Friday, November 22, 2024
Homeರಾಷ್ಟ್ರೀಯ | Nationalಮನೆಯೊಂದರಲ್ಲಿ ನಿಷೇಧಿತ 2000 ಮುಖಬೆಲೆಯ 7 ಕೋಟಿ ರೂ. ಮೌಲ್ಯದ ನೋಟುಗಳು ಪತ್ತೆ

ಮನೆಯೊಂದರಲ್ಲಿ ನಿಷೇಧಿತ 2000 ಮುಖಬೆಲೆಯ 7 ಕೋಟಿ ರೂ. ಮೌಲ್ಯದ ನೋಟುಗಳು ಪತ್ತೆ

ಕಾಸರಗೋಡು,ಮಾ.22- ಮನೆಯೊಂದರ ಮೇಲೆ ಪೊಲೀಸರ ತಂಡ ದಾಳಿ ನಡೆಸಿದಾಗ ನಿಷೇಧಗೊಂಡಿರುವ 2000 ಮುಖಬೆಲೆಯ ಬರೋಬ್ಬರಿ 7 ಕೋಟಿ ರೂ. ನಗದು ಹಣ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕೇರಳದ ಕಾಸರಗೋಡು ಜಿಲ್ಲೆಯ ಗುರಪುರದ ಅಂಬಲತ್ತರ ಗ್ರಾಮದ ಮನೆಯೊಂದರಲ್ಲಿ ಚಲಾವಣೆಯಿಂದ ಹಿಂಪಡೆಯಲಾಗಿರುವ 2000 ಮುಖಬೆಲೆಯ ಸುಮಾರು 7 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸದ್ಯ ನಗದನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸುತ್ತಿದ್ದಾರೆ. ದುಬೈನಲ್ಲಿ ಉದ್ಯೋಗಿ ಕೆಪಿ ಬಾಬು ರಾಜ್ ಅವರ ಮಾಲೀಕತ್ವದ ಮನೆಯಲ್ಲಿ ಈ ಹಣ ಪತ್ತೆಯಾಗಿದ್ದು ಇವರು ಪಾಣತ್ತೂರು ನಿವಾಸಿ ಅಬ್ದುಲ್ ರಜಾಕ್ ಎಂಬುವವರಿಗೆ ಮನೆ ಬಾಡಿಗೆಗೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಪೊಲೀಸರು ಮನೆಯ ಮೇಲೆ ನಿಗಾ ಇರಿಸಿದ್ದರು ನಂತರ ದಾಳಿ ನಡೆಸಿ ಎರಡು ಕೊಠಡಿಗಳಲ್ಲಿ ಥರ್ಮಾಕೋಲ್ ಬಾಕ್ಸ್, ರಟ್ಟಿನ ಬಾಕ್ಸ್ ಮತ್ತು ಗೋಣಿಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES

Latest News