Wednesday, December 24, 2025
Homeರಾಷ್ಟ್ರೀಯಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ನಿತಿನ್‌ ನಬಿನ್‌ ಟೆಂಪಲ್‌ ರನ್‌

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ನಿತಿನ್‌ ನಬಿನ್‌ ಟೆಂಪಲ್‌ ರನ್‌

Nitin Nabin's Devotional and Political Journey in Bihar

ಪಾಟ್ನಾ, ಡಿ. 24 (ಪಿಟಿಐ) ತಮ್ಮ ತವರು ರಾಜ್ಯ ಬಿಹಾರಕ್ಕೆ ಭೇಟಿ ನೀಡಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ನಿತಿನ್‌ ನಬಿನ್‌ ಇಂದು ಪಾಟ್ನಾದ ಒಂದೆರಡು ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.ಬಿಜೆಪಿಯ ರಾಜ್ಯ ಅಧ್ಯಕ್ಷ ಸಂಜಯ್‌ ಸರೋಗಿ ಮತ್ತು ಇತರ ನಾಯಕರೊಂದಿಗೆ, ನಬಿನ್‌ ಮೊದಲು ನಗರದ ಬಾನ್‌್ಸ ಘಾಟ್‌ ಬಳಿಯ ಸಿದ್ಧೇಶ್ವರಿ ಕಾಳಿ ಮಂದಿರಕ್ಕೆ ಭೇಟಿ ನೀಡಿದರು.ನಂತರ ಅವರು ಐತಿಹಾಸಿಕ ಗೋಲ್‌ ಘರ್‌ ಬಳಿಯ ಮಾ ಅಖಂಡವಾಸಿನಿ ಮಂದಿರಕ್ಕೆ ಹೋಗಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಬಿಹಾರ ಬಿಜೆಪಿ ಮಾಧ್ಯಮ ಉಸ್ತುವಾರಿ ಡ್ಯಾನಿಶ್‌ ಇಕ್ಬಾಲ್‌ ವರದಿಗಾರರೊಂದಿಗೆ ಮಾತನಾಡುತ್ತಾ, ನಿತಿನ್‌ ನಬಿನ್‌ ಜಿ ಅವರು ಅಧಿಕಾರ ವಹಿಸಿಕೊಂಡ ನಂತರ ಬಿಹಾರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದಾಗ ನಿನ್ನೆ ಭವ್ಯ ಸ್ವಾಗತ ಪಡೆದರು. ಅವರು ಇಂದು ಬೆಳಿಗ್ಗೆ ನಮ್ಮೆಲ್ಲರ ಭಕ್ತಿ ಕೇಂದ್ರವಾಗಿರುವ ಕಾಳಿ ಮಂದಿರದಲ್ಲಿ ಮತ್ತು ಗೋಲ್‌ ಘರ್‌ ಬಳಿಯ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರು ತಮ್ಮ ಬಂಕಿಪೋರ್‌ ಕ್ಷೇತ್ರದ ಪಕ್ಷದ ಕಾರ್ಯಕರ್ತರು ಮತ್ತು ಜನರೊಂದಿಗೆ ಸಂವಹನ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ನಬಿನ್‌ ಅವರು ಇಂದು ದೆಹಲಿಗೆ ತೆರಳುವ ಮೊದಲು ತಖತ್‌ ಶ್ರೀ ಹರಿಮಂದಿರ್‌ ಜಿ ಪಾಟ್ನಾ ಸಾಹಿಬ್‌ ಗುರುದ್ವಾರಕ್ಕೆ ಭೇಟಿ ನೀಡಲಿದ್ದಾರೆ ಎಂದು ಇಕ್ಬಾಲ್‌ ಹೇಳಿದರು.ಡಿಸೆಂಬರ್‌ 14 ರಂದು ನಬಿನ್‌ ಅವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು ಮತ್ತು ಮರುದಿನ ಅವರು ಅಧಿಕಾರ ವಹಿಸಿಕೊಂಡರು.ಬಿಹಾರ ಭೇಟಿಯ ಮೊದಲ ದಿನದಂದು, ನಬಿನ್‌ ಪಾಟ್ನಾದಲ್ಲಿ ವಿಮಾನ ನಿಲ್ದಾಣದ ಬಳಿಯ ಅರಣ್ಯ ಭವನದಿಂದ ವೀರಚಂದ್‌ ಪಟೇಲ್‌ ಪಾತ್‌ನಲ್ಲಿರುವ ಬಿಜೆಪಿ ಪಕ್ಷದ ಕಚೇರಿಯ ಬಳಿಯಿರುವ ಮಿಲ್ಲರ್‌ ಹೈಸ್ಕೂಲ್‌ ಮೈದಾನದವರೆಗೆ ರೋಡ್‌ ಶೋ ನಡೆಸಿದರು.

ಮಿಲ್ಲರ್‌ ಹೈಸ್ಕೂಲ್‌ ಮೈದಾನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ಬಿಹಾರ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಮತ್ತು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರೊಂದಿಗೆ ಅವರ ಅಧಿಕೃತ ನಿವಾಸಗಳಲ್ಲಿ ಸೌಜನ್ಯ ಸಭೆಗಳನ್ನು ನಡೆಸಿದರು.ಬಂಕಿಪುರ ವಿಧಾನಸಭಾ ಸ್ಥಾನದಿಂದ ಐದನೇ ಬಾರಿಗೆ ಶಾಸಕರಾಗಿರುವ ನಬಿನ್‌‍, ಭಾರತೀಯ ಜನತಾ ಯುವ ಮೋರ್ಚಾದ ರಾಜ್ಯ ಘಟಕದ ಮುಖ್ಯಸ್ಥರಾಗಿದ್ದರು ಮತ್ತು ಛತ್ತೀಸ್‌‍ಗಢದ ಪಕ್ಷದ ಉಸ್ತುವಾರಿಯಾಗಿದ್ದರು.

RELATED ARTICLES

Latest News