ಬೆಂಗಳೂರು,ಡಿ.19-ನಗರದ ಚಿನ್ನಸ್ವಾಮಿ ಕ್ರೆಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಪುನರಾರಂಭಿಸಲು ಅಂತಿಮವಾಗಿ ಗ್ರೀನ್ ಸಿಗ್ನಲ್ ದೊರೆತಿದೆ. ಆರ್‌ಸಿಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದ ಘಟನೆಯ ನಂತರ ಕ್ರೀಡಾಂಗಣದಲ್ಲಿ ಕ್ರೆಕೆಟ್ ಪಂದ್ಯಾವಳಿಗಳನ್ನು ಆಯೋಜಿಸುವುದಕ್ಕೆ ಅನುಮತಿ ನಿರಾಕರಿಸಲಾಗಿತ್ತು.ಇದೀಗ ನಗರ ಪೊಲೀಸರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಕಟ್ಟುನಿಟ್ಟಾದ 17 ಅಂಶಗಳ ಮಾರ್ಗಸೂಚಿಯನ್ನು ಸಿದ್ದಪಡಿಸಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಲು ಸಜ್ಜಾಗಿದ್ದಾರೆ.
ಗೃಹ ಇಲಾಖೆ ಸಿದ್ದ ಪಡಿಸಿರುವ ಷರತ್ತುಗಳ ಕುರಿತು ಕೆಎಸ್‌ಸಿಎ ಪದಾಧಿಕಾರಿಗಳು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.ನಗರ ಪೊಲೀಸ್ ಆಯುಕ್ತರು ಸಮಿತಿ ವರದಿಯ ಶಿಫಾರಸ್ಸುಗಳನ್ನು ಆಧರಿಸಿ ಕಾಲ್ತುಳಿತದಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು 17 ಮಾರ್ಗಸೂಚಿಗಳನ್ನು ಸಿದ್ದಪಡಿಸಿದ್ದಾರೆ.ಕೆಎಸ್‌ಸಿಎ ಈ ಷರತ್ತುಗಳನ್ನು ಈಡೇರಿಸಿದ ತಕ್ಷಣವೇ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಲಾಗುGreen signal for cricket tournament at Chinnaswamy Stadiumತ್ತದೆ.
ಮಾರ್ಗಸೂಚಿಯಲ್ಲಿ ಏನಿದೆ?:
*33 ಸಾವಿರ ಸಾಮರ್ಥ್ಯದ ಕ್ರೆಡಾಂಗಣದ ಸುತ್ತ ಪಾರ್ಕಿಂಗ್ ಪಿಕ್ ಅಂಡ್ ಡ್ರಾಪ್ ಗೆ ವ್ಯವಸ್ಥೆ ಮಾಡಬೇಕು.
- ಪ್ರವೇಶ ದ್ವಾರಗಳು ಟ್ ಪಾತ್ ಗಳ ಮೇಲೆಯೇ ಇರೋದ್ರಿಂದ ಪ್ರೀಕ್ಷಕರು ಕ್ಯೂ ನಿಲ್ಲುವುದಕ್ಕೆ ಕೆಎಸ್‌ಸಿಎ ಸ್ವತ್ತಿನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು.
- ಕಿರಿದಾದ ಗೇಟ್ ಗಳನ್ನ ಕನಿಷ್ಠ 6 ಅಡಿ ಅಗಲ, ಉಬ್ಬು ತಗ್ಗು, ಮೆಟ್ಟಿಲುಗಳನ್ನ ಸರಿಪಡಿಸಿ, ಎಂಟ್ರಿ ಎಕ್ಸಿಟ್ ಸುಲಭಗೊಳಿಸಬೇಕು.
- ಅಂತರಾಷ್ಟ್ರೀಯ ಪಂದ್ಯಾವಳಿಗಳ ವೇಳೆ ಮಹಿಳೆಯರು, ಮಕ್ಕಳ ಪ್ರವೇಶ ನಿರ್ಗಮನಕ್ಕೆ ಪ್ರತ್ಯೇಕ ವ್ಯಸ್ಥೆ ಮಾಡಬೇಕು.
- ತುರ್ತು ಪರಿಸ್ಥಿತಿ ನಿಯಮಗಳಂತೆ ಆಂಬ್ಯುಲ್ಸೆ್, ವೈದ್ಯಕೀಯ, ಆಂಬ್ಯುಲ್ಸೆ್ ಗೆ ಪ್ರತ್ಯೇಕ ಮಾರ್ಗ, ಮೆಡಿಕಲ್ ಎಮೆರ್ಜೆನ್ಸಿ ತಂಡಗಳ ಶಾಶ್ವತ ವ್ಯವಸ್ಥೆ ಮಾಡಬೇಕು.
- ಅಗ್ನಿಶಾಮಕ ದಳ ವಿದ್ಯುತ್ ಇಲಾಖೆಯಿಂದ ಆಡಿಟ್ ಮಾಡಿಸಿ ವರದಿ ಪಡೆಯಬೇಕು.
- ಸುರಕ್ಷತೆ ದೃಷ್ಟಿಯಿಂದ ಯೂನಿಕ್ ಐಡಿ ಚೆಕಿಂಗ್, ಬಾಂಬ್ ನಿಷ್ಕ್ರೀಯ ದಳ, ಮೆಟಲ್ ಡಿಟೆಕ್ಟರ್ ಅಳವಡಿಸಿ ನುರಿತ ಸಿಬ್ಬಂದಿ ತರಬೇತಿ ಸಿಬ್ಬಂದಿ ನೇಮಕ ಮಾಡಬೇಕು.
- ಆಟಗಾರರಿಗೆ ಪ್ರತ್ಯೇಕವಾಗಿ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನ ಕಾಯ್ದಿರಿಸಬೇಕು.
- ತುರ್ತು ಪರಿಸ್ಥಿತಿ ವೇಳೆ ಸಾರ್ವಜನಿಕರಿಗೆ ಸೇಪ್ಟಿ ಪಾಯಿಂಟ್, ಸೇ್ ಎಕ್ಸಿಟ್ ಗೆ ಅಂತರಾಷ್ಟ್ರೀಯ ಮಾನದಂಡಗಳ ಯೋಜನೆ ತಯಾರಿಸಬೇಕು.
- ಪ್ರವೇಶ ದ್ವಾರಗಳ ಬಳಿ ಬ್ಯಾಗೇಜ್ ಸ್ಕ್ಯಾನರ್ ಗಳ ಅಳವಡಿಸಿ ಸಿಸಿಟಿವಿ ಕಣ್ಗಾವಲಿನಲ್ಲಿ ದೀರ್ಘಾವಧಿ ಸ್ಟೋರೆಜ್ ವ್ಯವಸ್ಥೆ ಮಾಡಬೇಕು.
*ಕೆಲಸಗಾರರು, ಸೆಕ್ಯೂರಿಟಿ ಗಾರ್ಡ್, ಮಳಿಗೆ ಇಡುವವರ ಬಗ್ಗೆ ಪೊಲೀಸ್ ವೆರಿಫಿಕೇಷನ್ ಸರ್ಟಿಫಿಕೇಟ್ ಜೊತೆ ಸೆಕ್ಯೂರಿಟಿ ಏಜೆನ್ಸಿಗಳ ಲೈಸ್ಸೆ್ ಪಡೆಯಬೇಕು. - ಪಂದ್ಯದ ವೇಳೆ ಒಳಗಡೆ ಮಾರಾಟ ಮಾಡುವ ತಿಂಡಿ, ತಿನಿಸುಗಳ ಪರಿಶೀಲನೆಗೆ ನಿರ್ದಿಷ್ಟ ಮಾನದಂಡ ನಿಗದಿಪಡಿಸಬೇಕು.
- ಸಾರ್ವಜನಿಕ ಸಾರಿಗೆ ಮೂಲಕ ಬರುವ ಪ್ರೀಕ್ಷಕರ ಪ್ರವೇಶ ಮತ್ತು ನಿರ್ಗಮನಕ್ಕೆ ಸರಿಯಾದ ವ್ಯವಸ್ಥೆ ಮಾಡಬೇಕು.
- ಅಂತರಾಷ್ಟ್ರೀಯ ಗುಣಮಟ್ಟದ ಗುಂಪು ನಿರ್ವಹಣೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಬೇಕು.
- ಪ್ರೀಕ್ಷಕರ ಪ್ರವೇಶ ಸಂಖ್ಯೆ ನಿಖರತೆಗಾಗಿ ವ್ಯವಸ್ಥೆ ಮಾಡಬೇಕು.
- ಟಿಕೆಟ್ ವಿಚಾರಣೆ, ಮಾರಾಟ, ವೇಟಿಂಗ್ ಮಾಡುವರಿಗೆ ಪ್ರತ್ಯೇಕ ಸ್ಥಳಗಳನ್ನ ವ್ಯವಸ್ಥೆ ಮಾಡಬೇಕು ಹಾಗೂ ಇನ್ನಿತರ ಮಾರ್ಗಸೂಚಿಗಳನ್ನು ಸಿದ್ದಪಡಿಸಲಾಗಿದೆ.
