Homeಜಿಲ್ಲಾ ಸುದ್ದಿಗಳುನಿಲ್ಲಿಸಿದ್ದ ಜಾಗದಲ್ಲೇ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಎರಡು ಎಲೆಕ್ಟ್ರಿಕ್‌ ಸ್ಕೂಟರ್‌ಗಳು

ನಿಲ್ಲಿಸಿದ್ದ ಜಾಗದಲ್ಲೇ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಎರಡು ಎಲೆಕ್ಟ್ರಿಕ್‌ ಸ್ಕೂಟರ್‌ಗಳು

ಚಿಕ್ಕಮಗಳೂರು,ಅ.16-ನಿಲ್ಲಿಸಿದ್ದ ಜಾಗದಲ್ಲೇ ಎರಡು ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಏಕಾಏಕಿ ಹೊತ್ತಿ ಉರಿದು ಸಂಪೂರ್ಣ ಭಸವಾಗಿರುವ ಆಘಾತಕಾರಿ ಘಟನೆ ನಡೆದಿದೆ.ನಗರದ ಕೋಟೆ ಬಡಾವಣೆಯ ಚೆನ್ನಾಪುರ ರಸ್ತೆಯಲ್ಲಿರುವ ಮನೆಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಬೈಕ್‌ಗಳು ಬೆಂಕಿಗಾಹುತಿಯಾಗಿವೆ.

ಸ್ಥಳೀಯ ನಿವಾಸಿ ಚಂದ್ರಶೇಖರ್‌ ಎಂಬುವರು ಆರು ತಿಂಗಳ ಹಿಂದೆಯಷ್ಟೇ ಈ ಎಲೆಕ್ಟ್ರಿಕ್‌ ಬೈಕ್‌ ಖರೀದಿಸಿದ್ದರು. ಎಂದಿನಂತೆ ರಾತ್ರಿ ಮನೆಯ ಆವರಣದಲ್ಲಿ ಎರಡೂ ವಾಹನಗಳನ್ನು ಪಾರ್ಕ್‌ ಮಾಡಲಾಗಿತ್ತು.

ಆದರೆ ತಡರಾತ್ರಿ ಭಾರೀ ಸ್ಪೋಟದ ಶಬ್ದ ಕೇಳಿಬಂದಿದ್ದು, ನೋಡನೋಡುತ್ತಿದ್ದಂತೆ ಬೈಕ್‌ಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆ ವ್ಯಾಪಿಸಿದ್ದು, ಎರಡೂ ಬೈಕ್‌ಗಳು ಸುಟ್ಟು ಕರಕಲಾಗಿವೆ.ಬೆಂಕಿಯ ತೀವ್ರತೆಗೆ ವಾಹನಗಳು ಸಂಪೂರ್ಣ ಸುಟ್ಟು ಹೋಗಿರುವುದಲ್ಲದೆ, ಪಕ್ಕದಲ್ಲೇ ಇದ್ದ ಮನೆಯ ಗೋಡೆ ಹಾಗೂ ಕಾಂಪೌಂಡ್‌ಗೂ ಹಾನಿಯಾಗಿದೆ.

ನಗರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು. ಬೆಂಕಿ ಕಾಣಿಸಿಕೊಳ್ಳಲು ಬ್ಯಾಟರಿ ಸ್ಫೋಟ ಅಥವಾ ಶಾರ್ಟ್‌ ಸರ್ಕ್ಯೂಟ್‌ ಕಾರಣವೇ ಎಂಬ ಶಂಕೆ ವ್ಯಕ್ತವಾಗಿದೆ. ನಗರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
spot_img

Latest News