Homeಅಂತಾರಾಷ್ಟ್ರೀಯರಷ್ಯಾ–ಉಕ್ರೇನ್‌ ನಡುವೆ ಅ.27ರಿಂದ ಸ್ಥಳೀಯ ಕದನ ವಿರಾಮ..?

ರಷ್ಯಾ–ಉಕ್ರೇನ್‌ ನಡುವೆ ಅ.27ರಿಂದ ಸ್ಥಳೀಯ ಕದನ ವಿರಾಮ..?

ವಾಷಿಂಗ್ಟನ್‌, ಅ.24- ಅಂತೂ ಇಂತೂ ರಷ್ಯಾ–ಉಕ್ರೇನ್‌ ನಡುವೆ ಕದನ ವಿರಾಮ ಘೋಷಣೆಯಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್‌ ನೇತೃತ್ವದ ಮಾನವೀಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಉಕ್ರೇನ್‌ನ ಉನ್ನತ ಸಮಾಲೋಚಕರು ತಡರಾತ್ರಿ ರಷ್ಯಾದೊಂದಿಗೆ ಸ್ಥಳೀಯ ಕದನ ವಿರಾಮವು ಅಕ್ಟೋಬರ್‌ 27ರಂದು ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆ ಪ್ರಾರಂಭವಾಗುವ ಎರಡು ದಿನಗಳ ಮೊದಲು ಆರಂಭವಾಗುವ ಈ ಕದನ ವಿರಾಮವು ಹಲವಾರು ದಿನಗಳವರೆಗೆ ಮುಂದುವರಿಯಲಿದೆ ಎಂದು ಅವರು ಹೇಳಿದರು. ಉಕ್ರೇನಿಯನ್‌, ರಷ್ಯನ್‌ ಮತ್ತು ಅಮೆರಿಕದ ಸಮಾಲೋಚಕರು ದಕ್ಷಿಣ ಉಕ್ರೇನ್‌ನ ಯುದ್ಧಪೀಡಿತ ಪ್ರದೇಶವಾದ ಖೇರ್ಸನ್‌ನಲ್ಲಿರುವ ರಷ್ಯಾ ಆಕ್ರಮಿತ ಪಟ್ಟಣವಾದ ಒಲೆಶ್ಕಿಯಲ್ಲಿ ಮಾನವೀಯ ನೆರವು ನೀಡಲು ಈ ಒಪ್ಪಂದ ಮಾಡಿಕೊಂಡಿದ್ದಾರೆ.

ಉಕ್ರೇನ್‌ನ ಒಂಬುಡ್ಸ್‌ಮನ್‌ ಹಾಗೂ ಮಾತುಕತೆಯಲ್ಲಿ ಆ ದೇಶದ ಮುಖ್ಯ ಸಮಾಲೋಚಕರಾಗಿರುವ ಡಿಮಿಟ್ರೊ ಲುಬಿನೆಟ್ಸ್‌, ಕಾರ್ಯಾಚರಣೆಗೆ ಅಗತ್ಯವಾದ ಖೇರ್ಸನ್‌ ಪ್ರದೇಶ ಮತ್ತು ನೆರೆಯ ಪ್ರದೇಶಗಳಲ್ಲಿ ಕದನ ವಿರಾಮ ಜಾರಿಗೆ ಬರಲಿದೆ ಎಂದು ಹೇಳಿದರು. ಈ ಉಪಕ್ರಮವು ಭವಿಷ್ಯದ ಮಾನವೀಯ ಕಾರ್ಯಾಚರಣೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

RELATED ARTICLES
spot_img

Latest News