Homeರಾಜ್ಯಡಿಕೆಶಿ ಜೊತೆ ಪ್ರಜ್ವಲ್‌ ರೇವಣ್ಣ ಕಾರು ಚಾಲಕನ ಲಿಂಕ್ ಕುರಿತು ದಾಖಲೆ ಇದೆ : ಹೆಚ್ಡಿಕೆ

ಡಿಕೆಶಿ ಜೊತೆ ಪ್ರಜ್ವಲ್‌ ರೇವಣ್ಣ ಕಾರು ಚಾಲಕನ ಲಿಂಕ್ ಕುರಿತು ದಾಖಲೆ ಇದೆ : ಹೆಚ್ಡಿಕೆ

ಬೆಂಗಳೂರು,ನ.2- ಸ್ಟಿಂಗ್‌ ಆಪರೇಷನ್‌ ಆರೋಪದಲ್ಲಿ ಕೇಂದ್ರ ಸಚಿವರ ಮನೆಯ ಲಿಂಕ್‌ ಇದೆ ಎಂದು ಆರೋಪಿಸಲಾಗಿದೆ. ಆದರೆ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಕಾರು ಚಾಲಕರಾಗಿದ್ದ ಕಾರ್ತಿಕ್‌ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮನೆಗೆ ಹೋಗಿದ್ದರು ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ಒಂದು ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ಅವರಿಗೆ ಶಿಕ್ಷೆಯಾಗಿದ್ದು, ಇನ್ನೊಂದು ಪ್ರಕರಣದ ವಿಚಾರಣೆ ನಡೆಯುತ್ತಿದೆ. ಕಾರ್ತಿಕ್‌ ಎಂಬುವವರು ಡಿ.ಕೆ.ಶಿವಕುಮಾರ್‌ ಅವರ ಮನೆಗೆ ಹೋಗಿರುವುದಕ್ಕೆ ಸಿಡಿಆರ್‌ ದಾಖಲೆ ಇದೆ. ಇದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿಯವರು ಪ್ರಧಾನಿಯಾಗಲಿಲ್ಲ. ಮಾಜಿ ಪ್ರಧಾನಿ ಅವರ ಮೊಮಗ ಎಂಬುದನ್ನು ದೇಶಾದ್ಯಂತ ಅಪಪ್ರಚಾರ ಮಾಡಬೇಕು ಎಂದು ನಮ ಕುಟುಂಬವನ್ನು ಹಾಳು ಮಾಡಿದ್ದಾರೆ. ರಾಹುಲ್‌ಗಾಂಧಿ, ಕಾಂಗ್ರೆಸ್‌‍ ನಾಯಕ ಸುರ್ಜೇವಾಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರೂ ಸೇರಿ ಮಾಡಿದ್ದಾರೆ ಎಂದು ದೂರಿದರು.

ಕಾರ್ತಿಕ್‌ ಎಂಬಾತನನ್ನು ಮನೆಗೆ ಕರೆಸಿಕೊಂಡು ಡಿ ಕೆ ಶಿವಕುಮಾರ್‌ ಮತ್ತು ಡಿ ಕೆ ಸುರೇಶ್‌ ನಮ ಕುಟುಂಬವನ್ನು ಹಾಳು ಮಾಡುವಂತಹ ಕೆಲಸ ಮಾಡಿದ್ದಾರೆ. ಇದರ ಬಗ್ಗೆ ತನಿಖೆ ಮಾಡಿದ್ದಾರೆಯೇ? ದೆಹಲಿಯ ನಮ ನಿವಾಸಕ್ಕೆ ಬರುವವರನ್ನು ಚೆಕ್‌ ಮಾಡುವುದಿಲ್ಲ. ನೂರಾರು ಜನ ಬಂದು ಹೋಗುತ್ತಾರೆ. ಬಾಗಿಲು ತೆರೆದಿದೆ. ಬಂದವರಿಗೆ ಊಟದ ವ್ಯವಸ್ಥೆ ಮಾಡುತ್ತೇವೆ.

ಪ್ರಮಾಣಿಕ ತನಿಖೆಯನ್ನು ಸ್ಟಿಂಗ್‌ ಆಪರೇಷನ್‌ ವಿಚಾರದಲ್ಲಿ ಮಾಡಬೇಕು. ಸ್ಟಿಂಗ್‌ ಆಪರೇಷನ್‌ ಪ್ರಕರಣದ ತನಿಖೆ ನಡೆಸುತ್ತಿದ್ದ ಸತೀಶ್‌ ಎಂಬ ಇನ್‌ಸ್ಪೆಕ್ಟರ್‌ ಅನ್ನು ಏಕೆ ತೆಗೆದಿದ್ದೀರಿ?, ವಶಪಡಿಸಿಕೊಂಡ ಮೊಬೈಲ್‌ಗಳನ್ನು ಪೂಜೆ ಮಾಡುತ್ತಿದ್ದೀರ? ರಿತೇಶ್‌ ಪಾಂಡೆ ಎಂಬ ವ್ಯಕ್ತಿಯ ಮುಖವನ್ನೇ ನೋಡಿಲ್ಲ.

ನಗರ ಪೊಲೀಸ್‌‍ ಆಯುಕ್ತರು, ಡಿಜಿಪಿ ಸಲೀಂ ಅಹಮದ್‌ ಅವರು ಒತ್ತಡಕ್ಕೆ ಮಣಿಯದೇ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ನಾನು ಹೋರಾಟ ಮಾಡುವುದಾದರೆ ನೇರವಾಗಿಯೇ ಮಾಡುತ್ತೇನೆ. ಹಿಂಬಾಗಿಲ ಮೂಲಕ ಅಥವಾ ಪರೋಕ್ಷವಾಗಿ ಹೋರಾಟ ಮಾಡುವುದಿಲ್ಲ ಎಂದು ಪ್ರಿಯಾಂಕ್‌ ಖರ್ಗೆ ಆರೋಪಕ್ಕೆ ತಿರುಗೇಟು ನೀಡಿದರು.

ನನ್ನ ನಡವಳಿಕೆ ಬಗ್ಗೆ ಈಗಾಗಲೇ ರಾಜ್ಯದ ಜನರು ಮುದ್ರೆ ಒತ್ತಿದ್ದಾರೆ. ನಿಮ ಮುದ್ರೆಯನ್ನು ಕೇಳುವುದಿಲ್ಲ ಎಂದರು. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಸಂಚು ರೂಪಸಿದ್ದರು ಎಂದು ಕಾಂಗ್ರೆಸ್‌‍ನವರೇ ಬಹಳ ಜನ ಹೇಳಿದ್ದಾರೆ. ಸತ್ಯಾಸತ್ಯತೆ ರಾಹುಲ್‌ಗಾಂಧಿಗೆ ಅರ್ಥವಾಗಿ ಕಟ್ಟುಕಥೆ ಎಂಬುದು ಜ್ಞಾನೋದಯವಾದರೆ ಬದಲಾವಣೆಯಾಗಬಹುದು ಎಂದರು.

ಇದೇ ರೀತಿ ಆಡಳಿತ ನಡೆಸುತ್ತಿದ್ದರೆ ಕರ್ನಾಟಕದಲ್ಲಿ ಸಂಪೂರ್ಣವಾಗಿ ನಿಮಗೆ ಬಾಗಿಲು ಹಾಕುತ್ತಾರೆ ಎಂದು ಕುಮಾರಸ್ವಾಮಿಯವರು ಶಿವಕುಮಾರ್‌ಗೆ ತಿರುಗೇಟು ನೀಡಿದರು.
ಯಾವುದಕ್ಕೂ ನಾವು ರಕ್ಷಣೆ ಪಡೆಯಲು ಹೋಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರನ್ನೂ ಕೂಡಾ ನಾವು ರಕ್ಷಣೆ ನೀಡುವಂತೆ ನಾವು ಕೇಳಿಲ್ಲ. 14 ವರ್ಷದಿಂದಲೂ ನಮ ವಿರುದ್ಧ ಪ್ರಕರಣ ಬಾಕಿ ಇದ್ದರೂ ನಾವು ರಕ್ಷಣೆ ಪಡೆಯುವಂತಹ ಯಾವುದೇ ಕಾರ್ಯವನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

RELATED ARTICLES

Latest News