ಅಡಿಲೇಡ್, ಡಿ.21- ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಯನ್ನು ಮಾಜಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾವು 3-0ಯಿಂದ ಗೆದ್ದು ಸಂಭ್ರಮಿಸಿದೆ. ಮೊದಲೆರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ಇಂಗ್ಲೆಂಡ್ ಪಡೆಯು ಸರಣಿಯಲ್ಲಿ ಜೀವಂತವಾಗಿ ಉಳಿಯಲು ನಿರ್ಣಾಯಕವಾಗಿದ್ದ 3ನೇ ಪಂದ್ಯದಲ್ಲೂ ಆಗ್ರ ಕ್ರಮಾಂಕದ ಬ್ಯಾಟರ್ ಗಳ ವೈಫಲ್ಯದಿಂದ 82 ರನ್ ಗಳಿಂದ ಸೋಲು ಕಂಡಿದೆ.
ಸ್ಟ್ರಾಕ್, ಕಮಿನ್‌್ಸ , ಲಿಯಾನ್ ಮಿಂಚು:
ಅಡಿಲೇಡ್ ನ ವೇಗದ ಪಿಚ್ ನಲ್ಲೂ ತಮ ಸ್ಪಿನ್ ಮೋಡಿಯಿಂದ ಅನುಭವಿ ಸ್ಪಿನ್ನರ್ ನಥೇನ್ ಲಿಯಾನ್ (77ಕ್ಕೆ 3) ಅವರು ಆಂಗ್ಲರ ಬ್ಯಾಟರ್ಸ್‌ಗಳಿಗೆ ಲಗಾಮು ಹಾಕುವಲ್ಲಿ ಯಶಸ್ವಿಯಾದರೆ, ಪಿಚ್ ನ ಲಾಭ ಪಡೆದ ಅನುಭವಿ ವೇಗಿಗಳಾದ ಮಿಚೆಲ್ ಸ್ಟ್ರಾಕ್ (62ಕ್ಕೆ 3) ಹಾಗೂ ನಾಯಕ ಪ್ಯಾಟ್ ಕಮಿನ್ಸ್ (48ಕ್ಕೆ3) ಇಂಗ್ಲೆಂಡ್ ನ ಬ್ಯಾಝ್‌ಬಾಲ್ ಸೂತ್ರ ಮುರಿಯುವಲ್ಲಿ ಯಶಸ್ವಿಯಾದರು.
ವ್ಯರ್ಥವಾದ ಜಾಕ್, ಸ್ಮಿತ್ ಅರ್ಧಶತಕ:
ನಾಲ್ಕನೇ ಇನ್ನಿಂಗ್‌್ಸ ನಲ್ಲಿ ಪಂದ್ಯ ಗೆಲ್ಲಲು 435 ರನ್ ಗಳ ಬೃಹತ್ ಸವಾಲು ಪಡೆದ ಇಂಗ್ಲೆಂಡ್ ಆರಂಭಿಕ ಆಟಗಾರ ಬೆನ್ ಡೆಕೆಟ್ (4 ರನ್), ಓಲಿ ಪೋಪೆ (17 ರನ್) ಹಾಗೂ ನಾಯಕ ಬೆನ್ ಸ್ಟೋಕ್‌್ಸ (5 ರನ್) ವಿಕೆಟ್ ಗಳನ್ನು ಲಘುವಾಗಿ ಕಳೆದುಕೊಂಡರೂ, ಮತ್ತೊಬ್ಬ ಆರಂಭಿಕ ಆಟಗಾರ ಜಾಕ್ ಕಾರ್ವ್ಲೆ (85ರನ್) ಹಾಗೂ ಜೇಮ್ ಸಿತ್ (60 ರನ್)ರ ಅರ್ಧಶತಕಗಳು ಪಂದ್ಯ ಗೆಲ್ಲುವ ಭರವಸೆ ಮೂಡಿಸಿತ್ತು.
ಅಂತಿಮ ದಿನದಾಟದಲ್ಲಿ ಪಂದ್ಯ ಗೆಲ್ಲಲು 227 ರನ್ ಗಳಿಸಿದ್ದ ಇಂಗ್ಲೆಂಡ್ ಗೆ ಸಿತ್ (60 ರನ್), ವಿಲ್ ಜ್ಯಾಕ್‌್ಸ (47 ರನ್) ಹಾಗೂ ಬ್ರೇಡನ್ ಕ್ರೇಸ್ (ಅಜೇಯ 39ರನ್) ಪಂದ್ಯ ಗೆಲ್ಲಿಸುವ ಭರವಸೆ ಮೂಡಿಸಿದ್ದರಾದರೂ 352 ರನ್ ಗಳಿಗೆ ಸರ್ವಪತನವಾಗುವ ಮೂಲಕ 82 ರನ್ ಗಳಿಂದ ಸೋಲು ಕಂಡಿತು.
ಅಲೇಕ್‌್ಸ ಕೇರಿ ಪಂದ್ಯಪುರುಷೋತ್ತಮ:
ಅಡಿಲೇಡ್ ಟೆಸ್ಟ್ ನ ಎರಡು ಇನ್ನಿಂಗ್ಸ್ ನಲ್ಲಿ ಅದ್ಭುತ ಬ್ಯಾಟಿಂಗ್ (106 ಹಾಗೂ 72 ರನ್) ಹಾಗೂ ಕ್ಷೇತ್ರ ರಕ್ಷಣೆ (6 ಕ್ಯಾಚ್) ಮಾಡಿದ ಅಲೇಕ್‌್ಸ ಕೇರಿ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
