ಬೆಂಗಳೂರು,ಏ.13- ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದಿನಿಂದ ಏ.18 ರವರೆಗೆ ಅಂಚೆ ಮತದಾನ ನಡೆಯಲಿದೆ.85 ವರ್ಷಕ್ಕಿಂತ ಮೇಲ್ಪಟ್ಟ ಮತದಾರರು ಶೇ.40 ಕ್ಕಿಂತ ಹೆಚ್ಚಿನ ದಿವ್ಯಾಂಗ ಮತದಾರರು (ಇಡಬ್ಲ್ಯೂಡಿ, ಎವಿಪಿಡಿ) ಮಾತ್ರ ಮನೆಯಿಂದ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಮನೆಯಿಂದ ಮತದಾನ ಮಾಡುವ ಸೌಲಭ್ಯವನ್ನು ಆಯ್ಕೆ ಮಾಡಿಕೊಂಡಿರುವ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರು ಹಾಗೂ ವಿಕಲಚೇತನರಿಗೆ ಮತದಾನ ಮಾಡಲು ದಿನಾಂಕವನ್ನು ನಿಗದಿಪಡಿಸಲಾಗಿದೆ. ಮನೆಯಿಂದ ಮತದಾನ ಪ್ರಕ್ರಿಯೆಗಳನ್ನು ವೀಕ್ಷಿಸಲು ಸ್ರ್ಪಧಿಸುವ ಅಭ್ಯರ್ಥಿಗಳ ಪರವಾಗಿ ಅಧಿಕೃತ ಪ್ರತಿನಿಧಿಯನ್ನು ನೇಮಿಸಿಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳಿಗೆ ತಿಳಿಸಿರುವುದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ನಮೂನೆ- 12 ಡಿ ಆಯ್ಕೆ ಮಾಡಿದ ಮತದಾರರ ವಿವರ ಕೆಳಕಂಡಂತಿದೆ :
ಉಡುಪಿ – ಚಿಕ್ಕಮಗಳೂರು ; 4,665 ಹಿರಿಯ ಮತದಾರರು, 1503 ದಿವ್ಯಾಂಗ ಮತದಾರರು
ಹಾಸನ ; 2636 ಹಿರಿಯ ಮತದಾರರು, 1377 ಪಿಡಬ್ಲ್ಯೂಡಿ
ದಕ್ಷಿಣ ಕನ್ನಡ ; 6053 ಹಿರಿಯ ಮತದಾರರು, 1975 ಪಿಡಬ್ಲ್ಯೂಡಿ
ಚಿತ್ರದುರ್ಗ ; 2723 ಹಿರಿಯ ಮತದಾರರು, 2059 ಪಿಡಬ್ಲ್ಯೂಡಿ
ತುಮಕೂರು ; 3069 ಹಿರಿಯ ಮತದಾರರು, 889 ಪಿಡಬ್ಲ್ಯೂಡಿ
ಮಂಡ್ಯ ; 2570 ಹಿರಿಯ ಮತದಾರರು, 1075 ಪಿಡಬ್ಲ್ಯೂಡಿ
ಮೈಸೂರು ; 2475 ಹಿರಿಯ ಮತದಾರರು, 918 ಪಿಡಬ್ಲ್ಯೂಡಿ
ಚಾಮರಾಜನಗರ ; 982 ಹಿರಿಯ ಮತದಾರರು, 445 ಪಿಡಬ್ಲ್ಯೂಡಿ
ಬೆಂಗಳೂರು ಗ್ರಾಮಾಂತರ ; 2240 ಹಿರಿಯ ಮತದಾರರು, 768 ಪಿಡಬ್ಲ್ಯೂಡಿ
ಬೆಂಗಳೂರು ಉತ್ತರ ; 1975 ಹಿರಿಯ ಮತದಾರರು, 87 ಪಿಡಬ್ಲ್ಯೂಡಿ
ಬೆಂಗಳೂರು ಕೇಂದ್ರ ; 1752 ಹಿರಿಯ ಮತದಾರರು, 60 ಪಿಡಬ್ಲ್ಯೂಡಿ
ಬೆಂಗಳೂರು ದಕ್ಷಿಣ ; 2469 ಹಿರಿಯ ಮತದಾರರು, 54 ಪಿಡಬ್ಲ್ಯೂಡಿ
ಚಿಕ್ಕಬಳ್ಳಾಪುರ ; 1639 ಹಿರಿಯ ಮತದಾರರು, 941 ಪಿಡಬ್ಲ್ಯೂಡಿ
ಕೋಲಾರ ; 1433 ಹಿರಿಯ ಮತದಾರರು, 806 ಪಿಡಬ್ಲ್ಯೂಡಿ ಮತದಾರರಿದ್ದಾರೆ.
14 ಲೋಕಸಭಾ ಕ್ಷೇತ್ರಗಳಲ್ಲಿ 36,691 ಮಂದಿಯಲ್ಲಿ 85 ಮೇಲ್ಪಟ್ಟ ಹಿರಿಯ ಮತದಾರರು ಹಾಗೂ 12,957 ಪಿಡಬ್ಲ್ಯೂಡಿ ಮತದಾರರು, 12 ಡಿ ಮನೆಯಲ್ಲೇ ಮತದಾನ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.