ಬೆಂಗಳೂರು,ಅ.25-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಿಸಿದ್ದಾರೆ ಎಂಬ ಆರೋಪದ ಪ್ರಕರಣದ ಸಂಬಂಧ ಕಾಂಗ್ರೆಸ್ನ ಮಹಿಳಾ ನಾಯಕಿ ಕೃಪಾಆಳ್ವಾ ಅವರನ್ನು ಸೈಬರ್ ಕ್ರೈಂ ಠಾಣೆ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ನಿಮ ಪಾತ್ರವೇನು?, ನಿಮ ಜೊತೆ ಯಾರ್ಯಾರು ಸಂಚು ನಡೆಸಿದರು, ಎಲ್ಲಿ ವಿಡಿಯೋ ಮಾಡಲಾಗಿದೆ, ಸಂತ್ರಸ್ತ ಮಹಿಳೆ ಯಾರು? ಹೀಗೆ ಹಲವಾರು ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಅವರಿಗೆ ಕೇಳಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.ತಮಗೆ ಗೊತ್ತಿರುವ ಮಾಹಿತಿಗಳನ್ನು ಅವರು ತನಿಖಾಧಿಕಾರಿಗಳಿಗೆ ನೀಡಿದ್ದಾರೆಂದು ತಿಳಿದು ಬಂದಿದೆ. ಬಳಿಕ ಮತ್ತೆ ಕರೆದಾಗ ವಿಚಾರಣೆಗೆ ಬರುವಂತೆ ಸೂಚಿಸಿ ಕೃಪಾಆಳ್ವಾ ಅವರಿಗೆ ಪೊಲೀಸರು ನೋಟೀಸ್ ನೀಡಿ ಕಳುಹಿಸಿದ್ದಾರೆ.
ಈಗಾಗಲೇ ಈ ಪ್ರಕರಣದಲ್ಲಿ ದೆಹಲಿ ಮೂಲದ ರಿತೇಶ್ ಪಾಂಡೆ(23) ಬಂಧಿಸಿ ಕೆಲವು ಮಾಹಿತಿಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಈ ಆರೋಪಿಯು ದೆಹಲಿಯಲ್ಲಿ ಸೆಕೆಂಡ್ಹ್ಯಾಂಡ್ ಮೊಬೈಲ್ನನ್ನು ಖರೀದಿಸಿ ಸಿದ್ದರಾಮಯ್ಯ ರವರಿಗೆ ಸಂಬಂಧಿಸಿದೆ ಎನ್ನಲಾದ ಅಶ್ಲೀಲಾ ವಿಡಿಯೋವನ್ನು ಕರ್ನಾಟಕ ಹನಿಟ್ರ್ಯಾಪ್ ಎಂಬ ಯುಟ್ಯೂಬ್ ಚಾನೆಲ್ ತೆರೆದು ಅಪ್ಲೋಡ್ ಮಾಡಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ನೋಟೀಸ್ ನೀಡಿದರೂ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿರುವ ಚಂದನ್ ಮತ್ತು ಮೋಹನ್ಗೌಡ ರವರಿಗಾಗಿ ಸಿಸಿಬಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.ಎಸ್.ಶಿವಸ್ವಾಮಿ ಎಂಬುವವರ ಪ್ರಾತವೂ ಕೂಡ ಈ ಪ್ರಕರಣದಲ್ಲಿ ಬೆಳಕಿಗೆ ಬಂದಿದ್ದು, ಅವರಿಗೂ ಸಹ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.ಈಗಾಗಲೇ ರಾಕೇಶ್ಶೆಟ್ಟಿ ಮತ್ತು ಹದಿನೈದಕ್ಕೂ ಹೆಚ್ಚು ಮಂದಿಯನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ವಿಚಾರಣೆಗೆ ಒಳಪಡಿಸಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.
