ಲಖ್ನೋ,ಮಾ.29- ರಾಜಕಾರಣಿಯಾಗಿ ಪರಿವರ್ತತರಾಗಿದ್ದ ಗ್ಯಾಂಗಸ್ಟರ್ ಮುಖ್ತರ್ ಅನ್ಸಾರಿ ಬಂಡಾದ ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನರಾದ ಒಂದು ದಿನದ ಬಳಿಕ ಉತ್ತರಪ್ರದೇಶದ ಹಲವು ಜಿಲ್ಲೆಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ಕಟ್ಟೆಚ್ಚರದಲ್ಲಿರಸಲಾಗಿದೆ.
ರಾಜ್ಯಾದ್ಯಂತ ಸೆಷನ್ 144 ಅಡಿ ನಿಷೇಧಾಜ್ಞೆ ವಿಧಿಸಲಾಗಿದ್ದು, ಬಂಡಾ, ಮಾಉ, ಫಾಜಿಪುರ್ ಮತ್ತು ವಾರಾಣಾಸಿಯಲ್ಲಿ ಸ್ಥಳೀಯ ಪೊಲೀಸರೊಂದಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಉತ್ತರಪ್ರದೇಶ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್‍ಕುಮಾರ್ ತಿಳಿಸಿದರು.
ಫಾಜಿಪುರದ ಅನ್ಸಾರಿ ಅವರ ಮನೆಯ ಮುಂದೆ ಜನರು ಗುಂಪುಗೂಡಲಾರಂಭಿಸಿದ್ದರು ಮತ್ತು ಮನೆಯ ಸುತ್ತ ಭಾರೀ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಬಂಡಾ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರ ತಂಡವು ಮರಣೋತ್ತರ ಪರೀಕ್ಷೆ ನಡೆಸಲಿದೆ ಮತ್ತು ಇಡೀ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗುವುದು ಎಂದು ಪೊಲೀಸ್ ಕೇಂದ್ರಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
63 ವರ್ಷ ವಯಸ್ಸಿನ ಅನ್ಸಾರಿಯವರನ್ನು ಜಿಲ್ಲಾ ಕಾರಾಗೃಹದಿಂದ ಬಂಡಾದಲ್ಲಿನ ರಾಣಿ ದುರ್ಗಾವ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಗುರುವಾರ ಸಂಜೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕರೆತರಲಾಗಿತ್ತು. ಅವರು ಆಸ್ಪತ್ರೆಯಲ್ಲಿ ಹೃದಯಸ್ತಂಭನದಿಂದ ನಿಧನರಾದರು ಎಂದು ಕಾಲೇಜು ಪ್ರಾಂಶುಪಾಲ ಸುನೀಲ್ ಕೌಶಲ್ ಹೇಳಿದರು.
ಪುತ್ರ ಉಮರ್ ಅನ್ಸಾರಿ ಸೇರಿದಂತೆ ಅನ್ಸಾರಿ ಕುಟುಂಬದ ಸದಸ್ಯರು ಇಂದು ಮುಂಜಾನೆ ಆಸ್ಪತ್ರೆಗೆ ತಲುಪಿದರು. ಜೈಲಿನಲ್ಲಿ ಅನ್ಸಾರಿಗೆ ನಿಧಾನ ವಿಷಪ್ರಾಶನ ಮಾಡಲಾಗಿದೆ ಎಂದು ಉಮರ್ ಅನ್ಸಾರಿ ಆರೋಪಿಸಿದ್ದಾರೆ. ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ.