Monday, August 18, 2025
Homeಬೆಂಗಳೂರುಅಣ್ಣಮ್ಮದೇವಿ ದೇಗುಲದ ಬಳಿ ಡ್ಯಾನ್ಸ್ ವೇಳೆ ಗಲಾಟೆ, ಬಾಲಕನ ಕೊಲೆ

ಅಣ್ಣಮ್ಮದೇವಿ ದೇಗುಲದ ಬಳಿ ಡ್ಯಾನ್ಸ್ ವೇಳೆ ಗಲಾಟೆ, ಬಾಲಕನ ಕೊಲೆ

ಬೆಂಗಳೂರು, ಏ.25– ಬೆಂಗಳೂರು ಕರಗದ ವೇಳೆ ಡ್ಯಾನ್ಸ್ ಮಾಡುತ್ತಿದ್ದಾಗ ಮೈ-ಕೈ ತಾಗಿದ್ದಕ್ಕೆ ಎರಡು ಗುಂಪುಗಳ ಮಧ್ಯೆ ಜಗಳ ನಡೆದು ಅಪ್ರಾಪ್ತ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶೇಷಾದ್ರಿಪುರಂನ ವಿವಿ ಗಿರಿ ಕಾಲೋನಿ ನಿವಾಸಿ ಸಾರದಿ (17) ಕೊಲೆಯಾದ ಯುವಕ. ಈತ ಟೈಲ್ಸ್ ಕೆಲಸ ಮಾಡುತ್ತಿದ್ದನು.

ಮೊನ್ನೆ ಬೆಂಗಳೂರು ಕರಗ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಮೆಜೆಸ್ಟಿಕ್ ಬಳಿಯ ಅಣ್ಣಮ್ಮ ದೇಗುಲದ ಬಳಿ ಜಮಾಯಿಸಿದ್ದರು. ಶೇಷಾದ್ರಿಪುರಂನಿಂದ ಸ್ನೇಹಿತರೊಡನೆ ಸಾರದಿ ಬಂದಿದ್ದನು. ಬೆಳಗಿನ ಜಾವ 3.30ರಲ್ಲಿ ಯುವಕರೆಲ್ಲರೂ ಸೇರಿಕೊಂಡು ಡಾನ್ಸ್ ಮಾಡುತ್ತಿದ್ದರು.

ಒಂದು ಗುಂಪಿನ ವ್ಯಕ್ತಿ ಸಾರ ಮತ್ತು ಈತನ ಸ್ನೇಹಿತನನ್ನು ಸ್ಪರ್ಶಿಸುತ್ತಾ ಕುಣಿಯುತ್ತಿದ್ದಾಗ ಎರಡೂ ಗುಂಪುಗಳ ನಡುವೆ ಜಗಳವಾಗಿದೆ.ಜಗಳ ವಿಕೋಪಕ್ಕೆ ತಿರುಗಿದಾಗ ಮಾರಾಕಾಸಗಳಿಂದ ಸಾರದಿ ಮೇಲೆ ಹಲ್ಲೆ ನಡೆಸಿ ಗುಂಪು ಪರಾರಿಯಾಗಿದೆ. ಹಲ್ಲೆಯಿಂದ ಗಂಭಿರವಾಗಿ ಗಾಯಗೊಂಡಿದ್ದ ಸಾರದಿಯನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಲಿಸದೆ ಮೃತ ಪಟ್ಟಿದ್ದಾನೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಾರಪೇಟೆ ಠಾಣೆ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

RELATED ARTICLES

Latest News