Homeರಾಷ್ಟ್ರೀಯಹವಾಮಾನ ವೈಪರೀತ್ಯ : ಲ್ಯಾಂಡಿಂಗ್‌ಗೆ ಪರದಾಡಿದ ರಾಹುಲ್‌ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ

ಹವಾಮಾನ ವೈಪರೀತ್ಯ : ಲ್ಯಾಂಡಿಂಗ್‌ಗೆ ಪರದಾಡಿದ ರಾಹುಲ್‌ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ

ಲಕ್ನೋ, ಸೆ.9- ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಯಾಣಿಸುತ್ತಿದ್ದ ಏರ್‌ ಇಂಡಿಯಾ ವಿಮಾನವು ಹವಾಮಾನ ವೈಪರೀತ್ಯದ ಕಾರಣ ಲಕ್ನೋದ ಚೌಧರಿ ಚರಣ್‌ ಸಿಂಗ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ವೇಳೆ ತಾಂತ್ರಿಕ ಸವಾಲು ಎದುರಿಸಿದ ಘಟನೆ ವರದಿಯಾಗಿದೆ.

ದೆಹಲಿಯಿಂದ ಲಕ್ನೋಗೆ ತೆರಳುತ್ತಿದ್ದ ವಿಮಾನವು ಮೊದಲ ಪ್ರಯತ್ನದಲ್ಲಿ ಲ್ಯಾಂಡಿಂಗ್‌ ಮಾಡಲು ಸಾಧ್ಯವಾಗದೆ, ಪೈಲಟ್‌ನ ಸಮಯಪ್ರಜ್ಞೆಯಿಂದ ಎರಡನೇ ಪ್ರಯತ್ನದಲ್ಲಿ ಸುರಕ್ಷಿತವಾಗಿ ರನ್‌ವೇ ಮೇಲೆ ಇಳಿದಿದೆ ಎಂದು ತಿಳಿದುಬಂದಿದೆ.

ವಿಮಾನವು ಮೊದಲ ಬಾರಿಗೆ ಲ್ಯಾಂಡಿಂಗ್‌ ಮಾಡಲು ಯತ್ನಿಸಿದಾಗ ದಿಢೀರ್‌ ಹವಾಮಾನ ವೈಪರೀತ್ಯ ಹಾಗೂ ಗಾಳಿಯ ದಿಕ್ಕಿನಲ್ಲಿ ಬದಲಾವಣೆಯಾದ ಹಿನ್ನೆಲೆಯಲ್ಲಿ ಪೈಲಟ್‌ ಲ್ಯಾಂಡಿಂಗ್‌ ಪ್ರಕ್ರಿಯೆಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಿ ವಿಮಾನವನ್ನು ಮತ್ತೆ ಮೇಲಕ್ಕೆ ಕೊಂಡೊಯ್ದರು.

ಬಳಿಕ ವಿಮಾನ ಕೆಲ ನಿಮಿಷಗಳ ಕಾಲ ಆಕಾಶದಲ್ಲಿ ಸುತ್ತು ಹೊಡೆದಿದ್ದು, ಮಧ್ಯಾಹ್ನ 3.55ರ ಸುಮಾರಿಗೆ ಪೈಲಟ್‌ ಎರಡನೇ ಪ್ರಯತ್ನದಲ್ಲಿ ವಿಮಾನವನ್ನು ಸುರಕ್ಷಿತವಾಗಿ ರನ್‌ವೇ ಮೇಲೆ ಇಳಿಸುವಲ್ಲಿ ಯಶಸ್ವಿಯಾದರು ಎಂದು ಮೂಲಗಳು ತಿಳಿಸಿವೆ. ರಾಹುಲ್‌ ಗಾಂಧಿ ಸೇರಿದಂತೆ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರವಾದ ರಾಯಬರೇಲಿಯಲ್ಲಿ ಎರಡು ದಿನಗಳ ಕಾಲ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಪಕ್ಷದ ಸಭೆಗಳಲ್ಲಿ ಭಾಗವಹಿಸಲು ರಾಹುಲ್‌ ಗಾಂಧಿ ಲಕ್ನೋಗೆ ತೆರಳುತ್ತಿದ್ದರು.

RELATED ARTICLES
spot_img

Latest News