Friday, December 19, 2025
Homeರಾಷ್ಟ್ರೀಯ16 ವರ್ಷ ಹಿಂದಿನ ಕೊಲೆ ಪ್ರಕರಣದಲ್ಲಿ ದಂಪತಿ ಅರೆಸ್ಟ್

16 ವರ್ಷ ಹಿಂದಿನ ಕೊಲೆ ಪ್ರಕರಣದಲ್ಲಿ ದಂಪತಿ ಅರೆಸ್ಟ್

Cold Case Closure: Duo Nabbed for 16-Year-Old Nalasopara Murder

ಪಾಲ್ಘರ್‌, ಡಿ.19- ಕಳೆದ 16 ವರ್ಷಗಳ ಹಿಂದೆ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ನಡೆದಿದ್ದ ರಿಯಲ್‌ ಎಸ್ಟೇಟ್‌ ಏಜೆಂಟ್‌ ಹತ್ಯೆಯಲ್ಲಿ ಭಾಗಿಯಾಗಿದ್ದ ದಂಪತಿಯನ್ನು ಮಧ್ಯಪ್ರದೇಶದ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಧರ್ಮೇಂದ್ರ ರಾಮಶಂಕರ್‌ ಸೋನಿ (54) ಮತ್ತು ಅವರ ಪತ್ನಿ ಕಿರಣ್‌ ಧರ್ಮೇಂದ್ರ ಸೋನಿ (50) ಬಂಧಿತ ಆರೋಪಿಗಲಾಗಿದ್ದು ಇವರನ್ನು ಮಧ್ಯಪ್ರದೇಶದ ಇಂದೋರ್‌ನಲ್ಲಿ ವಶಕ್ಕೆ ಪಡೆಯಲಾಗಿದೆ.

ಹಣಕಾಸಿನ ವಿವಾದದಲ್ಲಿ ಕಳೆದ ಏಪ್ರಿಲ್‌ 2009 ರಲ್ಲಿ ಮುಂಬೈ ಹೊರವಲಯದಲ್ಲಿರುವ ನಲಸೋಪರ ಪೂರ್ವದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿತ್ತು. ಪೊಲೀಸರು ತನಿಖೆ ವೇಳೆ ಸೋನಿ ದಂಪತಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದ್ದರೂ, ಉಳಿದ ಮೂವರು ತಲೆಮರೆಸಿಕೊಂಡಿದ್ದರು.

ವಿರಾರ್‌ ಪೊಲೀಸರ ಅಪರಾಧ ವಿಭಾಗದ ಸೆಲ್‌ -3 ಇತ್ತೀಚೆಗೆ ಪ್ರಕರಣವನ್ನು ಪುನಃ ತೆರೆದು, ಮಧ್ಯಪ್ರದೇಶದ ಇಂದೋರ್‌ ಜಿಲ್ಲೆಯ ಮ್ಹೋವ್‌ ಗ್ರಾಮಕ್ಕೆ ದಂಪತಿಯನ್ನು ಪತ್ತೆಹಚ್ಚಿದೆ ಎಂದು ಇನ್‌್ಸಪೆಕ್ಟರ್‌ ಶಾಹುರಾಜ್‌ ರಣವ್ರೆ ತಿಳಿಸಿದ್ದಾರೆ.

ದಂಪತಿಯನ್ನು ನಲಸೋಪಾರಕ್ಕೆ ಕರೆತರಲಾಗಿದ್ದು, ಸ್ಥಳೀಯ ನ್ಯಾಯಾಲಯವು ಅವರನ್ನು ಡಿ. 22 ರವರೆಗೆ ಪೊಲೀಸ್‌‍ ಕಸ್ಟಡಿಗೆ ನೀಡಿದೆ ಎಂದು ಅವರು ಹೇಳಿದರು, ನಾಲ್ಕನೇ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ.

RELATED ARTICLES

Latest News