Friday, November 22, 2024
Homeರಾಷ್ಟ್ರೀಯ | Nationalಸಂಸತ್ ಚುನಾವಣೆ ಬಹಿಷ್ಕರಿಸಿದ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್

ಸಂಸತ್ ಚುನಾವಣೆ ಬಹಿಷ್ಕರಿಸಿದ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್

ಕೋಹಿಮಾ,ಮಾ.30-ಪ್ರತ್ಯೇಕ ರಾಜ್ಯದ ಬೇಡಿಕೆ ಈಡೇರಿಸುವವರೆಗೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ ಬೆದರಿಕೆ ಹಾಕಿದೆ.

ನಾಗಾಲ್ಯಾಂಡ್‍ನ ಆರು ಜಿಲ್ಲೆಗಳನ್ನು ಒಳಗೊಂಡಿರುವ ಪ್ರತ್ಯೇಕ ಆಡಳಿತ ಅಥವಾ ರಾಜ್ಯಕ್ಕೆ ನಮ್ಮ ಒತ್ತಾಯವಿದೆ. ಕೇಂದ್ರದಿಂದ ತನ್ನ ಬೇಡಿಕೆಯನ್ನು ಈಡೇರಿಸುವವರೆಗೆ ನಾಗಾಲ್ಯಾಂಡ್‍ನ ಏಕೈಕ ಲೋಕಸಭಾ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅದು ಹೇಳಿದೆ.

ತುಯೆನ್ಸಾಂಗ್‍ನಲ್ಲಿ 20 ಶಾಸಕರು ಮತ್ತು ವಿವಿಧ ಸಂಘಟನೆಗಳೊಂದಿಗೆ ನಡೆದ ಸಮನ್ವಯ ಸಭೆಯ ನಂತರ ಸಂಘಟನೆ ನಾಯಕರು ಏಪ್ರಿಲ್ 19 ರ ಸಂಸತ್ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದರು.20 ಶಾಸಕರನ್ನು ಒಳಗೊಂಡ ಪೂರ್ವ ನಾಗಾಲ್ಯಾಂಡ್ ಶಾಸಕರ ಒಕ್ಕೂಟವು ಈ ಹಿಂದೆ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸಂಘಟನೆಗ ಮನವಿ ಮಾಡಿತ್ತು.

ಸಾರ್ವಜನಿಕ ತುರ್ತುಸ್ಥಿತಿ ಸಮಯದಲ್ಲಿ, ಪ್ರದೇಶದ ಏಳು ನಾಗಾ ಬುಡಕಟ್ಟುಗಳ ಮುಖಂಡರುಗಳು ಯಾವುದೇ ಚುನಾವಣಾ ಪ್ರಚಾರಕ್ಕೆ ಅನುಮತಿ ನೀಡುತ್ತಿಲ್ಲ.

ಆರು ಜಿಲ್ಲೆಗಳ ಪ್ರಮುಖ ನಾಗಾ ಸಂಸ್ಥೆ ಮತ್ತು ಅದರ ಸಂಬಂ„ತ ಸಂಘಟನೆಗಳು, ಅದರ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಬೆಂಬಲಿಸಿ, ಕಳೆದ ವರ್ಷದ (ಫೆಬ್ರವರಿ 27) ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಕರೆ ನೀಡಿದ್ದವು ಆದರೆ ನಂತರ ಕೇಂದ್ರ ಗೃಹ ಸಚಿವ ಅಮಿತ್ ಅವರ ಭರವಸೆಯ ನಂತರ ಅದನ್ನು ಹಿಂತೆಗೆದುಕೊಂಡಿದ್ದವು.

ಇವರ ಬೇಡಿಕೆ ಈಡೇರಿಕೆಗೆ ಸ್ಪಂದಿಸಿದ ಕೇಂದ್ರ ಗೃಹ ಸಚಿವಾಲಯ ಕಳೆದ ವರ್ಷ ಮೂರು ಸದಸ್ಯರ ಸಮಿತಿಯನ್ನು ರಚಿಸಿದ್ದು, ಈಶಾನ್ಯ ಸಲಹೆಗಾರ ಎ.ಕೆ. ಮಿಶ್ರಾ ಅವರ ಬೇಡಿಕೆಯನ್ನು ಅಧ್ಯಯನ ಮಾಡಲು, ಮತ್ತು ಸಮಿತಿಯು ನಾಗಾಲ್ಯಾಂಡ್‍ಗೆ ಹಲವಾರು ಬಾರಿ ಭೇಟಿ ನೀಡಿ ಎಲ್ಲಾ ಕಡೆಯೊಂದಿಗೆ ಮಾತುಕತೆ ನಡೆಸಿತು.

ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಇತ್ತೀಚೆಗೆ ರಾಜ್ಯ ಸರ್ಕಾರವು ಈಗಾಗಲೇ ಕೇಂದ್ರಕ್ಕೆ ಶಿಫಾರಸು ಮಾಡಿದೆ, ಪೂರ್ವ ಪ್ರದೇಶಕ್ಕೆ ಸೇರಿದ ಜನರಿಗೆ ಸ್ವಾಯತ್ತ ಪ್ರದೇಶವನ್ನು ಸ್ಥಾಪಿಸಬೇಕು ಎಂದು ಹೇಳಿದ್ದರು.

RELATED ARTICLES

Latest News