ವಾಷಿಂಗ್ಟನ್,ಮಾ.26- ಅಮೆರಿಕದ ಬಾಲ್ಟಿಮೋರ್ ಪ್ರಮುಖ ಸೇತುವೆಯಾದ ಫ್ರಾನ್ಸಿಸ್ ಸ್ಕಾಟರ್ ಕೀ ಬ್ರಿಡ್ಜ್ ಸರಕು ಸಾಗಣೆ ಹಡಗೊಂದು ಡಿಕ್ಕಿ ಹೊಡೆದ ಪರಿಣಾಮ ಕುಸಿದುಬಿದ್ದಿದೆ. ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರವು ಘಟನೆಯನ್ನು ಖಚಿತಪಡಿಸಿದ್ದು, ಸಂಚಾರ ಮಾರ್ಗವನ್ನು ಪಲ್ಲಟಿಸಲಾಗಿದೆ ಎಂದು ತಿಳಿಸಿದೆ.
ಅಮೆರಿಕ ಕರಾವಳಿ ಕಾವಲುಪಡೆ ಸಹ ಈ ಅಪಘಾತವನ್ನು ದೃಢಪಡಿಸಿದೆ. ಆದರೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಸೇತುವೆ ಭಾಗಶಃ ಕುಸಿದಿದ್ದು ಕಾರ್ಮಿಕರು ನೀರಿಗೆ ಬಿದ್ದಿರು ಸಾಧ್ಯತೆಯನ್ನು ಗುರುತಿಸಲಾಗಿದೆ ಎಂದು ಬ ವ ಬಾಲ್ಟಿಮೋರ್ ಪೊಲೀಸರು ತಿಳಿಸಿರುವುದಾಗಿ ದಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಹಡಗು ಡಿಕ್ಕಿಯಾಗಿ ಸೇತುವೆ ಕುಸಿಯುತ್ತಿರುವುದನ್ನು ಸಾಮಾಜಿಕ ಮಾಧ್ಯಮದ ವಿಡಿಯೋ ತುಣುಕುಗಳು ತೋರಿಸಿವೆ. ಮಾಧ್ಯಮ ವರದಿಗಳ ಪ್ರಕಾರ ಸ್ಥಳೀಯ ಕಾಲಮಾನ ನಸುಕಿನ ಜಾವ 1.30ರ ಸುಮಾರಿಗೆ ವಾಹನಗಳು ಸೇತುವೆಯನ್ನು ದಾಟುತ್ತಿದ್ದಾಗ ಕುಸಿದು ಬೆಂಕಿ ಹೊತ್ತಿಕೊಂಡು ಉರಿಯಿತು.
ಹಡಗು ಡಿಕ್ಕಿ ಹೊಡೆದು ಸೇತುವೆ ಕುಸಿದ ಬಳಿಕ ಹಲವಾರು ಜನರು ಪಟಾಪ್‍ಸ್ಕೋ ನದಿಗೆ ಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 1.6 ಮೈಲಿಯಷ್ಟು ಉದ್ದದ ಈ ಸೇತುವೆ ಬಾಲ್ಟಿಮೇರ್ ಅನ್ನು ಸುತ್ತುವರೆದಿರುವ ಮೇರಿ ಲ್ಯಾಂಡ್‍ನ ಇಂಟರ್‍ಸ ಟೇಟ್ 695 ಪ್ರದೇಶದಲ್ಲಿದೆ. ಇದು ಬಾಲ್ಟಿಮೋರ್‍ನ ಅತಿ ಉದ್ದದ ಮತ್ತು ಜಗತ್ತಿನ ಮೂರನೇ ಅತಿ ಉದ್ದದ ಟ್ರಪ್ ಸೇತುವೆ ಎಂದು ಹೇಳಲಾಗಿದೆ.