ಬೆಂಗಳೂರು,ಅ.10- ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿನ ಬಸ್ ಶೆಲ್ಟರ್ ಕಳುವಾಗಿಲ್ಲ, ಶೆಲ್ಟರ್‌ನ್ನು ಬಿಬಿಎಂಪಿ ಅಧಿಕಾರಿಗಳೇ ತೆರವುಗೊಳಿಸಿದ್ದಾರೆ ಎಂಬುವುದು ಹೈಗ್ರೌಂಡ್ಸ್ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ನಗರ ಕೇಂದ್ರ ವಿಭಾಗದ ಹೌಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕಾಫಿ ಡೇ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ಸೈನ್‍ಪೋಸ್ಟ್ ಇಂಡಿಯಾ ಏಜೆನ್ಸಿಯವರು ನಿರ್ಮಿಸಿದ್ದ ಬಸ್ ಶೆಲ್ಟರ್‍ನ್ನು ಯಾರೋ ಕಳವು ಮಾಡಿರುತ್ತಾರೆಂದು, ಅವರ ಕಂಪನಿ ವತಿಯಿಂದ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ತನಿಖೆಯ ಸಲುವಾಗಿ ಬಿಬಿಎಂಪಿ ಶಿವಾಜಿನಗರ ವಲಯ, ಕಾರ್ಯಪಾಲಕ ಅಭಿಯಂತರರನ್ನು ಸಂಪರ್ಕಿಸಿ ವಿಚಾರಣೆ ಮಾಡಿದಾಗ, ಬಸ್ ಶೆಲ್ಟರ್ ಕಳುವಾಗಿಲ್ಲ ಅದನ್ನು ತೆರವುಗೊಳಿಸಿರುವುದು ಗೊತ್ತಾಗಿದೆ.
ಬಿಬಿಎಂಪಿ ಅಧಿಕಾರಿಗಳ ಪತ್ರದ ಅನುಸಾರ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಅಳವಡಿಸಿದ್ದ ಬಸ್ ಶೆಲ್ಟರ್ ಕಾಮಗಾರಿಯು ಅಸಮರ್ಪಕವಾಗಿದೆ ಎಂದು ಮುಂಜಾಗ್ರತಾ ಕ್ರಮ ವಹಿಸಿ ಅದನ್ನು ಶಿವಾಜಿನಗರ ವಾರ್ಡ್‍ನ ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿ ಶೆಲ್ಟರ್ ಸಾಮಾಗ್ರಿಗಳನ್ನು ವಾರ್ಡ್ ಕಛೇರಿಯ ಉಗ್ರಾಣದಲ್ಲಿರಿಸಲಾಗಿದೆ ಎಂದು ಬಿಬಿಎಂಪಿ ವಸಂತನಗರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಸ್ಪಷ್ಟಪಡಿಸಿದ್ದಾರೆ.
ಸೈಬರ್ ಕ್ರೈಂ ಪ್ರಕರಣಗಳ ಕಾಲಮಿತಿ ತನಿಖೆಗೆ ಕಟ್ಟುನಿಟ್ಟಿನ ಕ್ರಮ : ದಯಾನಂದ
ಅಧಿಕಾರಿಗಳೊಂದಿಗೆ ಅವರು ವಾರ್ಡ್ ಪರಿವೀಕ್ಷಣಾ ಸಮಯದಲ್ಲಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಈ ಬಸ್ ಶೆಲ್ಟರ್ ಕಾಮಗಾರಿಯು ಅಸಮರ್ಪಕವಾಗಿ, ಯಾವುದೇ ರೀತಿಯ ಮುಂಜಾಗ್ರತಾ ಕ್ರಮ ವಹಿಸದ ನಿರ್ಮಾಣ ಮಾಡಿರುವುದು ಕಂಡು ಬಂದಿತ್ತು. ಹಾಗಾಗಿ ಸಾರ್ವಜನಿಕರ ಬಸ್ ನಿಲ್ದಾಣವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸೇರುವುದರಿಂದ ನಿರ್ಮಾಣ ಮಾಡುತ್ತಿರುವ ಬಸ್ ಶೆಲ್ಟರ್ ಕುಸಿದು ಬಿದ್ದಲ್ಲಿ ಹಲವಾರು ಪ್ರಯಾಣಿಕರಿಗೆ ಪ್ರಾಣ ಹಾನಿಯಾಗುವ ಸಂಭವವಿರುವುದನ್ನು ಗಮನಿಸಿ ಬಸ್ ಶೆಲ್ಟರ್ ನಿರ್ಮಾಣ ಮಾಡುತ್ತಿರುವ ಸೈನ್‍ಪೋಸ್ಟ್ ಏಜೆನ್ಸಿಯ ಪ್ರತಿನಿಧಿ ರವಿರೆಡ್ಡಿ ಎಂಬುವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ.
ಬಸ್ ಶೆಲ್ಟರ್ ನಿರ್ಮಿಸಲು ಪಾಲಿಕೆಯಿಂದ ಪಡೆದಿರುವ ಕಾರ್ಯಾದೇಶ ಪ್ರತಿಯನ್ನು ತಮ್ಮ ಕಛೇರಿಗೆ ಸಲ್ಲಿಸುವಂತೆ ತಿಳಿಸಿ ಕಾಮಗಾರಿಯನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತ ಕ್ರಮ ಕೈಗೊಂಡು ನಿರ್ಮಿಸಲು ಸೂಚಿಸಲಾಗಿತ್ತು.
ಬಿಗ್‍ಬಾಸ್‍ನಿಂದ ಹೊರಬಂದು ಪ್ರದೀಪ್ ಈಶ್ವರ್ ಹೇಳಿದ್ದೇನು..?
ಆದರೆ ಸಂಬಂಧಪಟ್ಟ ಗುತ್ತಿಗೆದಾರರು ಯಾವುದೇ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳದೇ, ಕಾಮಗಾರಿಯನ್ನು ಅಪೂರ್ಣಗೊಳಿಸಿ ಸಂಬಂಧಪಟ್ಟ ಕಾರ್ಯಾದೇಶ ಪತ್ರದ ದಾಖಲೆಗಳನ್ನು ಕಛೇರಿಗೆ ಸಲ್ಲಿಸದೇ ಇರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಅಸಮರ್ಪಕವಾಗಿ ನಿರ್ಮಾಣ ಮಾಡಿದ್ದ ಹಾಗೂ ಅಪೂರ್ಣಗೊಂಡಿರುವ ಬಸ್ ಶೆಲ್ಟರ್ ತೆರವುಗೊಳಿಸಲಾಗಿದ್ದು, ಬಸ್ ಶೆಲ್ಟರ್ ಸಾಮಾಗ್ರಿಗಳನ್ನು ವಾರ್ಡ್ ಕಛೇರಿಯ ಉಗ್ರಾಣದಲ್ಲಿರಿಸಲಾಗಿದೆ ಎಂದು ಅವರು ತಿಳಿಸಿರುತ್ತಾರೆ.