Sunday, December 21, 2025
Homeಜಿಲ್ಲಾ ಸುದ್ದಿಗಳುಬಿಸಿ ನೀರಿನ ಪಾತ್ರೆಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

ಬಿಸಿ ನೀರಿನ ಪಾತ್ರೆಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

One and a half year old child dies after falling into hot water pot

ಮೈಸೂರು, ಡಿ. 21- ಒಂದೂವರೆ ವರ್ಷದ ಮಗುವೊಂದು ಬಿಸಿ ನೀರಿನ ಪಾತ್ರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಣಸೂರು ತಾಲ್ಲೂಕಿನ ವಿಜಯಗಿರಿ ಹಾಡಿಯಲ್ಲಿ ನಡೆದಿದೆ. ಆದಿವಾಸಿ ಜೇನುಕುರುಬ ದಂಪತಿ ರವ್ಯಾ ಮತ್ತು ಬಸಪ್ಪನವರ ಒಂದೂವರೆ ವರ್ಷದ ಹೆಣ್ಣುಮಗು ಸಾವನ್ನಪ್ಪಿದೆ.

ಮಗುವಿಗೆ ಸ್ನಾನ ಮಾಡಿಸಲೆಂದು ಬಿಸಿ ನೀರನ್ನು ತಂದಿಟ್ಟಿದ್ದು, ಈ ವೇಳೆ ನೀರು ಜಾಸ್ತಿ ಬಿಸಿ ಇದೆ ಎಂದು ತಣ್ಣೀರು ತರಲು ಮನೆಯೊಳಗೆ ಹೋದ ಸಂದರ್ಭದಲ್ಲಿ ಮಗು ಸುಡುವ ನೀರಿನ ಪಾತ್ರೆಗೆ ಬಿದ್ದಿದೆ. ಇದರ ಪರಿಣಾಮ ಮಗುವಿನ ದೇಹ ಭಾಗಶಃ ಸುಟ್ಟಿದೆ. ಗಂಭೀರ ಸ್ಥಿತಿ ತಲುಪಿದ ಮಗುವನ್ನು ಕೂಡಲೇ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ.

RELATED ARTICLES

Latest News