Friday, November 22, 2024
Homeರಾಷ್ಟ್ರೀಯ | Nationalರಾಮಮಂದಿರ ನಿರ್ಮಾಣ ತ್ಯಾಗ ಬಲಿದಾನದ ಪರಾಕಾಷ್ಠೆ; ಮೋಹನ್ ಭಾಗವತ್

ರಾಮಮಂದಿರ ನಿರ್ಮಾಣ ತ್ಯಾಗ ಬಲಿದಾನದ ಪರಾಕಾಷ್ಠೆ; ಮೋಹನ್ ಭಾಗವತ್

ಛತ್ರಪತಿ ಸಂಭಾಜಿನಗರ, ಏ.12 (ಪಿಟಿಐ) : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವು 30 ವರ್ಷಗಳ ಹೋರಾಟ ಮತ್ತು ತ್ಯಾಗ ಬಲಿದಾನದ ಪರಾಕಾಷ್ಠೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ದತ್ತಾಜಿ ಭಲೇ ಸ್ಮೃತಿ ಸಮಿತಿ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಆರ್‍ಎಸ್‍ಎಸ್ ಮುಖ್ಯಸ್ಥ ರಾಮ್ ಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪಿಸಿದಾಗ ಇಡೀ ದೇಶ ಸಂಭ್ರಮಿಸಿದೆ ಎಂದಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ಜನ ದೇಣಿಗೆ ನೀಡಿದ್ದಾರೆ. 30 ವರ್ಷಗಳ ಹೋರಾಟದಿಂದಾಗಿ (ದೇವಾಲಯ ನಿರ್ಮಾಣವಾಗಿದೆ)…. ರಾಮಜನ್ಮಭೂಮಿಯಲ್ಲಿ 500 ವರ್ಷಗಳಿಂದ ದೇವಸ್ಥಾನ ಬೇಕು ಎಂದು ಬಯಸಿದ್ದೆವು. ಜನರು ಹಣವನ್ನು ದೇಣಿಗೆ ನೀಡಲು ಸಿದ್ಧರಾಗಿದ್ದರು ಮತ್ತು ದೇವಾಲಯವನ್ನು ಉದ್ಘಾಟಿಸಿದಾಗ (ಜನವರಿ 2024 ರಲ್ಲಿ) ಇಡೀ ದೇಶವು ಸಂಭ್ರಮದಲ್ಲಿ ಮುಳುಗಿತ್ತು ಎಂದು ಭಾಗವತ್ ತಮ್ಮ ಭಾಷಣದಲ್ಲಿ ಹೇಳಿದರು.

ಅನೇಕ ಜನರ ತಪಸ್ಯ (ತಪಸ್ಸು/ಹೋರಾಟ) ಮತ್ತು ಸಮರ್ಪಣ (ಅರ್ಪಣ ಮತ್ತು ತ್ಯಾಗ) ಇದಕ್ಕೆ ಕಾರಣವಾಯಿತು ಎಂದು ಸಂಘದ ಮುಖ್ಯಸ್ಥರು ಸೇರಿಸಿದರು.ಕಳೆದ ಕೆಲವು ವರ್ಷಗಳಲ್ಲಿ ಭಾರತದ ಹಿರಿಮೆ ಜಾಗತಿಕ ಮಟ್ಟದಲ್ಲಿ ಏರಿದ್ದು, ಅದರ ಪರಂಪರೆ ಮತ್ತು ಸಂಸ್ಕøತಿಗೆ ಮನ್ನಣೆ ದೊರೆಯುತ್ತಿದೆ ಎಂದರು. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರುವ ಸಮಯ ಬಂದಿದೆ ಎಂದು ಅವರು ಹೇಳಿದರು.ಅಚ್ಛೇ ದಿನ್ ಬಂದಾಗ ಸಂತೋಷವನ್ನು ಅನುಭವಿಸುವವರು ಅದರಲ್ಲಿ ಮಾಡಿದ ಶ್ರಮವನ್ನು ನೋಡಬೇಕಾಗಿಲ್ಲ ಎಂದು ಭಾಗವತ್ ಟೀಕಿಸಿದ್ದಾರೆ.

ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಸಾಕಷ್ಟು ಶ್ರಮವಿದೆ. ನಿಸ್ವಾರ್ಥ ಜನರು ಫಲಿತಾಂಶಗಳ ಬಗ್ಗೆ ಯೋಚಿಸದೆ ಶ್ರಮಿಸುತ್ತಾರೆ. ಅವರು ತಮ್ಮ ಜೀವಿತಾವಧಿಯಲ್ಲಿ ಬರದಿದ್ದರೂ ಫಲಿತಾಂಶಗಳನ್ನು ಬಯಸುತ್ತಾರೆ ಎಂದು ಭಾಗವತ್ ತಿಳಿಸಿದರು.

ಕೆಲವರು ದೇಶಕ್ಕಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡಿದ್ದಾರೆ. ಹಾಗಾಗಿ ನಾವು ಇಂದು ವಿಶ್ವದಲ್ಲಿ ಉದಯೋನ್ಮುಖ ದೇಶವಾಗಿ ನಿಲ್ಲಬಹುದು. ಕೆಲವರು (ಇಂದಿನ ಭಾರತದಲ್ಲಿ) ಅವರನ್ನು (ನಿಸ್ವಾರ್ಥದಿಂದ ದೇಶಕ್ಕಾಗಿ ದುಡಿದವರನ್ನು) ನೋಡಿದ್ದಾರೆ, ಕೆಲವರು ನೋಡಿಲ್ಲ. ದೇಶದಲ್ಲಿ ಶೇ 57ರಷ್ಟು ಜನರು ಹೊಸ ಪೀಳಿಗೆಗೆ ಸೇರಿದವರು. ಅವರಿಗೆ ತುರ್ತು ಪರಿಸ್ಥಿತಿಯ ಬಗ್ಗೆ ತಿಳಿದಿಲ್ಲ, ಅವರಿಗೆ ವಿಭಜನೆ ಮತ್ತು ಸ್ವಾತಂತ್ರ್ಯ ಹೋರಾಟದ ಬಗ್ಗೆಯೂ ತಿಳಿದಿಲ್ಲ ಎಂದು ಭಾಗವತ್ ಹೇಳಿದರು.

RELATED ARTICLES

Latest News