Monday, December 22, 2025
Homeಬೆಂಗಳೂರುಕಾರು ಡಿಕ್ಕಿಯಾಗಿ ಹೋಟೆಲ್‌ ಕ್ಯಾಷಿಯರ್‌ ಸಾವು

ಕಾರು ಡಿಕ್ಕಿಯಾಗಿ ಹೋಟೆಲ್‌ ಕ್ಯಾಷಿಯರ್‌ ಸಾವು

Hotel cashier dies after being hit by car

ಬೆಂಗಳೂರು,ಡಿ.22- ರಸ್ತೆ ದಾಟುತ್ತಿದ್ದ ಕ್ಯಾಷಿಯರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಹೆಚ್‌ಎಸ್‌‍ಆರ್‌ ಲೇಔಟ್‌ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲದ ನಿವಾಸಿ ಸಂತೋಷ್‌ (28) ಮೃತಪಟ್ಟವರು. ಇವರು ಹೋಟೇಲ್‌ವೊಂದರಲ್ಲಿ ಕ್ಯಾಷಿಯರ್‌. ರಾಜೀವ್‌ಗಾಂಧಿ ನಗರದ ಪಿಜಿಯೊಂದರಲ್ಲಿ ಸಂತೋಷ್‌ ವಾಸವಾಗಿದ್ದರು.

ನಿನ್ನೆ ಎಂದಿನಂತೆ ಹೋಟೇಲ್‌ಗೆ ಕೆಲಸಕ್ಕೆ ಹೋಗಿದ್ದಾರೆ. ರಾತ್ರಿ ಕೆಲಸ ಮುಗಿಸಿಕೊಂಡು ಇಂದು ಬೆಳಗಿನ ಜಾವ 1 ಗಂಟೆ ಸುಮಾರಿನಲ್ಲಿ ಪಿಜಿಗೆ ತೆರಳುತ್ತಿದ್ದಾಗ ಹೆಚ್‌ಎಸ್‌‍ಆರ್‌ ಲೇಔಟ್‌ನ 19ನೇ ಮುಖ್ಯರಸ್ತೆಯ ಪೆಟ್ರೋಲ್‌ ಬಂಕ್‌ ಬಳಿ ರಸ್ತೆ ದಾಟುತ್ತಿದ್ದಾಗ ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಸಂತೋಷ್‌ ಅವರು ಗಂಭೀರ ಗಾಯಗೊಂಡರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಹೆಚ್‌ಎಸ್‌‍ಆರ್‌ ಲೇಔಟ್‌ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಸೆಂಟ್‌ ಜಾನ್‌ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News