Friday, November 22, 2024
Homeರಾಜ್ಯಚಮತ್ಕಾರ : ನಾಪತ್ತೆಯಾಗಿ ಭಾರೀ ಸಂಚಲನ ಸೃಷ್ಟಿಸಿದ್ದ ಕಡತ ಕೆಪಿಎಸ್‌ಸಿ ಕಚೇರಿಯಲ್ಲೇ ಪತ್ತೆ.!

ಚಮತ್ಕಾರ : ನಾಪತ್ತೆಯಾಗಿ ಭಾರೀ ಸಂಚಲನ ಸೃಷ್ಟಿಸಿದ್ದ ಕಡತ ಕೆಪಿಎಸ್‌ಸಿ ಕಚೇರಿಯಲ್ಲೇ ಪತ್ತೆ.!

ಬೆಂಗಳೂರು,ಏ.10- ಎರಡು ತಿಂಗಳಿಂದ ನಾಪತ್ತೆಯಾಗಿದ್ದ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಕಿರಿಯ ಎಂಜಿನಿಯರ್ ನೇಮಕಾತಿ ಆಯ್ಕೆ ಪಟ್ಟಿ ಕಡತ ಕರ್ನಾಟಕ ಲೋಕಸೇವಾ ಆಯೋಗ ಕಚೇರಿಯಲ್ಲೇ ಪತ್ತೆಯಾಗಿದೆ.

2016 ರಲ್ಲಿ ಕೊಳಗೇರಿ ಮಂಡಳಿ ಜೂನಿಯರ್ ಇಂಜಿನಿಯರ್ ನೇಮಕಾತಿ ಪರೀಕ್ಷೆ ನಡೆದಿತ್ತು. 2018ರಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಚ್.ಡಿ. ವಿವೇಕಾನಂದ ಎಂಬುವವರು ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಹೈಕೋರ್ಟ್ ಆದೇಶದಂತೆ ಕೆಪಿಎಸ್ಸಿ ಗೌಪ್ಯ ಶಾಖೆ-3 ರಲ್ಲಿ ಆಯ್ಕೆ ಪಟ್ಟಿ ತಯಾರಿಸಲಾಗಿತ್ತು. ಜನವರಿ 22 ರಂದು ಕಾರ್ಯದರ್ಶಿಯವರ ಆಪ್ತ ಶಾಖೆಯಲ್ಲಿ ಕಡತ ಸ್ವೀಕಾರ ಮಾಡಲಾಯಿತು. ಆ ಬಳಿಕ ಕಡತ ನಾಪತ್ತೆಯಾಗಿತ್ತು.

ಬಳಿಕ ಕೆಪಿಎಸ್ಸಿಯ ಎಲ್ಲ ಶಾಖೆಗಳಲ್ಲೂ ಕಡತಕ್ಕಾಗಿ ಶೋಧ ನಡೆಸಲಾಯ್ತು. ಕಡತ ಪತ್ತೆಯಾದಲ್ಲಿ ಕೂಡಲೇ ಶಾಖೆ-2ಕ್ಕೆ ಹಿಂದಿರುಗಿಸುವಂತೆ ಕೆಪಿಎಸ್ಸಿ ಜಾ್ಞಪನ ಹೊರಡಿಸಿತ್ತು. ಬಳಿಕ ಕೆಪಿಎಸ್ಸಿ ಸಿಬ್ಬಂದಿಯಿಂದ ಕಡತಕ್ಕಾಗಿ ಎಲ್ಲೆಡೆ ಶೋಧ ನಡೆಸಿದೆ. ಅಧಿಕಾರಿ, ಸಿಬ್ಬಂದಿ ಸುಮಾರು ಒಂದು ತಿಂಗಳು ಕಾಲ ಶೋಧ ನಡೆಸಿದರು. ಆದರೆ ಕಡೆತ ಎಲ್ಲೂ ಸಿಕ್ಕಿರಲಿಲ್ಲ.

ಹೀಗಾಗಿ ಕಡತ ನಾಪತ್ತೆ ಬಗ್ಗೆ ದೂರು ದಾಖಲಿಸಲು ಆಯೋಗ ಸಭೆ ನಡೆಸಿ ನಿರ್ಧಾರ ಕೈಗೊಂಡು, ಕಾರ್ಯದರ್ಶಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿ, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು.

ಘಟನೆ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿಯಾದ ಬೆನ್ನಲ್ಲೇ ಕಡತ ಪತ್ತೆಯಾಗಿದೆ. ಕಡತ ಪತ್ತೆಯಾದ ಬಗ್ಗೆ ಆಯೋಗದ ಹಿರಿಯ ಅಧಿಕಾರಿಗಳು ಮËಖಿಕವಾಗಿ ವಿಧಾನಸೌಧ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಕೃತವಾಗಿ ಪತ್ರದ ಮೂಲಕ ಮಾಹಿತಿ ನೀಡುವಂತೆ ಹೇಳಿದ್ದಾರೆ. ಪತ್ರದಲ್ಲಿ ನೀಡುವ ಮಾಹಿತಿ ಆಧಾರದ ಮೇಲೆ ವಿಧಾನಸೌಧ ಪೊಲೀಸರು ಮುಂದಿನ ಪ್ರಕ್ರಿಯೆ ನಡೆಸಲಿದ್ದಾರೆ.

RELATED ARTICLES

Latest News