Homeರಾಷ್ಟ್ರೀಯಬ್ಯಾಂಕ್‌ಗಳಿಗೆ ಪ್ರತಿ ಶನಿವಾರ ರಜೆ ಘೋಷಣೆ ಕುರಿತ ನಕಲಿ ಅಧಿಸೂಚನೆ ವೈರಲ್

ಬ್ಯಾಂಕ್‌ಗಳಿಗೆ ಪ್ರತಿ ಶನಿವಾರ ರಜೆ ಘೋಷಣೆ ಕುರಿತ ನಕಲಿ ಅಧಿಸೂಚನೆ ವೈರಲ್

ನವದೆಹಲಿ, ಅ.1- ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಇನ್ನು ಮುಂದೆ ಎಲ್ಲ ಶನಿವಾರಗಳಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೆಜೆಟ್ ಅಧಿಸೂಚನೆ ನಕಲಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ)ಯ ಫ್ಯಾಕ್ಟ್‌ ಚೆಕ್‌ ಘಟಕ, ಕೇಂದ್ರ ಹಣಕಾಸು ಸಚಿವಾಲಯದಿಂದ ಇಂತಹ ಯಾವುದೇ ಅಧಿಸೂಚನೆ ಹೊರಡಿಸಲಾಗಿಲ್ಲ ಎಂದು ತಿಳಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಇಂತಹ ಮಾಹಿತಿಯನ್ನು ನಂಬುವ ಮುನ್ನ ಅಧಿಕೃತ ಮೂಲಗಳಿಂದ ಪರಿಶೀಲಿಸುವಂತೆ ಪಿಐಬಿ ನಾಗರಿಕರಿಗೆ ಮನವಿ ಮಾಡಿದೆ.ಸೆಪ್ಟೆಂಬರ್‌ 30ರಂದು ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ ಆದೇಶ ಹೊರಡಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆದರೆ ಇದು ಸತ್ಯಕ್ಕೆ ದೂರ ಎಂದು ಕೇಂದ್ರ ಸಾರ್ವ ಜನಿಕ ಸಂಪರ್ಕ ಸಚಿವಾಲಯ ತಿಳಿಸಿದೆ. ಈ ಬಗ್ಗೆ ದೇಶಾದ್ಯಂತ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿಯನ್ನು ನೀಡಲಿದೆ ಎಂದು ತಿಳಿಸಿದೆ. ಈ ನಡುವೆ ಪಿಐಬಿ ಸಾಮಾಜಿಕ ಜಾಲತಾಣದಲ್ಲಿ ಇರುವ ಅಧಿಸೂಚನೆ ಸತ್ಯಕ್ಕೆ ದೂರ ಎಂದು ಹೇಳಿದೆ. ಬ್ಯಾಂಕ್‌ ಸಂಘಟನೆಗಳು ಇದನ್ನೇ ಪ್ರಮುಖ ಬೇಡಿಕೆಯನ್ನು ಮುಂದಿಟ್ಟು 3 ದಿನಗಳ ಮುಷ್ಕರಕ್ಕೆ ಮುಂದಾಗಿತ್ತು.

ಆಗ ಕೇಂದ್ರದ ಪ್ರತಿನಿಧಿಗಳು ಬೇಡಿಕೆ ಈಡೇರಿಕೆ ಬಗ್ಗೆ ಭರವಸೆ ನೀಡಿದ್ದರು. ಬ್ಯಾಂಕ್‌ ವೇಳಾಪಟ್ಟಿಯನ್ನು ಪರೀಕ್ಷರಣೆ ಹಾಗೂ ವೇತನ ಹೆಚ್ಚಳಕ್ಕೆ ಸಮತಿ ಸೂಚಿಸಲಾಗಿತ್ತು. ಇಂದು ಈ ವಿಷಯವನ್ನು ರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿತ್ತು.

RELATED ARTICLES
spot_img

Latest News