Homeರಾಜ್ಯಬೆಂಗಳೂರಿನ ಅರಮನೆ ಮೈದಾನದಲ್ಲಿ ಏ.20-22ಕ್ಕೆ ಜಾಗತಿಕ ಹೂಡಿಕೆದಾರರ ಸಮಾವೇಶ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಏ.20-22ಕ್ಕೆ ಜಾಗತಿಕ ಹೂಡಿಕೆದಾರರ ಸಮಾವೇಶ

ಬೆಂಗಳೂರು,ನ.13- ನಗರದ ಅರಮನೆ ಮೈದಾನದಲ್ಲಿ ಏಪ್ರಿಲ್‌ 20ರಿಂದ 22ರವರೆಗೆ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು ವಿಶ್ವ ಮಟ್ಟದ ಉಪಕ್ರಮವಾಗಿದ್ದು, ಇದಕ್ಕೆ ಪೂರಕವಾಗಿ ನೂತನ ವೈಮಾಂತರಿಕ್ಷ ಮತ್ತು ರಕ್ಷಣಾ ನೀತಿ (2026-31), ಕೆಐಎಡಿಬಿ ಮೂಲಕ ಡಿಜಿಟಲ್‌ ಕೈಗಾರಿಕಾ ಭೂಬ್ಯಾಂಕ್‌ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಸಮಾವೇಶದ ಭಾಗವಾಗಿ ವೆಂಚುರೈಸ್‌‍ನ ಮೂರನೇ ಆವೃತ್ತಿ ಹಾಗೂ ಕೆಐಎಡಿಬಿ ಡಿಜಿಟಲ್‌ ಕೈಗಾರಿಕಾ ಭೂ ಬ್ಯಾಂಕ್‌ಗೆ ಚಾಲನೆ ನೀಡಿದ್ದೇವೆ. ಇವೆರಡೂ ವಿಭಿನ್ನ ಉದ್ದೇಶಗಳನ್ನು ಹೊಂದಿದ್ದರೂ, ಒಂದಕ್ಕೊಂದು ಪೂರಕವಾಗಿವೆ.

ಒಂದು ನಾಳಿನ ಉದ್ಯಮಗಳನ್ನು ರೂಪಿಸುವುದರ ಬಗ್ಗೆ ಗಮನಹರಿಸಿದರೆ, ಮತ್ತೊಂದು ಇಂದೇ ಆ ಉದ್ಯಮಗಳನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಮಹತ್ವಾಕಾಂಕ್ಷೆಗೆ ಕಾರ್ಯರೂಪದ ಬೆಂಬಲ ನೀಡುವುದೇ ಜಾಗತಿಕ ಹೂಡಿಕೆದಾರರ ಸಮಾವೇಶ- 2027ರ ಆಶಯ ಎಂಬುದನ್ನು ಈ ಎರಡೂ ಉಪಕ್ರಮಗಳು ಸಾರುತ್ತವೆ ಎಂದು ಹೇಳಿದರು. ಈ ಸಮಾರಂಭವು ಈ ಎಲ್ಲ ಸಾಧನೆಗಳನ್ನೂ, ಹೂಡಿಕೆಯ ಭರವಸೆಯನ್ನು ಯೋಜನೆಗಳಾಗಿ ಪರಿವರ್ತಿಸಿದ ಪ್ರತಿಯೊಂದು ಕಂಪನಿಯ ಕೊಡುಗೆಯನ್ನೂ ಸಂಭ್ರಮಿಸುವ ಸಂದರ್ಭ ಇದಾಗಿದೆ ಎಂದರು.

ಜಾಗತಿ ಹೂಡಿಕೆದಾರರ ಸಮಾವೇಶ- 2027 ಅನ್ನು ನಿಜವಾದ ಅರ್ಥದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನಾಗಿ ರೂಪಿಸುವುದು ನಮ ಸ್ಪಷ್ಟ ಗುರಿಯಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ತಿಂಗಳುಗಳಲ್ಲಿ ಉತ್ತರ ಕರ್ನಾಟಕದಲ್ಲಿ ವಿಶೇಷ ಹೂಡಿಕೆದಾರರ ಸಮಾವೇಶ ಆಯೋಜಿಸಲಿದ್ದೇವೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಹೂಡಿಕೆ ಅವಕಾಶಗಳನ್ನು ನೇರವಾಗಿ ಹೂಡಿಕೆದಾರರ ಮುಂದಿಡುವುದು ಇದರ ಉದ್ದೇಶ ಎಂದರು.

RELATED ARTICLES

Latest News