Homeರಾಷ್ಟ್ರೀಯಎ.ಎಸ್‌‍.ಬಾಬು ನಿಧನದ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಹೊಸ ರಾಜಕೀಯ ಬೆಳವಣಿಗೆ

ಎ.ಎಸ್‌‍.ಬಾಬು ನಿಧನದ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಹೊಸ ರಾಜಕೀಯ ಬೆಳವಣಿಗೆ

ಚೆನ್ನೈ,ನ.21- ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಮಹತ್ವದ ಚುನಾವಣಾ ಬೆಳವಣಿಗೆಗೆ ವೇದಿಕೆ ಸಿದ್ಧವಾಗುತ್ತಿದೆ. ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥರಾಗಿದ್ದ ಎಂ.ಕೆ. ಸ್ಟಾಲಿನ್‌ ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ್ದ ತಮಿಳಗ ವೆಟ್ರಿ ಕಳಗಂ ) ಶಾಸಕ ವಿ.ಎಸ್‌‍. ಬಾಬು ನಿಧನರಾಗಿದ್ದು, ಕೊಳತ್ತೂರು ವಿಧಾನಸಭಾ ಕ್ಷೇತ್ರ ತೆರವಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯ ಮೇಲೆ ಇದೀಗ ಎಲ್ಲ ರಾಜಕೀಯ ಪಕ್ಷಗಳ ಕಣ್ಣು ನೆಟ್ಟಿದೆ.

ವಿಶೇಷವೆಂದರೆ, 2011ರಿಂದ ಸತತವಾಗಿ ಕೊಳತ್ತೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸ್ಟಾಲಿನ್‌ ಅವರನ್ನು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆಯ ವಿ.ಎಸ್‌‍. ಬಾಬು ಸೋಲಿಸಿದ್ದರು. ಇದೀಗ ಕ್ಷೇತ್ರ ಖಾಲಿಯಾಗಿರುವ ಹಿನ್ನೆಲೆಯಲ್ಲಿ ಸ್ಟಾಲಿನ್‌ ಮತ್ತೊಮೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಲಿದ್ದಾರೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.

ಸ್ಟಾಲಿನ್‌ ಸ್ಪರ್ಧೆಗೆ ಡಿಎಂಕೆ ಕಾರ್ಯಕರ್ತರ ಒತ್ತಾಯ
ವಿ.ಎಸ್‌‍. ಬಾಬು ನಿಧನದಿಂದ ಕೊಳತ್ತೂರು ಕ್ಷೇತ್ರದಲ್ಲಿ ಉಪಚುನಾವಣೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಡಿಎಂಕೆ ಪಕ್ಷದೊಳಗೆ ಸ್ಟಾಲಿನ್‌ ಅವರೇ ಮತ್ತೊಮೆ ಕಣಕ್ಕಿಳಿಯಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಕುರಿತು ಪ್ರತಿಕ್ರಿಯಿಸಿರುವ ಡಿಎಂಕೆ ಸಂಸದ ಸಿ. ರವೀಂದ್ರನ್‌, ಕೊಳತ್ತೂರು ಕ್ಷೇತ್ರ ನಮ ನಾಯಕನ ಕ್ಷೇತ್ರವಾಗಿದ್ದು, ಸ್ಪರ್ಧಿಸುವ ಬಗ್ಗೆ ಅಂತಿಮ ನಿರ್ಧಾರವನ್ನು ಸ್ಟಾಲಿನ್‌ ಅವರೇ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಒಬ್ಬ ಡಿಎಂಕೆ ಕಾರ್ಯಕರ್ತನಾಗಿ ನಮ ನಾಯಕ ಕೊಳತ್ತೂರಿನಿಂದ ಸ್ಪರ್ಧಿಸಿದರೆ ನಮಗೆ ಸಂತೋಷವಾಗುತ್ತದೆ. ಆದರೆ ಇದು ಸಂಪೂರ್ಣವಾಗಿ ಅವರ ವೈಯಕ್ತಿಕ ನಿರ್ಧಾರ. ಅವರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಸ್ಟಾಲಿನ್‌ಗೆ ಸೋಲಿನ ಆಘಾತ ನೀಡಿದ್ದ ಬಾಬು
ಇತ್ತೀಚಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕೊಳತ್ತೂರು ಕ್ಷೇತ್ರ ಭಾರೀ ಕುತೂಹಲ ಮೂಡಿಸಿತ್ತು. 2011ರಿಂದ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿದ್ದ ಸ್ಟಾಲಿನ್‌ ಅವರಿಗೆ ಟಿವಿಕೆ ಅಭ್ಯರ್ಥಿ ವಿ.ಎಸ್‌‍. ಬಾಬು ಪ್ರಬಲ ಪೈಪೋಟಿ ನೀಡಿದ್ದರು.

ಬಾಬು 82,997 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಸ್ಟಾಲಿನ್‌ 74,202 ಮತಗಳನ್ನು ಪಡೆದಿದ್ದರು. ಬರೋಬ್ಬರಿ 8,795 ಮತಗಳ ಅಂತರದಿಂದ ಸ್ಟಾಲಿನ್‌ ಸೋಲು ಅನುಭವಿಸಿದ್ದರು. ಈ ಸೋಲು ಡಿಎಂಕೆಗೆ ದೊಡ್ಡ ರಾಜಕೀಯ ಹಿನ್ನಡೆಯಾಗಿತ್ತು. ನಟ ವಿಜಯ್‌ ನೇತೃತ್ವದ ಟಿವಿಕೆ ತಮಿಳುನಾಡಿನ ಅಧಿಕಾರದ ರಾಜಕೀಯದಲ್ಲಿ ಹೊಸ ಶಕ್ತಿಯಾಗಿ ಹೊರಹೊಮುವ ಸಂದರ್ಭದಲ್ಲಿ ಸ್ಟಾಲಿನ್‌ ಅವರ ಸೋಲು ಪಕ್ಷಕ್ಕೆ ಮತ್ತಷ್ಟು ಆಘಾತ ನೀಡಿತ್ತು.

ಡಿಎಂಕೆಗೆ ಪ್ರತಿಷ್ಠೆಯ ಪ್ರಶ್ನೆ, ಟಿವಿಕೆಗೆ ಅಸ್ತಿತ್ವದ ಪರೀಕ್ಷೆ
ಕೊಳತ್ತೂರು ಉಪಚುನಾವಣೆ ಡಿಎಂಕೆಗೆ ಕಳೆದುಕೊಂಡ ರಾಜಕೀಯ ನೆಲೆಯನ್ನು ಮರಳಿ ಪಡೆಯುವ ಅವಕಾಶವಾಗಿದೆ. ಒಂದು ವೇಳೆ ಸ್ಟಾಲಿನ್‌ ಅವರೇ ಸ್ಪರ್ಧಿಸಿದರೆ, ತಮ ಸೋಲಿಗೆ ಕ್ಷೇತ್ರದ ಮತದಾರರಿಂದಲೇ ಉತ್ತರ ಪಡೆಯುವ ರಾಜಕೀಯ ಸವಾಲು ಅವರ ಮುಂದಿರಲಿದೆ. ಆದರೆ ಮತ್ತೊಮೆ ಸೋಲು ಅನುಭವಿಸಿದರೆ ಅದು ಅವರ ರಾಜಕೀಯ ವರ್ಚಸ್ಸಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯೂ ಇದೆ.

ಇತ್ತ ಟಿವಿಕೆಗೆ ಈ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಅತ್ಯಂತ ಪ್ರತಿಷ್ಠೆಯ ವಿಚಾರವಾಗಿದೆ. ವಿಜಯ್‌ ನೇತೃತ್ವದ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆಯ ಭದ್ರಕೋಟೆಯನ್ನೇ ವಶಪಡಿಸಿಕೊಂಡಿತ್ತು. ಇದೀಗ ಉಪಚುನಾವಣೆಯಲ್ಲೂ ಗೆಲುವು ಸಾಧಿಸುವ ಮೂಲಕ ತನ್ನ ಜನಬೆಂಬಲವನ್ನು ಸಾಬೀತುಪಡಿಸುವ ಸವಾಲು ಟಿವಿಕೆ ಮುಂದಿದೆ.

ಒಟ್ಟಿನಲ್ಲಿ, ಕೊಳತ್ತೂರು ಉಪಚುನಾವಣೆ ಕೇವಲ ಒಂದು ವಿಧಾನಸಭಾ ಕ್ಷೇತ್ರದ ಚುನಾವಣೆ ಮಾತ್ರವಲ್ಲ. ಇದು ಸ್ಟಾಲಿನ್‌ ಅವರ ರಾಜಕೀಯ ಮರುಪ್ರವೇಶದ ಅವಕಾಶವೇ ಅಥವಾ ವಿಜಯ್‌ ಅವರ ಟಿವಿಕೆ ಮತ್ತೊಮೆ ತನ್ನ ಶಕ್ತಿಯನ್ನು ಸಾಬೀತುಪಡಿಸುವ ವೇದಿಕೆಯೇ ಎಂಬ ಕುತೂಹಲ ಮೂಡಿಸಿದೆ. ಸ್ಟಾಲಿನ್‌ ಸ್ಪರ್ಧಿಸುತ್ತಾರೆಯೇ ಎಂಬ ಪ್ರಶ್ನೆಗೆ ಅವರ ನಿರ್ಧಾರವೇ ಉತ್ತರ ನೀಡಬೇಕಿದೆ.

RELATED ARTICLES

Latest News