ಕಲ್ಬುರ್ಗಿ, ಡಿ.21- ಅಧಿಕಾರ ಹಂಚಿಕೆಗೆ ಸಂಬಂಧ ಪಟ್ಟಂತೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಪದೇ ಪದೇ ಹೇಳುತ್ತಿರುವ ಹಂತದಲ್ಲೇ, ಗೊಂದಲ ಗಳನ್ನು ಸ್ಥಳೀಯ ಮಟ್ಟದಲ್ಲೇ ಬಗೆಹರಿಸಿಕೊಳ್ಳಬೇಕು, ಎಲ್ಲದಕ್ಕೂ ಹೈಕಮಾಂಡ್ ಹೇಳಬಾರದು ಎನ್ನುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಹತ್ವದ ಸಂದೇಶ ರವಾನಿಸಿದ್ದಾರೆ.
ಕಲ್ಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ರಾಜ್ಯ ನಾಯಕರಿಗೆ ಮಹತ್ವದ ಸಂದೇಶ ನೀಡಿದ್ದಾರೆ.ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರ ನಡುವೆ ದೆಹಲಿಯಲ್ಲಿ ಸಂಧಾನ ಸಭೆ ನಡೆಸಿ ಅಧಿಕಾರ ಹಂಚಿಕೆಯ ಗೊಂದಲಗಳನ್ನು ಬಗೆಹರಿಸಬೇಕು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೋ ಅಥವಾ ಇಲ್ಲವೋ ? ಡಿ.ಕೆ.ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುತ್ತಾರೋ ? ಇಲ್ಲವೋ ಎಂಬ ಚರ್ಚೆಗಳು ದಿನೇ ದಿನೇ ರಾಜ್ಯ ರಾಜಕೀಯವನ್ನು ಕಾವೇರುವಂತೆ ಮಾಡುತ್ತಿವೆ.
ಹೈಕಮಾಂಡ್ ನಾಯಕರ ಸೂಚನೆಯ ಮೇರೆಗೆ ಎರಡು ಬಾರಿ ಉಪಹಾರಕೂಟ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಕುಮಾರ್ ಸಂಘರ್ಷಕ್ಕೆ ತಾತ್ಕಾಲಿಕ ಕದನ ವಿರಾಮ ಘೋಷಿಸಿದ್ದರು.
ಇಂದು ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಮಾತನಾಡಿರುವ ಡಿ.ಕೆ.ಶಿವಕುಮಾರ್ ನಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಹೇಳಿದರೆ, ಮತ್ತೊಂದಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಮಾತುಕತೆಗಾಗಿ ದೆಹಲಿಗೆ ಕರೆದರೆ ಹೋಗುತ್ತೇನೆ ಎಂದಿದ್ದಾರೆ.
ಈ ಹೇಳಿಕೆಗಳ ನಡುವೆ ಕಾಂಗ್ರೆಸ್ ನಾಯಕ ಸುದರ್ಶನ್ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದಿರುವ ಪತ್ರ ಸಂಚಲನ ಮೂಡಿಸಿದೆ. ಹೈಕಮಾಂಡ್ ಮಧ್ಯ ಪ್ರವೇಶಿಸಿ ಗೊಂದಲಗಳನ್ನು ಬಗೆಹರಿಸಬೇಕು ಎಂದು ಸಚಿವರಾದ ಡಾ.ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವಾರು ಮಂದಿ ಪ್ರತಿಪಾದಿಸಿದರು.
ನಾಯಕತ್ವ ವಿವಾದವನ್ನು ಇತ್ಯರ್ಥಪಡಿಸಿ ಸುಗಮ ಆಡಳಿತಕ್ಕೆ ಸಹಕರಿಸಬೇಕು ಎಂಬ ರಾಜ್ಯ ಕಾಂಗ್ರೆಸ್ ನಾಯಕರ ಒತ್ತಾಸೆಗೆ ಮಲ್ಲಿಕಾರ್ಜುನ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಕಲ್ಬುರ್ಗಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗೊಂದಲಗಳನ್ನು ಹೈಕಮಾಂಡ್ ಸೃಷ್ಟಿಸಿಲ್ಲ, ಸ್ಥಳೀಯವಾಗಿ ಗೊಂದಲ ಮಾಡಿಕೊಳ್ಳಲಾಗಿದೆ. ಸ್ಥಳೀಯ ನಾಯಕರುಗಳೇ ಇದನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳುವ ಮೂಲಕ ನಾಯಕತ್ವ ವಿವಾದವನ್ನು ಮೈ ಮೇಲೆ ಎಳೆದುಕೊಳ್ಳಲು ನಿರಾಕರಿಸಿದ್ದಾರೆ.
ಕಾಂಗ್ರೆಸ್ಸಿನ ನಾಯಕ ವಿ.ಆರ್.ಸುದರ್ಶನ್ ಪತ್ರ ಬರೆದು ರಾಜ್ಯದಲ್ಲಿನ ಅಧಿಕಾರ ಹಂಚಿಕೆಯ ಗೊಂದಲಗಳನ್ನು ಬಗೆಹರಿಸಿ ಎಂದು ಮನವಿ ಮಾಡಿರುವ ಪತ್ರ ನನಗೆ ತಲುಪಿಲ್ಲ. ಕಚೇರಿಗೆ ಬಂದಿರಬಹುದು. ಅದರಲ್ಲಿ ಹೈಕಮಾಂಡ್ ನಾಯಕರು ಗೊಂದಲ ಬಗೆಹರಿಸಬೇಕು ಎಂಬ ಅಭಿಪ್ರಾಯ ಇರಬಹುದು, ಪತ್ರದಲ್ಲಿ ಇನ್ನೂ ಏನೇನು ಸಲಹೆ ಕೊಟ್ಟಿದ್ದಾರೆ ಎಂದು ಪರಿಶೀಲಿಸಿ ನಂತರ ಪ್ರತಿಕ್ರಿಯಿಸುವುದಾಗಿ ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ಡಿ.23ರಂದು ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.ಈ ಗೊಂದಲಗಳನ್ನು ಸ್ಥಳೀಯವಾಗಿಯೇ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಎಲ್ಲದಕ್ಕೂ ಹೈಕಮಾಂಡ್ ಮಧ್ಯ ಪ್ರವೇಶಿಸಬೇಕು ಎನ್ನುವುದು ಸರಿಯಲ್ಲ. ಇಲ್ಲಿನ ಗೊಂದಲಗಳನ್ನು ಸ್ಥಳೀಯ ನಾಯಕರು ತಾವಾಗಿಯೇ ಬಗೆಹರಿಸಿಕೊಳ್ಳಬೇಕು ಎಂದರು.
ಮುಂದುವರೆದು ಮಾತನಾಡಿರುವ ಖರ್ಗೆ ಅವರು, ಪಕ್ಷವನ್ನು ಎಲ್ಲರೂ ಸೇರಿ ಕಟ್ಟಿದ್ದಾರೆ. ಯಾರೋ ಒಬ್ಬರು ನಾನು ಕಟ್ಟಿದ್ದೇನೆ ಎಂದು ಹೇಳಿಕೊಳ್ಳುವುದು ಸರಿಯಲ್ಲ. ಇದು ಕಾರ್ಯಕರ್ತರು ಕಟ್ಟಿದ ಪಕ್ಷ. ಯಾವುದೇ ನಾಯಕರು ಕಾಂಗ್ರೆಸ್ ಗೆ ಬಂದರು ನಮ ಪಕ್ಷದ ಕಾರ್ಯಕರ್ತರು ಅವರನ್ನು ಬೆಂಬಲಿಸುತ್ತಾರೆ. ನನ್ನಿಂದಲೇ ಪಕ್ಷ ಗೆದ್ದಿದೆ ಎಂದು ಯಾರು ಹೇಳಿಕೊಳ್ಳಬಾರದು ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ನಾಯಕರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಕೆಲವು ಕಾರ್ಯಕರ್ತರು ಇಂತಹವರಿಂದಲೇ ಪಕ್ಷ ಉಳಿಯುತ್ತದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಈ ಧೋರಣೆಯನ್ನು ಬಿಟ್ಟು ಬಿಡಬೇಕು ಎನ್ನುವ ಮೂಲಕ ವ್ಯಕ್ತಿ ಪೂಜೆ ಮಾಡುವವರಿಗೆ ಮಲ್ಲಿಕಾರ್ಜುನ ಖರ್ಗೆ ಕಟಕ್ ಎಚ್ಚರಿಕೆ ನೀಡಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ನನಗೆ
ನರೇಗಾ ಯೋಜನೆಯ ಹೆಸರು ಬದಲಾವಣೆಗೆ ನಮ್ಮ ಪಕ್ಷದ ಹೋರಾಟ ಮುಂದುವರಿಯುತ್ತದೆ ಇದು ಬಡವರಿಗಾಗಿ ರೂಪಿಸಿದ ಯೋಜನೆ ಏನ್ ಹೇಳಿದ್ರು ಎಂದು ಹೇಳಿದರು ಅಟಾಮಿಕ್ ಎನರ್ಜಿಯ ಬಗ್ಗೆ ಮನಮೋಹನ್ ಸಿಂಗ್ ಸರ್ಕಾರ ಯೋಜನ ರೂಪಿಸಿದಾಗ ಬಿಜೆಪಿಯವರು ವಿರೋಧ ಮಾಡಿದ್ದರು ಈಗ ಅವರೇ ಅದೇ ಯೋಜನೆಯನ್ನು ಜಾರಿಗೆ ತರುತ್ತಿದ್ದಾರೆ ಕಾಂಗ್ರೆಸ್ ತರುವ ಯೋಜನೆಗಳನ್ನು ಮೊದಲು ವಿರೋಧ ಮಾಡುತ್ತಾರೆ ನಂತರ ಅವರು ನಾವೇ ರೂಪಿಸಿದ್ದಾಗಿ ಹೇಳಿ ಬೆಂಬಿಸಿಕೊಳ್ಳುತ್ತಾರೆ ಬಿಜೆಪಿಯವರಿಗೆ ದೇಶದ ಹಿತ ದೃಷ್ಟಿಯಿಂದ ಮುಂದ ದೂರ ದೃಷ್ಟಿ ಇಲ್ಲ ಮುಂದಾಲೋಚನೆ ಇಲ್ಲ ನೀತಿ ಆಯೋಗವನ್ನು ಯೋಜನೆ ಆಯೋಗವನ್ನು ನೀತಿ ಆಯೋಗ ಮಾಡಿದರು ಅಲ್ಲಿ ಈಗ ನೀತಿಯು ಇಲ್ಲ ಯೋಜನೆ ಇಲ್ಲ ಎಂಬಂತಾಗಿದೆ ಹೆಸರು ಬದಲಾವಣೆ ಮಾತ್ರ ಬಿಜೆಪಿಯವರ ಸಾಧನೆ ಎಂದರು ಸರ್ ನೆಹರು ಜವಾಹರ್ಲಾಲ್ ನೆಹರು ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಹಲವಾರು ಹಿರಿಯರು ಮಹನೀಯರು ಸ್ಥಾಪಿಸಿದ ಸಂಸ್ಥೆಗಳನ್ನು ರೂಪಿಸಿದ ಯೋಜನೆಗಳನ್ನು ಬಿಜೆಪಿ ಸರ್ಕಾರ ನಾಶ ಮಾಡುತ್ತಿದೆ ಈ ಹಿಂದೆ ತಾವು ಕೇಂದ್ರ ಸಚಿವರಾಗಿದ್ದಾಗ 14 ವಿವಿಧ ದೇಶಗಳಿಗೆ ಭೇಟಿ ನೀಡಿದೆ ನರೇಗಾದಂತಹ ಯೋಜನೆ ನಮ್ಮಲ್ಲಿಲ್ಲ ಎಂದು ಹೇಳಿಕೊಂಡಿದ್ದನ್ನು ನಾನು ಕೇಳಿದ್ದೇನೆ ನರೇಗಾ ವನ್ನು ನಾಶ ಮಾಡಿ ಬಳೆ ಬಡವರನ್ನು ಗುಲಾಮಗಿರಿಗೆ ತಳ್ಳುವ ಪುನಾರವನ್ನು ಕೇಂದ್ರ ಸರ್ಕಾರ ನಡೆದಿದೆ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆದಿದೆ ಎಂದು ಆರೋಪಿಸಿದೆಬಾಂಗ್ಲಾದೇಶಿಯರು ದೇಶದ ಒಳಗೆ ನುಸುಳುತ್ತಿದ್ದಾರೆ ಅವರನ್ನು ತಾಕತ್ತಿಲ್ಲದ ಮೇಲೆ ಬಿಜೆಪಿಯವರು ಕೇಂದ್ರದಲ್ಲಿ ಅಧಿಕಾರದಲ್ಲಿ ಏಕ್ ಇದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಕೇಡಿ ಕಾರ್ಯಕರ್ತರು ಕಿಡಿ ಕರೆದರು ಗಡಿಗಳಲ್ಲಿ ಬಲಪ್ರದರ್ ಶಸ್ತ್ರ ಬಲಗಳನ್ನು ಬಳಸಿಕೊಂಡು ರಕ್ಷಣೆ ನೀಡಬೇಕು ಕಾಂಗ್ರೆಸಿಗರು ಎಲ್ಲಾ ಕಡೆ ಹೋಗಿ ನೂಸುಳಿಕೆಯನ್ನು ಸ್ಥಾಪಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ರು ಬಿಜೆಪಿಯ ಸರ್ಕಾರಗಳೇನು ನಿದ್ದೆ ಮಾಡುತ್ತಿವೆಯೇ ಎಲ್ಲದಕ್ಕೂ ಕಾಂಗ್ರೆಸ್ ಪಕ್ಷವನ್ನೇ ಹೊಣೆ ಮಾಡಿ ಜವಾಬ್ದಾರಿಯಿಂದ ನುಡಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.
