Sunday, December 21, 2025
Homeರಾಜಕೀಯಕಾಂಗ್ರೆಸ್ಸಿನ ಹೈಕಮಾಂಡ್ ಕಮಾಂಡ್‌ ಕಳೆದುಕೊಂಡಿದೆ : ಪ್ರಹ್ಲಾದ್‌ ಜೋಶಿ

ಕಾಂಗ್ರೆಸ್ಸಿನ ಹೈಕಮಾಂಡ್ ಕಮಾಂಡ್‌ ಕಳೆದುಕೊಂಡಿದೆ : ಪ್ರಹ್ಲಾದ್‌ ಜೋಶಿ

Congress high command has lost command: Prahlad Joshi

ಚಿಕ್ಕಮಗಳೂರು,ಡಿ.21- ಸಿಎಂ ಕುರ್ಚಿ ವಿಚಾರ ಸಂಬಂಧ ರಾಜ್ಯದಲ್ಲಿ ಅಸ್ಥಿರ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್‌‍ನಲ್ಲಿ ಹೈ ಅನ್ನೋದು ಇದೆ ಅಷ್ಟೇ. ಕಮಾಂಡ್‌ ಎನ್ನುವುದು ಉಳಿದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಲೇವಡಿ ಮಾಡಿದರು.

ಜಿಲ್ಲೆಯ ಬಾಳೆಹೊನ್ನೂರು ಕಾಫಿ ಸಂಶೋಧನಾ ಕೇಂದ್ರ ಶತಮಾನೋತ್ಸವ ಕಾರ್ಯಕ್ರಮದ ಹಿನ್ನಲೆ ಆಗಮಿಸಿದ ಅವರು ಶ್ರೀ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಅವಧಿ ವಿಚಾರ ಸಂಬಂಧ ಸಿದ್ದರಾಮಯ್ಯ

ಒಪ್ಪಂದವಾಗಿಲ್ಲ ಎನ್ನುತ್ತಾರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಗಿದೆ ಅಂತಾರೆ. ಈ ಸಮಸ್ಯೆ ಇತ್ಯರ್ಥಪಡಿಸಲು ಕಾಂಗ್ರೆಸ್‌‍ ಹೈಕಮಾಂಡ್‌ಗೆ ಏಕೆ ಇನ್ನು ಆಗಿಲ್ಲ ಎಂದು ಪ್ರಶ್ನಿಸಿದತು.ಕಾಂಗ್ರೆಸ್‌‍ ಅಂದರೇ ಭ್ರಷ್ಟಚಾರ, ಭ್ರಷ್ಟಚಾರ ಅಂದರೇ ಕಾಂಗ್ರೆಸ್‌‍ ಇದು ಸಿನಾನಿ ಮಸ್‌‍, ರಾಜ್ಯದಲ್ಲಿ ಅರಾಜಕತೆ, ಅಸ್ಥಿರತೆಯಿಂದ ಮತ್ತಷ್ಟು ಭ್ರಷ್ಟಚಾರ, ಆಡಳಿತ ಯಂತ್ರ ಕುಸಿದಿದೆ.

ಕಾಂಗ್ರೆಸ್‌‍ ಹೈಕಮಾಂಡ್ಗೆ ಕಂಟ್ರೋಲ್‌ ಮಾಡಲು ಏನು ಉಳಿದಿಲ್ಲ. ರಾಷ್ಟ್ರೀಯ ಅಧ್ಯಕ್ಷರು ಇಲ್ಲೇ ಇದ್ದರೂ ನಾನು ಮಾತನಾಡಿ ತೀರ್ಮಾನ ಮಾಡಿಸುತ್ತೇನೆ ಎಂಬ ಮಟ್ಟಕ್ಕೆ ಬಂದಿದ್ದಾರೆ. ಜನ ಐದು ವರ್ಷ ಅಧಿಕಾರ ಕೊಟ್ಟಿದ್ದಾರೆ. ಸರಿಯಾಗಿ ಕೆಲಸ ಮಾಡದಿದ್ರೆ ಸೂಕ್ತ ಪಾಠ ಜನರೇ ಕಲಿಸುತ್ತಾರೆ ಎಂದರು.

ದ್ವೇಷ ಭಾಷಣ ಮಸೂದೆ ಅಂಗೀಕಾರ ಕುರಿತು ಪ್ರತಿಕ್ರಿಯಿಸಿ, ಮಸೂದೆ ಬಗ್ಗೆ ಯಾವುದೇ ಚರ್ಚೆಗೆ ಅವಕಾಶ ಮಾಡಿಕೊಡಲಿಲ್ಲ, ಹಿಂದೆ ಇಂದಿರಾ ಗಾಂಧಿ ಮಾಡಿದಂತೆ ಏನು ಮಾತನಾಡಿದರೂ ಜೈಲಿಗೆ ಹಾಕೋದು, ಜೈಲಿಗೆ ಹಾಕಬೇಕು, ಹೆದರಿಸಬೇಕು ಅಂತ ಮಸೂದೆ ಅಂಗೀಕಾರ ಮಾಡಿದ್ದಾರೆ ಎಂದು ಹೇಳಿದರು.

ಕರ್ನಾಟಕದಲ್ಲಿ ಬಹಳಷ್ಟು ಜಿಹಾದಿ ಮನಸ್ಥಿತಿಯವರು ಇದ್ದಾರೆ. ಅವರು ಭಾಷಣ ಮಾಡಲು ಬಂದರೇ ಅವರನ್ನು ಮೊದಲು ಒಳಗೆ ಹಾಕಬೇಕು. ನನ್ನ ಪ್ರಕಾರ ಇದು ಕಾರ್ಯರೂಪಕ್ಕೆ ಬರಲ್ಲ. ನ್ಯಾಯಾಂಗ ವ್ಯವಸ್ಥೆ ಬಲವಾಗಿದೆ. ಕಾಂಗ್ರೆಸ್‌‍ ತುಷ್ಠೀಕರಣಕ್ಕಾಗಿ ಮಾಡಿದೆ ಅಷ್ಟೇ ಎಂದರು. ರಾಜಭವನದಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಇರ್ತಾರೆ, ಕೇಂದ್ರ ಸರ್ಕಾರದ ಪ್ರತಿನಿಧಿಗಳು ಇರ್ತಾರೆ, ಕಾಂಗ್ರೆಸ್‌‍ ಇನ್ನೂ ಗುಲಾಮಿತನದ ಮಾನಸಿಕತೆಯಲ್ಲಿ ಇದೆ.

ಬೈ ನೇಚರ್‌ ಗುಲಾಮಿ ಸಂತತಿಗೆ ಹೊಂದಿಕೊಂಡಿದ್ದಾರೆ ಎಂದು ರಾಜಭವನ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರದ ವಿರೋಧಕ್ಕೆ ತಿರುಗೇಟು ನೀಡಿದರು. ಸಂಸದ ಕೋಟ ಶ್ರೀನಿವಾಸ್‌‍ ಪೂಜಾರಿ, ವಿಧಾನಪರಿಷತ್‌ ಸದಸ್ಯ ಸಿ ಟಿ ರವಿ, ಮಾಜಿ ಸಚಿವ ಜೀವರಾಜ್‌ ಜೊತೆಯಲ್ಲಿದ್ದರು.

RELATED ARTICLES

Latest News