Friday, November 22, 2024
Homeಮನರಂಜನೆಫೈಟರ್ ಮನಮೋಹಕ, ಗೆದ್ದ ನಿರ್ಮಾಪಕ

ಫೈಟರ್ ಮನಮೋಹಕ, ಗೆದ್ದ ನಿರ್ಮಾಪಕ

ಕನ್ನಡ ಚಿತ್ರಗಳನ್ನು ನೋಡಲು ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ. ಪರಭಾಷೆ ಚಿತ್ರಗಳಿಗೆ ಕನ್ನಡಿಗರು ಮಣೆ ಹಾಕುತ್ತಾರೆ ಎಂಬೆಲ್ಲ ಆಪಾದನೆಗಳು ಆಗಾಗ ಕೇಳಿ ಬರುತ್ತವೆ. ಹೀಗೆ ಹೇಳುವವರಿಗೆ ಈ ವಾರ ಕರೆಕೊಂಡು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ ಫೈಟರ್ ಚಿತ್ರವನ್ನು ಚಿತ್ರಮಂದಿರಗಳತ್ತಿರ ಹೋಗಿ ನೋಡಿದಾಗ ಗೊತ್ತಾಗುತ್ತದೆ, ಸಿನಿಮಾ ಚೆನ್ನಾಗಿದ್ದರೆ ಹುಡುಕಿಕೊಂಡು ಬಂದು ನೋಡುತ್ತಾರೆ ಎಂದು .

ಫೈಟರ್ ಒಬ್ಬ ರೈಟರ್. ದುಷ್ಟರಿಂದ ಹುಡುಗಿಯ ರಕ್ಷಣೆ.ರೈಟರ್ ನ ಫೈಟಿಂಗ್ ನೋಡಿ ನಾಯಕಿ ಮೋಹಕ ವಿಸ್ಮಯ.ಕಥೆಯಲ್ಲಿ ನಾಯಕನ ಹೆಸರು ಮೋಹಕ್ ನಾಯಕಿ ವಿಸ್ಮಯ.ಫೈಟ್ ಅಂಡ್ ಲವ್ ಇಂದ ಶುರುವಾಗುವ ಕಥೆ ಹೇಳುವ ವಿಷಯಗಳನ್ನು ವೀಕ್ಷಕರಿಗೆ ಎಲ್ಲಿಯೂ ಬೋರ್ ಆಗದಂತೆ ಹೇಳುತ್ತಾ ವೇಗವಾಗಿ ಸಾಗುತ್ತದೆ.

ಅಪ್ರಾಪ್ತ ಸಹೋದರಿಯರನ್ನು ಕತ್ತು ಸೀಳಿ ಕೊಂದ ಹಂತಕರು

ಮೊದಲಾರ್ಧದಲ್ಲಿ ಪ್ರೀತಿ ಮತ್ತು ತಾಯಿ ಸೆಂಟಿಮೆಂಟ್ ಆವರಿಸಿಕೊಂಡಿದೆ. ಬ್ಲಡ್, ಕರೋನ ಔಷಧಿಗಳ ಮಾಫಿಯಾ ಗಳ ವಿರುದ್ಧ ನಾಯಕನ ತಾಯಿ ಜಿಲ್ಲಾಧಿಕಾರಿ ರಾಧ ಪ್ರಾಮಾಣಿಕವಾಗಿ ಹೋರಾಟ ನಡೆಸಿದಾಗ ಮಾಫಿಯಾದಿಂದಲೇ ಅಪಹರಣ. ತಾಯಿ ಎಂದರೆ ತುಂಬಾ ಇಷ್ಟ ಪಡುವ ನಾಯಕ ಹೆತ್ತವಳನ್ನು ಉಳಿಸಿಕೊಳ್ಳಲು ತಾನು ಪ್ರೀತಿಸುವ ಪ್ರೀತಿಯನ್ನು ಗುಂಡಿಕ್ಕಿ ಕೊಲ್ಲುತ್ತಾನೆ. ತಾಯಿಯ ಅಪಹರಣ ಮತ್ತು ಪ್ರೇಯಸಿ ಕೊಲೆಗೆ ಕಾರಣಗಳೇನು ಎಂಬ ಪ್ರಶ್ನೆಗೆ ದ್ವಿತೀಯಾರ್ಧದಲ್ಲಿ ಉತ್ತರ ಸಿಗುತ್ತದೆ.ಅದನ್ನು ನೀವು ಸಿನಿಮಾದಲ್ಲೇ ನೋಡಬೇಕು.

ನಿರ್ದೇಶಕ ನೂತನ್ ಉಮೇಶ್, ರೈತರ ಸಮಸ್ಯೆಗಳಿಂದ ಹಿಡಿದು ಕರೋನ ಮಾಫಿಯಾ ತನಕ ಒಂದಷ್ಟು ಅಂಶಗಳ ಮೇಲೆ ಬೆಳಕು ಚೆಲ್ಲುತ್ತಾ, ಪ್ರೇಕ್ಷಕನಿಗೆ ಲವ್, ಆಕ್ಷನ್, ಕಾಮಿಡಿ, ಸೆಂಟಿಮೆಂಟ್ ಎಲ್ಲವನ್ನು ಏಕಕಾಲದಲ್ಲಿ ಕಟ್ಟಿಕೊಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.ಚಿತ್ರದಲ್ಲಿ ಆಕ್ಷನ್ ಎಪಿಸೊಡ್ ಗಳು ಮೈನವಿರೇಳಿಸುವಂತಿವೆ.ಸಿನಿಮಾದುದ್ದಕ್ಕೂ ಸಂಭಾಷಣೆ ಗಟ್ಟಿಯಾಗಿದ್ದು ಯುವಕರಿಗೆ ಇಷ್ಟವಾಗುತ್ತದೆ. ಅದರಲ್ಲೂ ನಾಯಕಿಯ ಡೈಲಾಗ್ಗಳಿಗೆ ಥಿಯೇಟರ್ ನಲ್ಲಿ ಶಿಳ್ಳೆಗಳ ಮಳೆಯ ಸರಿಯುತ್ತದೆ‌‌. ಇನ್ನು ಗುರುಕಿರಣ್ ಸಂಗೀತ, ಶೇಖರ್ ಚಂದ್ರ ಕ್ಯಾಮೆರಾ ವರ್ಕ್ ಫೈಟರ್ ಮೆರಗನ್ನ ಹೆಚ್ಚಿಸಿದೆ.

ನಾಯಕ ವಿನೋದ್ ಪ್ರಭಾಕರ್ ಈ ಹಿಂದಿನ ಚಿತ್ರಗಳಿಗಿಂತ ಫೈಟರ್ ಕಥೆಯಲ್ಲಿ ವಿಭಿನ್ನವಾಗಿ ಕಾಣುತ್ತಾರೆ. ಡೈಲಾಗ್ ಡೆಲವರಿ, ಆಕ್ಷನ್ ಮ್ಯಾನರಿಸಂ ಇವೆಲ್ಲವೂ ಇವರಿಗೆ ಕಥೆಯಲ್ಲಿ ಪ್ಲಸ್ ಪಾಯಿಂಟ್ ಆಗಿವೆ.ನಾಯಕಿ ಲೇಖ ಚಂದ್ರ ಕೂಡ ಇಂಟರ್ವಲ್ ಬರುವವರೆಗೂ ಕಥೆಯಲ್ಲಿ ಆವರಿಸಿಕೊಂಡಿದ್ದಾರೆ‌. ಅವರು ಮಾತನಾಡುವ ಪ್ರತಿಯೊಂದು ಮಾತು ಆಕರ್ಷಕ. ಇವರಿಬ್ಬರ ಜೋಡಿ ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ.

ದೆಹಲಿಯಲ್ಲಿ ಬೈಕ್‍ನಲ್ಲಿ ಬಂದ ವ್ಯಕ್ತಿಗಳಿಂದ ಹಂಗೇರಿ ಪ್ರಜೆಯ ದರೋಡೆ

ಹಾಸ್ಯಕ್ಕಿ ಕಥೆಯಲ್ಲಿ ಒತ್ತುಕೊಡಲಾಗಿದೆ. ಕುರಿ ಪ್ರತಾಪ್ ಮತ್ತು ಗಿರಿಜಾ ಲೋಕೇಶ್ ನಡುವೆ ನಡೆಯುವ ಪ್ರಸಂಗಗಳಿಗೆ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಉಳಿದಂತೆ ನಟಿ ಪಾವನ, ಶರತ್ ಲೋಹಿತಾಶ್ವ, ರಾಜೇಶ್ ನಟರಂಗ ಸೇರಿದಂತೆ ಎಲ್ಲಾ ನಟರಿಗೂ ಒಳ್ಳೆ ಪಾತ್ರಗಳು ಸಿಕ್ಕಿವೆ. ಪ್ರತಿಯೊಂದು ದೃಶ್ಯವು ಶ್ರೀಮಂತಿಕೆಯಿಂದ ಕೂಡೊ ಅದ್ದೂರಿಯಾಗಿ ಮೂಡಿಬರಲು ಕಾರಣವಾಗಿರುವುದು ನಿರ್ಮಾಪಕ ಕಟ್ಟಿಗೆನಹಳ್ಳಿ ಸೋಮಶೇಖರ್. ಸದ್ಯ ರಾಜ್ಯದ್ಯಂತ ಅದ್ದೂರಿಯಾಗಿ ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿರುವ ಫೈಟರ್ ಈಗಾಗಲೇ ಇವರಿಗೆ ಗೆಲುವನ್ನು ತಂದುಕೊಟ್ಟು ಜೇಬು ತುಂಬಿಸಿದೆ. ಮತ್ತೊಂದು ಪ್ರಮುಖ ವಿಷಯ ಎಂದರೆ ಚಿತ್ರದ ಕೊನೆಯಲ್ಲಿ ಎರಡನೇ ಭಾಗದ ಸುಡಿ ವನ್ನು ಕೊಟ್ಟಿದ್ದಾರೆ. ಫೈಟರನ್ನು ಕಣ್ತುಂಬಿಕೊಂಡ ಪ್ರೇಕ್ಷಕ ಈ ಗೆಲುವು ಬೇರೆ ಚಿತ್ರಗಳಿಗೂ ನೆರವಾಗಲಿದೆ ಎನ್ನುತ್ತಾನೆ

RELATED ARTICLES

Latest News