Friday, November 22, 2024
Homeರಾಷ್ಟ್ರೀಯ | National35 ಬಂಧಿತ ಸೊಮಾಲಿ ಕಡಲ್ಗಳ್ಳರನ್ನು ವಿಚಾರಣೆಗೆ ಭಾರತಕ್ಕೆ ಕರೆತಂದ ನೌಕಾಪಡೆ

35 ಬಂಧಿತ ಸೊಮಾಲಿ ಕಡಲ್ಗಳ್ಳರನ್ನು ವಿಚಾರಣೆಗೆ ಭಾರತಕ್ಕೆ ಕರೆತಂದ ನೌಕಾಪಡೆ

ಮುಂಬೈ,ಮಾ.23- ಭಾರತೀಯ ನೌಕಾಪಡೆಯು ಕೋಲ್ಕತ್ತಾದ ಅರಬ್ಬಿ ಸಮುದ್ರದ ಬಳಿ 35 ಸೊಮಾಲಿಯನ್ ಕಡಲಗಳ್ಳರನ್ನು ಬಂಧಿಸಿದ್ದು, ಮುಂಬೈಗೆ ತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆ, ಕಡಲ್ಗಳ್ಳತನ ವಿರೋಧಿ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‍ಗಳಡಿ ಪ್ರಕರಣವನ್ನು ದಾಖಲಿಸಲಾಗಿದೆ.

40 ಗಂಟೆಗಳ ಕಾಲ ನಿರಂತರವಾದ ಹೈ-ಟೆಂಪೋ ಕಾರ್ಯಾಚರಣೆಗಳ ನಂತರ ಮಾರ್ಚ್ 16ರಂದು ಕಡಲುಗಳ್ಳರ ಒಗಿ ರುಯೆನ್ ಹಡಗನ್ನು ತಡೆದು ಅದರಲ್ಲಿದ್ದ ಭಾರತೀಯ ಹಾಗೂ ಬಲ್ಗೇರಿಯಾದ ಪ್ರಜೆಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಡಗನ್ನು 2023 ಡಿಸೆಂಬರ್‍ನಲ್ಲಿ ಅಪಹರಣ ಮಾಡಲಾಗಿತ್ತು. ಭಾರತೀಯ ನೌಕಾಪಡೆಯು ಸಮುದ್ರ ಭದ್ರತಾ ಕಾರ್ಯಾಚರಣೆಗಳ ಭಾಗವಾಗಿ ಈ ಸಮುದ್ರದಲ್ಲಿ ಭಾರೀ ಕಾರ್ಯಚರಣೆಯನ್ನು ನಡೆಸಿ, ಒಗಿ ರುಯೆನ್ ಹಡಗುನ್ನು ರಕ್ಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೊಮಾಲಿಯಾದಿಂದ ಪೂರ್ವಕ್ಕೆ 260 ನಾಟಿಕಲ್ ಮೈಲಿ (ಎನ್‍ಎಂ) ದೂರದಲ್ಲಿ ಹಡಗನ್ನು ತಡೆಹಿಡಿಯಲು ಐಎನ್‍ಎಸ್ ಕೋಲ್ಕತ್ತಾಗೆ ನಿರ್ದೇಶನ ನೀಡಿತ್ತು. ಈ ಮೂಲಕ 35 ಕಡಲಗಳ್ಳರನ್ನು ಪತ್ತೆ ಮಾಡಲಾಗಿತ್ತು.

ಮಾರ್ಚ್ 15ರಂದು ಐಎನ್‍ಎಸ್ ಕೋಲ್ಕತ್ತಾದಲ್ಲಿ ಎಂವಿ ರುಯೆನ್ ಹಡಗನ್ನು ಪತ್ತೆ ಮಾಡಿ, ಅದರಲ್ಲಿದ್ದ ಜನರನ್ನು ರಕ್ಷಣೆ ಮಾಡಿದೆ. ಇದರ ಜತೆಗೆ ಈ ಹಡಗಿನ ಪತ್ತೆಗಾಗಿ ಬಳಸಿದ್ದ ಭಾರತೀಯ ಡ್ರೋನ್‍ನ್ನು ಕಡಲಗಳ್ಳರು ಹೊಡೆದುರುಳಿಸಿದರು. ಇನ್ನು ಈ ರಕ್ಷಣಾ ಕಾರ್ಯಚರಣೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಹೇಳಲಾಗಿದೆ. ಇದೀಗ ಬಂಧನವಾಗಿರುವ 35 ಕಡಲಗಳ್ಳರನ್ನು ಮುಂಬೈಗೆ ತರಲಾಗಿದೆ.

ಮೋದಿಗೆ ಕೃತಜ್ಞತೆ
ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು ಮತ್ತು ಅದರಲ್ಲಿದ್ದ ನಾಗಕರಿಕರ ಸಹಿತ ಸಿಬ್ಬಂದಿಯನ್ನು ಭಾರತೀಯ ನೌಕಾಪಡೆ ರಕ್ಷಣೆ ಮಾಡಿದೆ. ಈ ಬಗ್ಗೆ ಬಲ್ಗೇರಿಯ ದೇಶದ ಅಧ್ಯಕ್ಷ ರುಮೆನ್ ರಾದೇವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಬಲ್ಗೇರಿಯದ ಅಧ್ಯಕ್ಷ ರುಮೆನ್ ರಾದೇವ್, 7 ಬಲ್ಗೇರಿಯನ್ ನಾಗರಿಕರು ಸೇರಿದಂತೆ ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು ರುಯೆನ್ ಮತ್ತು ಅದರ ಸಿಬ್ಬಂದಿಯನ್ನು ರಕ್ಷಿಸಿದ ಭಾರತದ ನೌಕಾಪಡೆಯ ಕೆಚ್ಚೆದೆಯ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ.

RELATED ARTICLES

Latest News