ನವದೆಹಲಿ,ಮಾ.24- ಇಡಿ ಕಸ್ಟಡಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನಗರಾಡಳಿತ ಸಂಬಂಧ ತಮ್ಮ ಮೊದಲ ನಿರ್ದೇಶನ ನೀಡಿದ್ದಾರೆ ಎಂದು ಎಎಪಿ ಮೂಲಗಳು ಭಾನುವಾರ ತಿಳಿಸಿವೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂವಿದ್ದ ಅಬಕಾರಿ ನೀತಿಯ ಆರೋಪದ ಮೇಲೆ ಕೇಜ್ರಿವಾಲ್ ಅವರನ್ನು ಅವರ ಅಧಿಕೃತ ನಿವಾಸದಿಂದ ಗುರುವಾರ ಜಾರಿ ನಿರ್ದೇಶನಾಲಯ(ಇಡಿ)ವು ಬಂಧಿಸಿತ್ತು. ನ್ಯಾಯಾಲಯವ ಶ್ರುಕವಾರ ಎಎಪಿ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್‍ರನ್ನು ಮಾರ್ಚ್ 28ರವರೆಗೆ ಇಡಿ ವಶಕ್ಕೆ ಒಪ್ಪಿಸಿತು.
ಅವರು(ಕೇಜ್ರಿವಾಲ್) ಇಡಿ ಕಸ್ಟಡಿಯಿಂದಲೇ ತಮ್ಮ ಮೊದಲ ನಿರ್ದೇಶನ ನೀಡಿದ್ದಾರೆ. ಸರ್ಕಾರದ ಜಲಸಂಪನ್ಮೂಲ ಇಲಾಖೆಗೆ ಸಂಬಂಸಿದಂತೆ ಈ ನಿರ್ದೇಶನ ನೀಡಲಾಗಿದೆ. ಜಲಸಂಪನ್ಮೂಲ ಸಚಿವೆ ಆತಿಶಿ ಅವರು ಮುಂದೆ ಈ ನಿರ್ದೇಶನಗಳನ್ನು ಪ್ರಕಟಿಸುತ್ತಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಿದರೂ ಮುಖ್ಯಮಂತ್ರಿಯನ್ನಾಗಿಯೇ ಮುಂದುವರೆಸಲಾಗುವುದು ಎಂದು ಎಎಪಿ ಪ್ರತಿಪಾದಿಸಿದೆ.