Thursday, April 16, 2026
Homeಕ್ರೀಡಾ ಸುದ್ದಿಐಪಿಎಲ್‌ ಹರಾಜು 2026 : ಕ್ಯಾಮರೂನ್‌ ಗ್ರೀನ್‌ನಿಂದ ಬಿಸಿಸಿಐಗೆ 7.20 ಕೋಟಿ ಲಾಭ

ಐಪಿಎಲ್‌ ಹರಾಜು 2026 : ಕ್ಯಾಮರೂನ್‌ ಗ್ರೀನ್‌ನಿಂದ ಬಿಸಿಸಿಐಗೆ 7.20 ಕೋಟಿ ಲಾಭ

IPL 2026 Auction : Cameron Green Sold To KKR For Over Rs 25 Crore

ಅಬುಧಾಬಿ,ಡಿ.16- ಹತ್ತೊಂಭತ್ತನೇ ಆವೃತ್ತಿಯ ಐಪಿಎಲ್‌ ನ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್‌ ಆಲ್‌ ರೌಂಡರ್‌, ಆರ್‌ ಸಿಬಿ ಮಾಜಿ ಆಟಗಾರ ಕ್ಯಾಮರೂನ್‌ ಗ್ರೀನ್‌ ನಿಂದ ಬಿಸಿಸಿಐಗೆ 7.20 ಕೋಟಿ ಲಾಭವಾಗಿದೆ.

ಮಿನಿ ಹರಾಜಿಗೂ ಮುನ್ನ ಹೆಚ್ಚು ಮೊತ್ತಕ್ಕೆ ಬಿಕರಿಯಾಗುವ ಆಟಗಾರ ಎಂಬ ನಿರೀಕ್ಷೆಯಂತೆಯೇ ಗ್ರೀನ್‌ 25.20 ಕೋಟಿ ರೂ.ಗೆ ಮೂರು ಬಾರಿ ಚಾಂಪಿಯನ್‌ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಸೇರಿಕೊಂಡರೂ, ಗ್ರೀನ್‌ ಪಾಲಿಗೆ ಸಿಗುವುದು ಕೇವಲ 18 ಕೋಟಿ ರೂ.ಗೂ ಮಾತ್ರ.

2026ರ ಐಪಿಎಲ್‌ ಮಿನಿ ಹರಾಜಿಗೂ ಮುನ್ನವೇ ಮಿನಿ ಹರಾಜಿನಲ್ಲಿ ವಿದೇಶಿ ಆಟಗಾರರ ಗರಿಷ್ಠ ಮೊತ್ತವನ್ನು 18 ಕೋಟಿ ರೂ.ಗೆ ನಿಗಧಿಪಡಿಸಲಾಗಿತ್ತು. ಆದರೆ 5 ಬಾರಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್‌್ಸ ಹಾಗೂ ಕೋಲ್ಕತ್ತಾ ನೈಟ್‌ ರೈಡರ್ಸ್‌ ಫ್ರಾಂಚೈಸಿ ಆಸೀಸ್‌‍ ಆಲ್‌ ರೌಂಡರ್‌ಗೆ ಪ್ರಬಲ ಪೈಪೋಟಿ ನಡೆಸಿತ್ತು.

ಅಂತಿಮವಾಗಿ ಕ್ಯಾಮರೂನ್‌ ಗ್ರೀನ್‌ 25.20 ಕೋಟಿ ರೂ.ಗೆ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಪಾಲಾಗಿದ್ದಾರೆ. ಆ ಮೂಲಕ ಬಿಸಿಸಿಐಗೆ 7.20 ಕೋಟಿ ರೂ. ಲಾಭವಾಗಿದೆ.

ಐಪಿಎಲ್‌ ಹರಾಜಿನಲ್ಲಿ ದಾಖಲೆ ಸೃಷ್ಟಿಸಿದ RCB ಮಾಜಿ ಆಟಗಾರ
ಇಂದಿಲ್ಲಿ ನಡೆಯುತ್ತಿರುವ ಐಪಿಎಲ್‌ ಮಿನಿ ಹರಾಜಿನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ಆಟಗಾರ ಕ್ಯಾಮರೂನ್‌ ಗ್ರೀನ್‌ ಅವರು ದಾಖಲೆ ನಿರ್ಮಿಸಿದ್ದು, ಐಪಿಎಲ್‌ ಇತಿಹಾಸದಲ್ಲೇ ಹೆಚ್ಚು ಮೊತ್ತಕ್ಕೆ ಬಿಕರಿಯಾದ ವಿದೇಶಿ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.

ಐಪಿಎಲ್‌ ಹರಾಜಿನ ಇತಿಹಾಸದಲ್ಲಿ ಭಾರತದ ಆಟಗಾರರಾದ ರಿಷಭ್‌ ಪಂತ್‌ 27 ಕೋಟಿ ಹಾಗೂ ಶ್ರೇಯಸ್‌‍ ಅಯ್ಯರ್‌ 26.75 ಕೋಟಿಗೆ ಬಿಕರಿಯಾಗುವ ಮೂಲಕ ದಾಖಲೆ ನಿರ್ಮಿಸಿದ್ದರೆ, ಕ್ಯಾಮರೂನ್‌ ಗ್ರೀನ್‌ ಅವರು 25.20 ಕೋಟಿಗೆ ಸೇಲ್‌ ಆಗುವ ಮೂಲಕ ಅತಿ ಹೆಚ್ಚು ಮೊತ್ತ ಗಳಿಸಿದ ವಿದೇಶಿ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದವರ ಸಾಲಿನಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್‌ ಸ್ಟ್ರಾಕ್‌ (24.75 ಕೋಟಿ) ಹಾಗೂ ವೆಂಕಟೇಶ್‌ ಅಯ್ಯರ್‌ (23.75) ಟಾಪ್‌ 5 ಸ್ಥಾನದಲ್ಲಿದ್ದಾರೆ.

ಆರ್‌ ಸಿಬಿ ಪಾಲಾದ ವೆಂಕಟೇಶ್‌ ಅಯ್ಯರ್‌
ಮಿನಿ ಹರಾಜಿನಲ್ಲಿ ದೇಶಿ ಆಲ್‌ ರೌಂಡರ್‌ ಗಳತ್ತ ಗಮನ ಹರಿಸಿದ್ದ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ ವೆಂಕಟೇಶ್‌ ಅಯ್ಯರ್‌ ಅವರನ್ನು ಬಿಕರಿ ಮಾಡಿಕೊಳ್ಳುವ ಮೂಲಕ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿದ್ದಾರೆ.

ವೆಂಕಟೇಶ್‌ ಅಯ್ಯರ್‌ ಖರೀದಿಗೆ ಕೋಲ್ಕತ್ತಾ ನೈಟ್‌ ರೈಡರ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ ನಡುವೆ ಪ್ರಬಲ ಪೈಪೋಟಿ ನಡೆದರೂ ಅಂತಿಮವಾಗಿ 7 ಕೋಟಿ ಜೇಬಿಗಿಳಿಸಿಕೊಂಡ ವೆಂಕಟೇಶ್‌ ಅಯ್ಯರ್‌ ಆರ್‌ ಸಿಬಿ ಬಳಗ ಸೇರಿಕೊಂಡರು.
ಆದರೆ ಆರ್‌ ಸಿಬಿ ತಂಡದ ಮಾಜಿ ಆಟಗಾರ ಲಿಯಾಮ್‌ ಲಿವಿಂಗ್‌ ಸ್ಟನ್‌ ಬಿಕರಿಯಾಗದೆ ಉಳಿದರು.

RELATED ARTICLES

Latest News