ಬೆಂಗಳೂರು,ಮಾ.21- ದ್ವಿತೀಯ ಪಿಯುಸಿ ಮೊದಲ ವಾರ್ಷಿಕ ಪರೀಕ್ಷೆಗೆ ನಾಳೆ ತೆರೆ ಬೀಳಲಿದೆ. 2023-24 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಮಾ.1 ರಿಂದ ಆರಂಭಗೊಂಡಿದ್ದು, ನಾಳೆ ಮಧ್ಯಾಹ್ನ ಮುಕ್ತಾಯಗೊಳ್ಳಲಿದೆ. ಇದುವರೆಗೂ ಪರೀಕ್ಷೆ ಸುಸೂತ್ರವಾಗಿ ಗೊಂದಲವಿಲ್ಲದೆ ಜರುಗಿದೆ. ಮಾ.1 ರಂದು ಕನ್ನಡ, ಅರೆಬಿಕ್ ಭಾಷಾ ಪರೀಕ್ಷೆ ನಡೆದಿತ್ತು.
ಇಂದು ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಉರ್ದು, ಸಂಸ್ಕøತ ಮತ್ತು ಫ್ರೆಂಚ್ ಭಾಷಾ ಪರೀಕ್ಷೆ ನಡೆದಿದೆ. ನಾಳೆ ಬೆಳಿಗ್ಗೆ ಹಿಂದಿ ಭಾಷಾ ಪರೀಕ್ಷೆ ನಡೆಯಲಿದೆ.ರಾಜ್ಯಾದ್ಯಂತ 6,98,624 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೊಂದಾಯಿಸಿಕೊಂಡಿದ್ದರು. ರಾಜ್ಯದ 5,912 ಪಿಯುಸಿ ಕಾಲೇಜುಗಳಿಂದ 3,30,644 ಬಾಲಕರು ಹಾಗೂ 3,67,980 ಬಾಲಕಿಯರು ಸೇರಿದ್ದಾರೆ.
ರಾಜ್ಯಾದ್ಯಂತ 1,124 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿತ್ತು. ಪರೀಕ್ಷಾ ಅಕ್ರಮ ತಡೆಯಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಸಿಸಿ ಟಿವಿ ಕಣ್ಗಾವಲನ್ನು ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಿತ್ತು.
ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಈಯರ್ ಫೋನ್ ಸೇರಿದಂತೆ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಸಿತ್ತು.ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳು ಪರೀಕ್ಷೆ ಬರೆಯುವ ದಿನದಂದು ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ಅವಕಾಶವನ್ನು ಕಲ್ಪಿಸಿದ್ದವು.