Homeರಾಜ್ಯಕರ್ನಾಟಕ ಕಾಂಗ್ರೆಸ್‌‍ ಉಸ್ತುವಾರಿ ಸುರ್ಜೇವಾಲ ಬದಲಾವಣೆಗೆ ಹಿರಿಯ ಕಾಂಗ್ರೆಸ್ಸಿಗರ ಒತ್ತಾಯ

ಕರ್ನಾಟಕ ಕಾಂಗ್ರೆಸ್‌‍ ಉಸ್ತುವಾರಿ ಸುರ್ಜೇವಾಲ ಬದಲಾವಣೆಗೆ ಹಿರಿಯ ಕಾಂಗ್ರೆಸ್ಸಿಗರ ಒತ್ತಾಯ

ಬೆಂಗಳೂರು, ಅ.25- ಕರ್ನಾಟಕ ಕಾಂಗ್ರೆಸ್‌‍ನ ಉಸ್ತುವಾರಿ ಕಾರ್ಯ ದರ್ಶಿಯಾಗಿರುವ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರನ್ನು ಬದಲಾವಣೆ ಮಾಡುವಂತೆ ಹಿರಿಯ ಕಾಂಗ್ರೆಸ್‌‍ ನಾಯಕರು ಹೈಕಮಾಂಡ್‌ಗೆ ಪತ್ರ ಬರೆದಿರುವುದು ರಾಜ್ಯ ಕಾಂಗ್ರೆಸ್‌‍ನಲ್ಲಿ ಸಂಚಲನ ಮೂಡಿಸಿದೆ.ರಣದೀಪ್‌ ಸಿಂಗ್‌ ಸುರ್ಜೇ ವಾಲಾ ಅವರು ಕಾಂಗ್ರೆಸ್‌‍ ಸಂಘಟನಾತಕ ವಿಚಾರದಲ್ಲಿ ಪೂರ್ಣಪ್ರಮಾಣ ತೊಡಗಿಸಿಕೊಳ್ಳುತ್ತಿಲ್ಲ. ಮೂರೂವರೆ ವರ್ಷ ಕಳೆದರೂ ಕಾರ್ಯಕರ್ತರಿಗೆ ನಿಗಮಮಂಡಳಿಗಳ ನೇಮಕಾತಿಯಲ್ಲಿ ಅವಕಾಶ ಕೊಟ್ಟಿಲ್ಲ. ಯಾವುದೇ ನೇಮಕಾತಿ ಅಥವಾ ನಿರ್ಧಾರಗಳಿಗೆ ಸಂಬಂಧಪಟ್ಟಂತೆ ಕಡತಗಳನ್ನು ವರ್ಷಾನುಗಟ್ಟಲೆ ಬಾಕಿ ಉಳಿಸಿಕೊಳ್ಳುತ್ತಾರೆ ಎಂದು ಆರೋಪಿಸಲಾಗಿದೆ.

ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಸಂಘಟನಾತಕ ಚಟುವಟಿಕೆಗಳು ಸಮಾರೋಪಾದಿಯಲ್ಲಿ ನಡೆಯಬೇಕು. ಆದರೆ ಹೈಕಮಾಂಡ್‌ನ ವಿಳಂಬಾತಕ ನಿರ್ಧಾರದಿಂದಾಗಿ ಸಂಘಟನೆ ಸೊರಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ಸಿಗರು ಆಕ್ಷೇಪಿಸಿದ್ದಾರೆ.

ರಾಜ್ಯದಲ್ಲಿ ದಿನೇ ದಿನೇ ಹೊಸ ವಿವಾದಗಳು ಸೃಷ್ಟಿಯಾಗುತ್ತಿವೆ. ವಿರೋಧ ಪಕ್ಷಗಳು ಸರ್ಕಾರವನ್ನು ಗುರಿಯಾಗಿಸಿಕೊಂಡು ನಾನಾ ರೀತಿಯ ಆರೋಪಗಳನ್ನು ಮಾಡುತ್ತಿವೆ. ಇದರಿಂದಾಗಿ ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಚುನಾವಣೆಯ ಮೇಲೂ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ನಡೆದಿರುವ ರಾಜಕೀಯ ಸಮೀಕ್ಷೆಯಲ್ಲಿ ಕಾಂಗ್ರೆಸ್‌‍ಗೆ ಹಿನ್ನೆಡೆಯಾಗುವ ಮಾಹಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಎಚ್ಚೆತ್ತುಕೊಂಡು ಕೆಲಸ ಮಾಡಬೇಕಿರುವ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕರ್ನಾಟಕದತ್ತ ತಲೆಯನ್ನೇ ಹಾಕುತ್ತಿಲ್ಲ. ಯಾವಾಗಲಾದರೂ ಒಮೆ ಬಂದರೂ, ವಿವಿಐಪಿ ನಾಯಕರನ್ನು ಮಾತ್ರ ಭೇಟಿ ಮಾಡಿ ತೆರಳುತ್ತಿದ್ದಾರೆ. ಸಾಮಾನ್ಯ ಕಾರ್ಯಕರ್ತರ ಸಮಸ್ಯೆಗಳನ್ನು ಕೇಳುವವರಿಲ್ಲ ಎಂಬಂತಾಗಿದೆ ಎಂದು ಆಕ್ಷೇಪಗಳು ವ್ಯಕ್ತವಾಗಿವೆ.

ರಾಜ್ಯ ಸರ್ಕಾರದ ಆಡಳಿತಾತಕ ನಿರ್ಧಾರಗಳು ಕೂಡ ಚರ್ಚೆಯಾಗಬೇಕು. ಚುನಾವಣಾ ಕಾಲಘಟ್ಟದಲ್ಲಿ ವಿವಿಧ ಬೆಲೆ ಏರಿಕೆಗಳಿಗೆ ಸರ್ಕಾರ ನಿರ್ಧಾರ ಕೈಗೊಳ್ಳುತ್ತಿದೆ ಹಾಗೂ ಅನುಮೋದಿಸುತ್ತಿದೆ. ಇದು ಸಹಜವಾಗಿ ಜನರ ವಿರೋಧಕ್ಕೂ ಕಾರಣವಾಗಿದೆ. ವಿರೋಧ ಪಕ್ಷಗಳ ಟೀಕೆಗಳು ಒಂದೆಡೆಯಾದರೆ, ಸರ್ಕಾರ ತನ್ನದೇ ನಿರ್ಧಾರಗಳಿಂದಲೂ ಆರೋಪಕ್ಕೆ ಗುರಿಯಾಗುತ್ತಿದೆ.

ಇಂತಹ ಸಂದರ್ಭದಲ್ಲಿ ಹೈಕಮಾಂಡ್‌ ಮಧ್ಯ ಪ್ರವೇಶಿಸುವ ಅಗತ್ಯವಿದ್ದರೂ ರಣದೀಪ್‌ ಸಿಂಗ್‌ ಸುರ್ಜೇವಾಲಾ ತಟಸ್ಥವಾಗಿರುವುದು ಚರ್ಚೆಗೆ ಗ್ರಾಸವಾಗಿದೆ ಎಂದು ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ರಣದೀಪ್‌ ಸಿಂಗ್‌ ಸುರ್ಜೇವಾಲಾ ಬದಲಾಗಿ ಸಮರ್ಥ ಹಾಗೂ ಕ್ರಿಯಾಶೀಲ ನಾಯಕರನ್ನು ರಾಜ್ಯ ಕಾಂಗ್ರೆಸ್‌‍ನ ಉಸ್ತುವಾರಿಗೆ ನಿಯೋಜಿಸುವಂತೆ ಹಿರಿಯ ನಾಯಕರು ಸಲಹೆ ನೀಡಿದ್ದಾರೆ.

RELATED ARTICLES
spot_img

Latest News