ಬೆಂಗಳೂರು,ಏ.22- ಸಿಲಿಕಾನ್ ಸಿಟಿಯಲ್ಲಿ ಮುಂಬರುವ 2026ರಲ್ಲಿ ಎಲೆಕ್ಟ್ರಿಕಲ್ ಏರ್ ಟ್ಯಾಕ್ಸಿ ಸೇವೆ ಆರಂಭವಾಗಲಿದೆ. ಇಂಡಿಗೋದ ಪ್ರವರ್ತಕ ಸಮೂಹದ ಇಂಟರ್ಗ್ಲೋಬ್ ಎಂಟರ್ಪ್ರೈಸಸ್ ಸಂಸ್ಥೆ ಏರ್ ಟ್ಯಾಕ್ಸಿ ಸೇವೆ ಆರಂಭಿಸಲು ನಿರ್ಧರಿಸಿದೆ.
ನಗರದಲ್ಲಿ ಏರ್ ಟ್ಯಾಕ್ಸಿ ಸೇವೆ ಆರಂಭಿಸುವ ಉದ್ದೇಶದಿಂದ ಇಂಟರ್ಗ್ಲೋಬ್ ಸಂಸ್ಥೆ ಹಾಗೂ ಅಮೆರಿಕ ಮೂಲದ ಆರ್ಚರ್ ಏವಿಯೇಷನ್ ಸಂಸ್ಥೆಗಳು ನಗರದಲ್ಲಿ ಮ್ಯಾಪಿಂಗ್ ಕಾರ್ಯ ನಡೆಸುತ್ತಿವೆ.
ಮೊದಲ ಹಂತದಲ್ಲಿ ದೆಹಲಿಯಲ್ಲಿ ಏರ್ ಟ್ಯಾಕ್ಸಿ ಸೇವೆ ಆರಂಭಿಸಲಾಗುತ್ತಿದ್ದು ನಂತರ ಸಿಲಿಕಾನ್ ಸಿಟಗೂ ಆ ಸೇವೆಯನ್ನು ವಿಸ್ತರಿಸಲಾಗುವುದು ಎಂದು ತಿಳಿದುಬಂದಿದೆ. ಸರ್ಜಾಪುರ, ಐಟಿಪಿಎಲ್, ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಏರ್ ಟ್ಯಾಕ್ಸಿ ನಿಲ್ದಾಣಗಳ ಗುರುತು ಕಾರ್ಯ ನಡೆಸಲಾಗುತ್ತಿದ್ದ ಡ್ರೋಣ್ ಮಾದರಿಯಲ್ಲಿರುವ ಏರ್ ಟ್ಯಾಕ್ಸಿ ಸೇವೆ ಆರಂಭಿಸಲಾಗುವುದು ಎಂದು ಇಂಡಿಗೋ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏರ್ ಟ್ಯಾಕ್ಸಿ ನಿಲ್ದಾಣ ಹಾಗೂ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಪ್ರದೇಶಗಳ ಗುರುತು ಹಾಕಲಾಗಿದ್ದು, ಏರ್ ಪೋರ್ಟ್ ಗೆ ಏರ್ ಟ್ಯಾಕ್ಸಿಯಲ್ಲಿ ತೆರಳುವವರಿಗೆ 2 ಸಾವಿರಂದ 2,500 ರೂಪಾಯಿ ದರ ನಿಗದಿಪಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.ಉದ್ದೇಶಿತ ಏರ್ ಟ್ಯಾಕ್ಸಿ ಸೇವೆ ಆರಂಭವಾದರೆ ಕೇವಲ 6 ನಿಮಿಷದೊಳಗೆ ಏರ್ ಪೋರ್ಟ್ ಗೆ ತಲುಪಬಹುದಾಗಿದೆ.