ಬೆಂಗಳೂರು, ಡಿ.19- ರಾಜ್ಯಾದ್ಯಂತ ಜೈಲುಗಳಲ್ಲಿ ಅಕ್ರಮ ಚಟುವಟಿಕೆ ವಿರುದ್ಧ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಹಲವಾರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ (ಕಾರಾಗೃಹ) ಅಲೋಕ್ ಕುಮಾರ್ ತಿಳಿಸಿದ್ದಾರೆ.
ಕಳೆದ 36 ಗಂಟೆಗಳಲ್ಲಿ, ಕಲಬುರಗಿ, ಮಂಗಳೂರು ಮತ್ತು ಶಿವಮೊಗ್ಗ ಸೇರಿದಂತೆ ಜೈಲುಗಳಲ್ಲಿ ಶೋಧ ಕಾರ್ಯಾಚರಣೆಯ ನಂತರ ಮೊಬೈಲ್ ಫೋನ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೈಲು ಆವರಣದೊಳಗೆ ಅಕ್ರಮವಾಗಿ ವಸ್ತುಗಳ ಸಾಗಣೆಯ ವಿರುದ್ಧ ನಮ ಶೋಧ ಕಾರ್ಯಾಚರಣೆಗಳು ರಾಜ್ಯಾದ್ಯಂತ ಮುಂದುವರೆದಿದೆ. ಕಳೆದ 36 ಗಂಟೆಗಳಲ್ಲಿ, ಕಲಬುರಗಿಯ ಕಾರಾಗೃಹದಲ್ಲಿ 10 ಮೊಬೈಲ್ ಫೋನ್‌ಗಳು, ನಾಲ್ಕು ಸಿಮ್ ಕಾರ್ಡ್‌ಗಳು, ಮಂಗಳೂರಿನ ಕಾರಾಗೃಹದಲ್ಲಿ ಆರು ಫೋನ್‌ಗಳು, ಬಳ್ಳಾರಿಯಲ್ಲಿ ನಾಲ್ಕು ಫೋನ್‌ಗಳು, ಶಿವಮೊಗ್ಗ ಜೈಲುಗಳಲ್ಲಿ ಮೂರು ಫೋನ್‌ಗಳು ಮತ್ತು ನಾಲ್ಕು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಅವರು ಎಕ್‌್ಸ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಇತಿಹಾಸದಲೇ ಮೊದಲ ಭಾರಿಗೆ ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ 30 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಶೋಧನಾ ತಂಡದ ನೇತೃತ್ವ ವಹಿಸಿದ್ದ ಎಸ್‌ಪಿ ಅಂಶು ಕುಮಾರ್ ಮತ್ತು ಜೈಲರ್ ಶಿವಕುಮಾರ್ ಅವರು ಮಾಡಿದ ಉತ್ತಮ ಕೆಲಸವನ್ನು ಶ್ಲಾಘಿಸಿ, ಶೋಧನಾ ತಂಡಕ್ಕೆ 30 ಸಾವಿರ ಬಹುಮಾನ ಘೋಷಿಸಿರುವುದಾಗಿ ಅವರು ಹೇಳಿದರು.
ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಬಡ್ತಿ ನೀಡಿ ಇತ್ತೀಚೆಗೆ ಕಾರಾಗೃಹ ಡಿಜಿಪಿಯಾಗಿ ಅಲೋಕ್ ಕುಮಾರ್ ಅವರನ್ನು ಸರ್ಕಾರ ನೇಮಿಸಿತ್ತು. ಅಧಿಕಾರ ವಹಿಸಿಕೊಂಡ ಕೆಲವೇ ದಿನದಲ್ಲಿ ರಾಜ್ಯಾದ್ಯಂತ ಕಾರಾಗೃಹಗಳೊಳಗಿನ ಕಳ್ಳಸಾಗಣೆ ತಡೆಗೆ ವ್ಯಾಪಕ ಕ್ರಮ ಕೈಗೊಂಡಿದ್ದಾರೆ.
ಮಾದಕ ವಸ್ತುಗಳು, ಮೊಬೈಲ್‌ಗಳು, ಸಿಮ್‌ಗಳು, ಚಾಕುಗಳು ಮತ್ತು ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಹಲವಾರು ಅಕ್ರಮ ಚಟುವಟಿಕೆಗೆ ಈಗಾಗಲೆ ಬ್ರೇಕ್‌ಬಿದ್ದಿದೆ ಎಂದು ಅಧಿಕಾರಿಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ.
