Sunday, December 21, 2025
Homeಬೆಂಗಳೂರುಸಾವಿನಲ್ಲೂ ಜೊತೆಯಾದ ದಂಪತಿ

ಸಾವಿನಲ್ಲೂ ಜೊತೆಯಾದ ದಂಪತಿ

Wife collapses and dies after hearing news of husband's death

ಯಲಹಂಕ,ಡಿ.21- ಅರವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಜೊತೆಯಾಗಿಯೇ ಸಾರ್ಥಕ ಬದುಕು ಕಂಡ ದಂಪತಿ ಸಾವಿನಲ್ಲೂ ಜೊತೆಯಾಗಿರುವ ವಿಶೇಷ ಘಟನೆಯೊಂದು ಯಲಹಂಕ ನಗರದ ಅಟ್ಟೂರು ವಾರ್ಡ್‌ ವ್ಯಾಪ್ತಿಯ ಅನಂತಪುರದ ಮಹಾಲಕ್ಷಿ ಬಡಾವಣೆಯಲ್ಲಿ ನಡೆದಿದೆ. ಟಿ.ಸಿ.ವೆಂಕಟಗಿರಿಯಪ್ಪ(88), ಆರ್‌.ಎಂ.ನಾಗರತ್ನಮ(82) ಮೃತ ದಂಪತಿ.

ಇಂದು ಬೆಳಿಗ್ಗೆ 6 ಗಂಟೆಗೆ ಪತಿ ಟಿ.ಸಿ.ವೆಂಕಟಗಿರಿಯಪ್ಪ ನವರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದು, ಪತಿಯ ಸಾವಿನ ಸುದ್ದಿ ಕೇಳಿದ ಪತ್ನಿ ನಾಗರತ್ನಮ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕುಸಿದು ಪ್ರಾಣ ಬಿಟ್ಟಿದ್ದಾರೆ. ಈ ಮೂಲಕ ಸಾವಿನಲ್ಲೂ ದಂಪತಿ ಜೊತೆಯಾಗಿದ್ದಾರೆ.ದಂಪತಿಗೆ ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಮೊಮಕ್ಕಳು, ಮರಿ ಮೊಮಕ್ಕಳನ್ನು ಅಗಲಿದ್ದಾರೆ.

ಟಿ.ಸಿ.ವೆಂಕಟಗಿರಿಯಪ್ಪ ನವರು ಮೂಲತಃ ಚಿಂತಾಮಣಿ ಯವರಾಗಿದ್ದು, ಕಂದಾಯ ಇಲಾಖೆಯಲ್ಲಿ ಸರ್ವೇಯರ್‌ ಆಗಿ 28 ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು. ವಯೋಸಹಜ ಕಾಯಿಲೆ ಯಿಂದ ಬಳಲುತ್ತಿದ್ದ ವೆಂಕಟಗಿರಿಯಪ್ಪ ಇಂದು ಬೆಳಿಗ್ಗೆ 6 ಗಂಟೆಯಲ್ಲಿ ನಿಧನರಾಗಿದ್ದಾರೆ. ಪತಿಯ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾಗಿ ಪತ್ನಿ ನಾಗರತ್ನಮ ಹೃದಯಾಘಾತ ದಿಂದ ಮೃತಪಟ್ಟಿದ್ದಾರೆ.

ಮೃತರ ಅಂತಿಮ ಸಂಸ್ಕಾರವನ್ನು ಯಲಹಂಕ ಕ್ಷೇತ್ರದ ಮೇಡಿ ಅಗ್ರಹಾರದ ಚಿತಾಗಾರದಲ್ಲಿ ಭಾನುವಾರ ಮಧಾಹ್ನ 2 ಗಂಟೆಗೆ ನೆರವೇರಿಸಿರುವುದಾಗಿ ಪುತ್ರ ವಿ.ಮಂಜುನಾಥ್‌ ತಿಳಿಸಿದ್ದಾರೆ. ಟಿ.ಸಿ.ವೆಂಕಟಗಿರಿಯಪ್ಪ ಮತ್ತು ಆರ್‌.ಎಂ. ನಾಗರತ್ನಮ ಅವರ ನಿಯಮಕ್ಕೆ ಯಲಹಂಕ ಶಾಸಕ ಎಸ್‌‍.ಆರ್‌.ವಿಶ್ವನಾಥ್‌, ಬಿಜೆಪಿ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್‌, ಡಾ.ಶಶಿಕುಮಾರ್‌, ರಾಜಾನುಕುಂಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ನ್ಯೂಟೌನ್‌ ಕ್ಲಬ್‌ನ ನಿರ್ದೇಶಕರಾದ ಎಸ್‌‍.ಜಿ.ನರಸಿಂಹಮೂರ್ತಿ. ಎಸ್‌‍.ಟಿ.ಡಿ.ಮೂರ್ತಿ, ಕ್ಕಬ್‌ನ ಅಧ್ಯಕ್ಷ ದೇವರಾಜಪ್ಪ, ಹರ್ಷವರ್ಧನ್‌, ಬಾಲು ಸೇರಿದಂತೆ ಕ್ಲಬ್‌ನ ನಿರ್ದೇಶಕರು, ಹಲವು ಬಿಜೆಪಿ ಮುಖಂಡರು, ಸಂಬಂಧಿಗಳು, ಬಂಧುಮಿತ್ರರು ಶೋಕ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News