯನ್ನು ಸೂಕ್ತವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ.

ಯುರಿಕ್ ಆಸಿಡ್‌ನ ಮಟ್ಟಗಳಲ್ಲಿ ಹೆಚ್ಚಳವಾಗುವುದು ಅಥವಾ ವೈದ್ಯಕೀಯ ಭಾಷೆಯಲ್ಲಿ ಹೈಪರ್‌ಯುರಿಸಿಮಿಯ ತೊಂದರೆಯು ಎಲ್ಲಾ ರೋಗಿಗಳನ್ನು ಕಾಡುವುದಿಲ್ಲ. ಆದರೆ, ಈ ಲಕ್ಷಣಗಳನ್ನು ಅನುಭವಿಸುವ ರೋಗಿಗಳು ಸಂಧಿವಾತದoತಹ ನೋವು ಹಾಗೂ ಅನಾನುಕೂಲಗಳಿಂದ ಬಳಲುತ್ತಾರೆ ಅಲ್ಲದೆ, ಇದನ್ನು ಗೌಟ್ ಎಂದು ಕರೆಯಲಾಗುತ್ತದೆ. ಈ ಗೌಟ್ ಆರ್ಥ್ರರೈಟಿಸ್ ಪ್ರಾಥಮಿಕವಾಗಿ ಪಾದದ ಮಣಿಕಟ್ಟು ಮತ್ತು ಮಂಡಿಯ ಕೀಲುಗಳ ಮೇಲೆ ಮಾತ್ರ ಪರಿಣಾಮ ಉಂಟುಮಾಡುವುದಲ್ಲದೆ, ಇತರೆ ಕೀಲುಗಳ ಮೇಲೂ ಪರಿಣಾಮ ಬೀರಬಹುದು. ಇದರಿಂದ ಕೀಲುಗಳು ಊದಿಕೊಳ್ಳುತ್ತವೆ ಜೊತೆಗೆ ಒಳಗಡೆ ಉರಿಯೂತ ಕಾಡುವುದಲ್ಲದೆ, ಆ ಜಾಗ ಕೆಂಪಾಗಿರುತ್ತದೆ. ಆ ನಿರ್ದಿಷ್ಟ ಕೀಲಿನ ಭಾಗದಲ್ಲಿ ರೋಗಿಗಳಿಗೆ ತಾಪಮಾನ ಹೆಚ್ಚಾಗಿರುವ ಮತ್ತು ತೀವ್ರ ನೋವಿನ ಅನುಭವವಾಗುತ್ತದೆ. ಗೌಟ್ ಆರ್ಥ್ರರೈಟಿಸ್ ಅನ್ನು ಶೀಘ್ರವಾಗಿ ಗುರುತಿಸಿ ಸರಿಯಾದ ಚಿಕಿತ್ಸೆ ನೀಡಬಹುದು ಎಂಬುದು ಮುಖ್ಯವಾದ ಅಂಶವಾಗಿರುತ್ತದೆ. ಹೈಪರ್‌ಯುರಿಸಿಮಿಯಾದ ಇತರೆ ಲಕ್ಷಣಗಳೆಂದರೆ ಮೂತ್ರಪಿಂಡದಲ್ಲಿ ಕಲ್ಲುಗಳು ಕಂಡುಬರುವುದಾಗಿದೆ. ರೋಗಿ ಪದೇ ಪದೇ ಕಾಣಿಸಿಕೊಳ್ಳುವ ಮೂತ್ರಪಿಂಡದ ಕಲ್ಲಿನ ತೊಂದರೆಯಿoದ ಬಳಲುತ್ತಾನೆ. ಇದರಿಂದ ಬೆನ್ನುನೋವು ಮತ್ತು ಮೂತ್ರಕೋಶದಲ್ಲಿ ನೋವಿನಂತಹ ತೀವ್ರ ಅಸ್ವಸ್ಥತೆ ಉಂಟಾಗಬಹುದು. ಮೂತ್ರದ ಹರಿವಿಗೆ ಅಡ್ಡಿ ಉಂಟಾಗಬಹುದಲ್ಲದೆ, ಇದರಿಂದ ಅಂತಿಮವಾಗಿ ಮೂತ್ರಪಿಂಡದಲ್ಲಿ ಗಾಯ ಕಾಣಿಸಿಕೊಳ್ಳಬಹುದು.

ಯುವಜನರಲ್ಲಿ ಯೂರಿಕ್ ಆಸಿಡ್‌ನ ಮಟ್ಟ ಹೆಚ್ಚಳಕ್ಕೆ ಕೊಡುಗೆ ನೀಡುವ ಹಲವಾರು ಅಂಶಗಳು :

  1. ಅನಾರೋಗ್ಯಕರ ಆಹಾರಕ್ರಮ : ಆಧುನಿಕ ಆಹಾರಕ್ರಮ ಅಭ್ಯಾಸಗಳಲ್ಲಿ ಅತಿಯಾದ ಮದ್ಯಪಾನ, ಸಂಸ್ಕರಿತ ಆಹಾರಗಳು, ಸಕ್ಕರೆ ತುಂಬಿರುವ ಪೇಯಗಳೂ ಮತ್ತು ಕೆಂಪು ಮಾಂಸಗಳ ಸೇವನೆ ಹೆಚ್ಚಾಗಿರುತ್ತದೆ. ಇವು ಯುರಿಕ್ ಆಸಿಡ್ ಮಟ್ಟ ಹೆಚ್ಚಾಗುವಲ್ಲಿ ಗಮನಾರ್ಹ ಕೊಡುಗೆ ನೀಡುತ್ತವೆ. ಪ್ಯೂರಿನ್ ಕಾಂಪೌoಡ್‌ಗಳು ಸಮೃದ್ಧವಾಗಿರುವ ಆಹಾರಕ್ರಮದ ಆಯ್ಕೆಗಳು ದೇಹದಲ್ಲಿ ಯುರಿಕ್ ಆಸಿಡ್ ಆಗಿ ಪರಿವರ್ತನೆಗೊಳ್ಳುತ್ತವೆ. ಇದರಿಂದ ದೇಹದ ಸಾಮರ್ಥ್ಯ ಮತ್ತು ಸಂಸ್ಕರಣಾ ಶಕ್ತಿ ಕುಂದುತ್ತವೆ.
  2. ಆಲಸಿ ಜೀವನಶೈಲಿ : ತಂತ್ರಜ್ಞಾನ ಹೆಚ್ಚಾಗಿ ನಮ್ಮ ಬದುಕನ್ನು ಪ್ರವೇಶಿಸುತ್ತಿರುವಂತೆ ಯುವಜನರಲ್ಲಿ ದೈಹಿಕ ಚಟುವಟಿಕೆಯ ಮಟ್ಟ ಬಹಳ ಕಡಿಮೆಯಾಗಿದೆ. ಆಲಸಿ ಜೀವನಶೈಲಿಯಿಂದ ತೂಕ ಹೆಚ್ಚಾಗಲು ಮತ್ತು ಚಯಾಪಚಯ ಅಸಮತೋಲನ ಉಂಟಾಗಲು ದಾರಿಯಾಗುತ್ತದೆ. ಇದರಿಂದ ಹೈಪರ್‌ಯುರಿಸಿಮಿಯಾದ ಅಪಾಯ ಹೆಚ್ಚಾಗುತ್ತದೆ.
  3. ಬೊಜ್ಜು ಮೈ : ಜಾಗತಿಕವಾಗಿ ಬೊಜ್ಜು ಮೈ ತೊಂದರೆ ಅಪಾಯಕಾರಿ ಎಚ್ಚರಿಕೆಯ ಮಟ್ಟವನ್ನು ತಲುಪಿದೆ. ಇದು ಎಲ್ಲಾ ವಯಸ್ಸಿನ ವ್ಯಕ್ತಿಗಳನ್ನು ಕಾಡುತ್ತಿದೆ. ಅತಿಯಾದ ದೇಹತೂಕವು ಇನ್ಸುಲಿನ್ ನಿರೋಧಕತೆ ಮತ್ತು ಮೆಟಬಾಲಿಕ್ ಸಿಂಡ್ರೋಮ್‌ಗಳೊoದಿಗೆ ಹತ್ತಿರದ ಸಂಪರ್ಕ ಹೊಂದಿರುತ್ತದೆ. ಇವೆರಡೂ ಯುರಿಕ್ ಆಸಿಡ್ ಮಟ್ಟ ಹೆಚ್ಚುವುದರೊಂದಿಗೆ ಸಹಯೋಗ ಹೊಂದಿರುತ್ತದೆ.
  4. ಒತ್ತಡ ಮತ್ತು ಕಳಪೆ ನಿದ್ದೆ : ಶೈಕ್ಷಣಿಕ ಒತ್ತಡಗಳು, ಸಾಮಾಜಿಕ ಮಾಧ್ಯಮ ಮತ್ತು ಇತರೆ ಅಂಶಗಳಿoದಾಗಿ ಇಂದಿನ ಯುವಜನತೆ ಹಿಂದೆoದೂ ಇಲ್ಲದಷ್ಟು ಮಟ್ಟದಲ್ಲಿನ ಒತ್ತಡಕ್ಕೆ ಗುರಿಯಾಗುತ್ತಿದ್ದಾರೆ. ದೀರ್ಘಕಾಲದ ಒತ್ತಡ ಮತ್ತು ನಿದ್ರೆ ಇಲ್ಲದ ಸ್ಥಿತಿಗಳು ಹಾರ್ಮೋನ್ ಅಸಮತೋಲನಕ್ಕೆ ದಾರಿ ಮಾಡಿಕೊಡಬಹುದು. ಇದರಿಂದ ಚಯಾಪಚಯ ಅಂದರೆ ಮೆಟಬಾಲಿಕ್ ಬದಲಾವಣೆಗೆ ಚಾಲನೆ ಉಂಟಾಗುವುದಲ್ಲದೆ, ಯುರಿಕ್ ಆಸಿಡ್‌ನ ಮಟ್ಟಗಳಲ್ಲಿ ಹೆಚ್ಚಳವಾಗುತ್ತದೆ.

ಯುವಜನರಲ್ಲಿ ಯುರಿಕ್ ಆಸಿಡ್ ಹೆಚ್ಚಳ ಸಮಸ್ಯೆ ಕುರಿತು ಗಮನಹರಿಸಲು ಬಹುಮುಖಿ ಮಾರ್ಗದ ಅಗತ್ಯವಿರುತ್ತದೆ. ಇದಕ್ಕಾಗಿ ಆಹಾರಕ್ರಮದಲ್ಲಿ ಬದಲಾವಣೆಗಳು, ಜೀವನಶೈಲಿಯ ಬದಲಾವಣೆಗಳು ಮತ್ತು ಜಾಗೃತಿ ಅಭಿಯಾನಗಳ ಅಗತ್ಯವಿರುತ್ತದೆ :

  1. ಆರೋಗ್ಯಕರ ಆಹಾರ ಸೇವನೆ ಅಭ್ಯಾಸಗಳು : ಹಣ್ಣುಗಳು, ತರಕಾರಿಗಳು, ಸಂಪೂರ್ಣ ಧಾನ್ಯಗಳು ಮತ್ತು ಕೊಬ್ಬು ಕಡಿಮೆ ಇರುವ ಪ್ರೊಟೀನ್‌ಗಳಿಂದ ಸಮೃದ್ಧವಾದ ಸಮತೋಲಿತ ಆಹಾರಕ್ರಮವನ್ನು ಅಳವಡಿಸಿಕೊಳ್ಳಲು ಯುವಜನರಿಗೆ ಪ್ರೋತ್ಸಾಹ ನೀಡಿರಿ. ಇದರೊಂದಿಗೆ ಪ್ಯೂರಿನ್‌ನಿಂದ ಸಮೃದ್ಧವಾದ ಕೆಂಪು ಮಾಂಸ, ಅಂಗಗಳ ಮಾಂಸ, ನಿರ್ದಿಷ್ಟ ಸಮುದ್ರಾಹಾರಗಳ ಸೇವನೆಯನ್ನು ಮಿತಿಗೊಳಿಸಬೇಕು. ಜೊತೆಗೆ ಸಾಕಷ್ಟು ನೀರು ಸೇವಿಸಿ ದೇಹ ಹೆಚ್ಚಿನ ಯುರಿಕ್ ಆಸಿಡ್ ಅನ್ನು ಹೊರಹಾಕಲು ನೆರವಾಗುವುದನ್ನು ಕುರಿತ ಪ್ರಾಮುಖ್ಯತೆಗೆ ಒತ್ತು ನೀಡಿ.
  2. ನಿಗದಿತ ವ್ಯಾಯಾಮ : ಆಲಸಿ ಜೀವನಶೈಲಿಯಿಂದ ಮುಕ್ತರಾಗಲು ಯುವಜನರಿಗೆ ನಿಗದಿತ ದೈಹಿಕ ಚಟುವಟಿಕೆಯಲ್ಲಿ ತೊಡಗುವುದನ್ನು ಪ್ರೋತ್ಸಾಹಿಸಿ. ಅವರು ಆನಂದಿಸುವ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ. ಆಟವಾಡುವುದು, ಕುಣಿಯುವುದು ಅಥವಾ ನಡಿಗೆ ಅಂದರೆ ವಾಕಿಂಗ್ ಮಾಡುವುದು ಯಾವುದೇ ಆದ ಅಭ್ಯಾಸ ಒಳ್ಳೆಯದು. ನಿಗದಿತ ವ್ಯಾಯಾಮಗಳು ಉತ್ತಮ ಆರೋಗ್ಯ ತೂಕವನ್ನು ಉಳಿಸಿಕೊಳ್ಳಲು ಸಹಾಯ ಮಾಡುವುದಲ್ಲದೆ, ದೇಹದ ಇನ್ಸುಲಿನ್ ಸಂವೇದನಾಶೀಲತೆ ಮತ್ತು ಚಯಪಚಯ ಕಾರ್ಯಗಳನ್ನು ಕೂಡ ಸುಧಾರಿಸುತ್ತದೆ.
  3. ಒತ್ತಡ ನಿರ್ವಹಣೆ : ಧ್ಯಾನ ಮತ್ತು ದೀರ್ಘ ಉಸಿರಾಟದ ವ್ಯಾಯಾಮಗಳು ಮುಂತಾದ ಒತ್ತಡ ನಿರ್ವಹಣಾ ತಂತ್ರಗಳನ್ನು ಕಲಿಸಿಕೊಡಿ. ಜೊತೆಗೆ ಯುವಜನರಿಗೆ ಸಮಯದ ನಿರ್ವಹಣೆ ಕೌಶಲ್ಯ ತಿಳಿಸಿಕೊಡಿ. ವೈಯಕ್ತಿಕ ಆರೈಕೆಗೆ ಆದ್ಯತೆ ನೀಡುವಲ್ಲಿ ಯುವಜನತೆಯನ್ನು ಪ್ರೋತ್ಸಾಹಿಸಿ. ಜೊತೆಗೆ ಒತ್ತಡ ನಿವಾರಿಸಿಕೊಳ್ಳಲು ಆರೋಗ್ಯಕರ ಅಭ್ಯಾಸಗಳನ್ನು ಹುಡುಕಿಕೊಳ್ಳಲು ನೆರವಾಗಿ. ವಿವಿಧ ಅಭ್ಯಾಸಗಳು ಮತ್ತು ಹೊರಾಂಗಣದಲ್ಲಿ ಸಮಯ ಕಳೆಯುವ ಕ್ರಮಗಳು ಇದರಲ್ಲಿ ಸೇರಿವೆ.
  4. ಸಾಕಷ್ಟು ನಿದ್ದೆ : ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಗುಣಮಟ್ಟದ ನಿದ್ದೆಯ ಪ್ರಾಮುಖ್ಯತೆಗೆ ಒತ್ತು ನೀಡಿ. ನಿಗದಿತವಾದ ನಿದ್ರಾ ವೇಳಾಪಟ್ಟಿಯನ್ನು ಅಳವಡಿಸಿಕೊಳ್ಳಲು ಯುವಜನರಿಗೆ ಪ್ರೋತ್ಸಾಹ ನೀಡಿರಿ. ಆರಾಮ ನೀಡುವಂತಹ ನಿದ್ರಾ ಸಮಯ ಹೊಂದುವುದಲ್ಲದೆ, ವಿಶ್ರಾಂತಿದಾಯಕ ನಿದ್ರೆ ಪಡೆಯಲು ಮಲಗುವ ಮುನ್ನ ಟಿವಿ, ಮೊಬೈಲ್ ಮುಂತಾದವುಗಳ ವೀಕ್ಷಣೆಯನ್ನು ಮಿತಿಗೊಳಿಸಿ.
  5. ನಿಗದಿತ ಅವಧಿಗೊಮ್ಮೆ ಆರೋಗ್ಯ ತಪಾಸಣೆಗಳು : ನಿಗದಿತ ಅವಧಿಗೊಮ್ಮೆ ಆರೋಗ್ಯ ಪರೀಕ್ಷೆಗಳು ಮತ್ತು ಯುರಿಕ್ ಆಸಿಡ್ ಮಟ್ಟಗಳನ್ನು ಗಮನಿಸಲು ತಪಾಸಣೆಗೆ ಒಳಗಾಗುವುದನ್ನು ಪ್ರೋತ್ಸಾಹಿಸಿ. ಇದರೊಂದಿಗೆ ದೇಹದಲ್ಲಿರುವ ಆರೋಗ್ಯ ಸಮಸ್ಯೆಗಳನ್ನು ಶೀಘ್ರವಾಗಿ ಗುರುತಿಸಿ. ಕೀಲುಗಳ ನೋವು, ಊತ ಅಥವಾ ಪದೇ ಪದೇ ಮೂತ್ರಪಿಂಡಗಳಲ್ಲಿ ಕಲ್ಲು ಕಾಣಿಸಿಕೊಳ್ಳುವಂತಹ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ ವೈದ್ಯಕೀಯ ಗಮನ ಪಡೆಯುವ ಪ್ರಾಮುಖ್ಯತೆ ಕುರಿತು ಯುವಜನರಿಗೆ ಶಿಕ್ಷಣ ನೀಡಿ. ಈ ತೊಂದರೆಗಳು ದೇಹದಲ್ಲಿ ಯುರಿಕ್ ಆಸಿಡ್ ಮಟ್ಟ ಹೆಚ್ಚಳವಾಗಿರುವುದನ್ನು ಸೂಚಿಸಬಹುದು.

ವಿಶ್ವ ಮೂತ್ರಪಿಂಡ ದಿನದಂದು ನಮ್ಮ ಯುವಜನರ ಮೂತ್ರಪಿಂಡ ಆರೋಗ್ಯಕ್ಕೆ ಆದ್ಯತೆ ನೀಡಲು ನಾವು ಶಪಥ ಮಾಡೋಣ. ಯುರಿಕ್ ಆಸಿಡ್ ಮಟ್ಟಗಳಲ್ಲಿ ಹೆಚ್ಚಳಕ್ಕೆ ಕೊಡುಗೆ ನೀಡುವ ಅಂಶಗಳ ಬಗ್ಗೆ ಜಾಗೃತಿ ಹೆಚ್ಚಿಸುವುದರಿಂದ ಯುವಪೀಳಿಗೆ ಆರೋಗ್ಯಕರ ಆಯ್ಕೆಗಳನ್ನು ಮಾಡಲು ಅವರನ್ನು ನಾವು ಸಬಲಿಕರಿಸಬಹುದಲ್ಲದೆ, ಇದರಿಂದ ಅವರು ಮುಂಬರುವ ಹಲವಾರು ವರ್ಷಗಳವರೆಗೆ ತಮ್ಮ ಮೂತ್ರಪಿಂಡದ ಆರೋಗ್ಯವನ್ನು ಉಳಿಸಿಕೊಳ್ಳಬಹುದು. ನಮ್ಮ ಯುವಜನತೆ ಗರಿಷ್ಟ ಆರೋಗ್ಯ ಮತ್ತು ಯೋಗಕ್ಷೇಮದೊಂದಿಗೆ ಸಮೃದ್ಧಿ ಹೊಂದುವ ಖಾತ್ರಿ ಮಾಡಿಕೊಳ್ಳಲು ನಾವೆಲ್ಲರೂ ಒಂದಾಗಿ ಶ್ರಮಿಸೋಣ.

ಡಾ. ರಾಘವೇಂದ್ರ ಎನ್., ಮೂತ್ರಪಿಂಡ ರೋಗಶಾಸ್ತ್ರ ಸಲಹಾ ತಜ್ಞರು ಮತ್ತು ಮೂತ್ರಪಿಂಡ ಕಸಿ ವೈದ್ಯರು, ಟ್ರೈಲೈಫ್ ಹಾಸ್ಪಿಟಲ್

RELATED ARTICLES

Latest News