Tuesday, May 21, 2024
Homeಬೆಂಗಳೂರುತನ್ನಂತೆ ಕಷ್ಟ ಪಡಬಾರದೆಂದು ಮಕ್ಕಳನ್ನು ಕೊಂದುಹಾಕಿದೆ : ವಿಚಾರಣೆ ವೇಳೆ ತಾಯಿ ಕಣ್ಣೀರು

ತನ್ನಂತೆ ಕಷ್ಟ ಪಡಬಾರದೆಂದು ಮಕ್ಕಳನ್ನು ಕೊಂದುಹಾಕಿದೆ : ವಿಚಾರಣೆ ವೇಳೆ ತಾಯಿ ಕಣ್ಣೀರು

ಬೆಂಗಳೂರು, ಏ.11- ತನ್ನ ಮಕ್ಕಳು ನನ್ನಂತೆ ಕಷ್ಟ ಅನುಭವಿಸ ಬಾರದೆಂದು ಇಬ್ಬರನ್ನು ಸಾಯಿಸಿದೆ ಎಂದು ಆರೋಪಿತೆ ಮಹಿಳೆ ವಿಚಾರಣೆ ವೇಳೆ ಪೊಲೀಸರಿಗೆ ಹೇಳಿದ್ದಾಳೆ. ಇಬ್ಬರು ಮಕ್ಕಳನ್ನು ಏಕೆ ಕೊಂದೆ ಎಂದು ಜಾಲಹಳ್ಳಿ ಠಾಣೆ ಪೊಲೀಸರು ಕೇಳಿದಾಗ, ಆರೋಪಿತೆ ಗಂಗಾದೇವಿ ಈ ರೀತಿ ಹೇಳಿದ್ದಾಳೆ ಎಂದು ತಿಳಿದುಬಂದಿದೆ.

ಬಿಬಿಎಂಪಿಯಲ್ಲಿ ಪೌರಕಾರ್ಮಿಕ ನಾಗಿದ್ದ ಪತಿ ನರೇಶ್ ಪೊಕ್ಸೋ ಕಾಯ್ದೆಯಡಿ ಜೈಲಿನಲ್ಲಿದ್ದಾನೆ. ಹಾಗಾಗಿ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಪತಿ ನರೇಶ್ ಜೈಲು ಸೇರಿದ ಬಳಿಕ ಗಂಗಾದೇವಿ ಮಕ್ಕಳನ್ನು ಕರೆದುಕೊಂಡು ತಾಯಿ ಮನೆ ಸೇರಿ, ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು.

ಆರ್ಥಿಕ ಸಮಸ್ಯೆಯಿಂದ ನೊಂದಿದ್ದ ಗಂಗಾದೇವಿ ಖಿನ್ನತೆಗೆ ಒಳಗಾಗಿ ಅದೇ ಬೇಜಾರಿನಿಂದ ಮಕ್ಕಳನ್ನು ಸಾಯಿಸಲು ನಿರ್ಧರಿಸಿದ್ದಾಳೆ. ಮೊನ್ನೆ ರಾತ್ರಿ ಕೆಲಸದ ನಿಮಿತ್ತ ತಾಯಿ ಊರಿಗೆ ಹೋಗಿದ್ದಾಗ ಇದೇ ಸರಿಯಾದ ಸಮಯವೆಂದು ಭಾವಿಸಿ ಪುತ್ರಿ ಲಕ್ಷ್ಮೀ (6) ಮತ್ತು ಪುತ್ರ ಗೌತಮ್ (8) ನಿದ್ರೆಗೆ ಜಾರಿದಾಗ ಗಂಗಾದೇವಿ ದಿಂಬಿನಿಂದ ಉಸಿರುಗಟ್ಟಿಸಿ ಇಬ್ಬರು ಮಕ್ಕಳನ್ನು ಸಾಯಿಸಿದ್ದಾರೆ.

ಒಂದು ವೇಳೆ ಅಜ್ಜಿ ಮನೆಯಲ್ಲಿದ್ದಿದ್ದರೆ ಈ ಇಬ್ಬರು ಮಕ್ಕಳ ಪ್ರಾಣ ಉಳಿಯುತ್ತಿತ್ತು ಎಂದು ನೆರೆಹೊರೆಯವರು ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ಪತಿ- ಪತ್ನಿ ಇಬ್ಬರೂ ಜೈಲು ಸೇರಿರುವುದು ವಿಪರ್ಯಾಸ. ಏನೇ ಆಗಲಿ, ಎಷ್ಟೇ ಕಷ್ಟ ಬಂದರೂ ಮಕ್ಕಳಿಗೆ ಶಿಕ್ಷಣ ಕೊಡಿಸಿ ಉನ್ನತಸ್ಥಾನಕ್ಕೆ ಕೊಂಡೊಯ್ಯುವಂತಹ ಎಷ್ಟೋ ಮಹಿಳೆಯರು ಸಮಾಜದಲ್ಲಿ ಮಾದರಿಯಾಗಿದ್ದಾರೆ. ಆದರೆ ಈ ಪ್ರಕರಣದಲ್ಲಿ ತನ್ನ ದುಡುಕಿನ ನಿರ್ಧಾರದಿಂದಾಗಿ ಇಬ್ಬರು ಕರುಳ ಕುಡಿಗಳ ಉಸಿರು ನಿಲ್ಲಿಸಿರುವುದು ದುರಂತವೇ ಸರಿ.

RELATED ARTICLES

Latest News