Monday, December 22, 2025
Homeರಾಜ್ಯಸಿಎಂ ಕುರ್ಚಿ ಕಿತ್ತಾಟದಲ್ಲಿ ಸೊರಗಿದ ಕರ್ನಾಟಕ : ಆರ್‌.ಅಶೋಕ್‌ ವಾಗ್ದಾಳಿ

ಸಿಎಂ ಕುರ್ಚಿ ಕಿತ್ತಾಟದಲ್ಲಿ ಸೊರಗಿದ ಕರ್ನಾಟಕ : ಆರ್‌.ಅಶೋಕ್‌ ವಾಗ್ದಾಳಿ

Karnataka is suffering from the CM chair fight: R. Ashok attacks

ಬೆಂಗಳೂರು,ಡಿ.22- ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಇಬ್ಬರ ಕುರ್ಚಿ ಕಿತ್ತಾಟದಲ್ಲಿ ಕರ್ನಾಟಕ ಅಭಿವೃದ್ಧಿ ಇಲ್ಲದೆ ಸೊರಗಬೇಕಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ (R Ashok) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇನೋ ಹೈಕಮಾಂಡ್‌ ಬಯಸುವವರೆಗೂ ತಾನೇ ಸಿಎಂ ಎಂದು ಪದೇ ಪದೇ ಪುನರುಚ್ಚಾರ ಮಾಡುತ್ತಿದ್ದಾರೆ.

ಮತ್ತೊಂದು ಕಡೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹೈಕಮಾಂಡ್‌ ಬಳಿ ಒಪ್ಪಂದವಾಗಿದೆ, ಅಧಿಕಾರ ಹಂಚಿಕೆ ದೆಹಲಿಯಲ್ಲಿ 5-6 ನಾಯಕರ ನಡುವೆ ನಡೆದಿರುವ ಗುಟ್ಟಿನ ವ್ಯಾಪಾರ ಎಂದು ಹೇಳುತ್ತಾ ತಮ ಕನಸು ನೆರವೇರಿಸಿಕೊಳ್ಳಲು ಗುಡಿಗೋಪುರ ಸುತ್ತುತ್ತಿದ್ದಾರೆ.

ಅತ್ತ ಹೈಕಮಾಂಡ್‌ ನೋಡಿದರೆ, ಇದು ರಾಜ್ಯ ಮಟ್ಟದಲ್ಲಿ ಸೃಷ್ಟಿಯಾಗಿರುವ ಗೊಂದಲ, ನೀವೇ ಬಗೆಹರಿಸಿಕೊಳ್ಳಿ ಎಂದು ಜಾರಿಕೊಳ್ಳುತ್ತಿದೆ. ಕಾಂಗ್ರೆಸ್‌‍ ಹೈಕಮಾಂಡ್‌ ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ಕರ್ನಾಟಕದ ಕಾಂಗ್ರೆಸ್‌‍ನಲ್ಲಿ ಉದ್ಭವಿಸಿರುವ ಸಮಸ್ಯೆ ಬಗೆಹರಿಸುವ ಸಾಮರ್ಥ್ಯ ಇಲ್ಲ ಎಂದು ನಾನು ಮೊದಲೇ ಹೇಳಿದ್ದೆ. ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುಮ ಖರ್ಗೆ ಅವರ ಅಸಹಾಯಕ ಮಾತುಗಳು, ನಾನು ಹೇಳಿದ್ದು ಸತ್ಯ ಎಂಬುದನ್ನು ಸಾಬೀತುಪಡಿಸಿದಂತಿದೆ ಎಂದು ಅಶೋಕ್‌ ಹೇಳಿದ್ದಾರೆ.

Read this : ರಾಜ್ಯದಲ್ಲಿರುವ ಅಕ್ರಮ ವಲಸಿಗರನ್ನು ಹೊರಗಟ್ಟುವಂತೆ ಸರ್ಕಾರಕ್ಕೆ ಅಶೋಕ್‌ ಆಗ್ರಹ

RELATED ARTICLES

Latest News