Friday, November 22, 2024
Homeರಾಷ್ಟ್ರೀಯ | Nationalಕಾಂಗ್ರೆಸ್‌‍ ಮುಸ್ಲಿಮರ ವೋಟ್ ಬೇಕು ಆದರೆ ಸೀಟ್ ಮಾತ್ರ ನೀಡಲ್ಲ : ಖಾನ್‌

ಕಾಂಗ್ರೆಸ್‌‍ ಮುಸ್ಲಿಮರ ವೋಟ್ ಬೇಕು ಆದರೆ ಸೀಟ್ ಮಾತ್ರ ನೀಡಲ್ಲ : ಖಾನ್‌

ನವದೆಹಲಿ,ಏ.27- ಕಾಂಗ್ರೆಸ್‌‍ ಪಕ್ಷಕ್ಕೆ ಮುಸ್ಲಿಂರ ಮತ ಬೇಕು ಆದರೆ, ಅವರಿಗೆ ಸೀಟು ಮಾತ್ರ ನೀಡುವುದಿಲ್ಲ ಎಂದು ಆರೋಪಿಸಿ ಮುಸಲಾನ್‌ ನಾಯಕರೊಬ್ಬರು ಪ್ರಚಾರ ಸಮಿತಿಯಿಂದ ಕೆಳಗಿಳಿದಿರುವುದು ಇದೀಗ ಬಹಿರಂಗ ಚರ್ಚೆಗೆ ಕಾರಣವಾಗಿದೆ. ಮಹಾರಾಷ್ಟ್ರ ಕಾಂಗ್ರೆಸ್‌‍ ನಾಯಕ ಮುಹಮದ್‌ ಆರಿಫ್‌ ನಸೀಮ್‌‍ ಖಾನ್‌ ಅವರು ಪಕ್ಷದ ಪ್ರಚಾರ ಸಮಿತಿಯಿಂದ ಕೆಳಗಿಳಿದಿದ್ದು, ರಾಜ್ಯದಲ್ಲಿ ಯಾವುದೇ ಮುಸ್ಲಿಂ ನಾಯಕರನ್ನು ಪಕ್ಷವು ನಾಮನಿರ್ದೇಶನ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿರೋಧ ಪಕ್ಷದ ಮಹಾ ವಿಕಾಸ್‌‍ ಅಘಾಡಿ (ಎಂವಿಎ) ಬಣವು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಲೋಕಸಭೆ ಚುನಾವಣೆಗೆ ಪ್ರಚಾರ ಮಾಡುವುದಿಲ್ಲ ಎಂದು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಮಹಾರಾಷ್ಟ್ರದ ಒಟ್ಟು 48 ಲೋಕಸಭಾ ಸ್ಥಾನಗಳಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಿಲ್ಲ ಎಂದು ಮಾಜಿ ರಾಜ್ಯ ಸಚಿವರು ಪತ್ರದಲ್ಲಿ ಆರೋಪಿಸಿದ್ದಾರೆ.

ಮಹಾರಾಷ್ಟ್ರದಾದ್ಯಂತ ಅನೇಕ ಮುಸ್ಲಿಂ ಸಂಘಟನೆಗಳು, ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಅಲ್ಪಸಂಖ್ಯಾತ ಸಮುದಾಯದಿಂದ ಕನಿಷ್ಠ ಒಬ್ಬ ಅಭ್ಯರ್ಥಿಯನ್ನು ಕಾಂಗ್ರೆಸ್‌‍ ನಾಮನಿರ್ದೇಶನ ಮಾಡುತ್ತದೆ ಎಂದು ನಿರೀಕ್ಷಿಸುತ್ತಿದ್ದರು, ಆದರೆ ದುರದಷ್ಟವಶಾತ್‌ ಇದು ಸಂಭವಿಸಲಿಲ್ಲ ಎಂದು ಅವರು ಹೇಳಿದ್ದಾರೆ.

ಈ ಎಲ್ಲಾ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಈಗ ತಮನ್ನು ಕಾಂಗ್ರೆಸ್‌‍ ಕೋ ಮುಸ್ಲಿಂ ಮತ ಚಾಹಿಯೇ, ಅಭ್ಯರ್ಥಿ ಕ್ಯೂಂ ನಹೀ (ಕಾಂಗ್ರೆಸ್‌‍ಗೆ ಮುಸ್ಲಿಂ ಮತಗಳು ಬೇಕು, ಆದರೆ ಅಭ್ಯರ್ಥಿಗಳು ಏಕೆ ಬೇಡ ಎಂದು ಕೇಳುತ್ತಿದ್ದಾರೆ ಎಂದು 60 ವರ್ಷದ ರಾಜಕಾರಣಿ ಹೇಳಿದರು.ಈ ಎಲ್ಲಾ ಕಾರಣಗಳಿಗೆ ನನ್ನ ಬಳಿ ಉತ್ತರವಿಲ್ಲ ಎಂದು ಖಾನ್‌ ಪತ್ರದಲ್ಲಿ ಬರೆದಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್‌‍ ಪ್ರಚಾರ ಸಮಿತಿಗೆ ರಾಜೀನಾಮೆ ನೀಡುವುದಾಗಿಯೂ ಖಾನ್‌ ಹೇಳಿದ್ದಾರೆ.

ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌‍ 17ರಲ್ಲಿ ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್‌ಚಂದ್ರ ಪವಾರ್‌) ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿದೆ. ಅವರು ವಿರೋಧ ಪಕ್ಷದ ಮಹಾ ವಿಕಾಸ್‌‍ ಅಘಾಡಿ ಯ ಘಟಕಗಳಾಗಿವೆ.

ಮುಹಮದ್‌ ಆರಿಫ್‌ ಖಾನ್‌ ಮುಂಬೈ ನಾರ್ತ್‌ ಸೆಂಟ್ರಲ್‌ನಿಂದ ಟಿಕೆಟ್‌ಗಾಗಿ ರೇಸ್‌‍ನಲ್ಲಿದ್ದರು, ಆದರೆ ಪಕ್ಷವು ನಗರ ಘಟಕದ ಅಧ್ಯಕ್ಷೆ ವರ್ಷಾ ಗಾಯಕ್ವಾಡ್‌ ಅವರನ್ನು ಕ್ಷೇತ್ರಕ್ಕೆ ಆಯ್ಕೆ ಮಾಡಿದೆ. ಅವರು 2019 ರ ವಿಧಾನಸಭಾ ಚುನಾವಣೆಯಲ್ಲಿ ಮುಂಬೈನ ಚಂಡಿವಾಲಿಯಿಂದ ಸ್ಪರ್ಧಿಸಿದ್ದರು ಅಲ್ಲಿ ಅವರು 409 ಮತಗಳಿಂದ ಸೋತಿದ್ದರು. ಪಿಟಿಐಗೆ ಪ್ರತ್ಯೇಕವಾಗಿ ಮಾತನಾಡಿದ ಖಾನ್‌‍, ಕಾಂಗ್ರೆಸ್‌‍ ತನ್ನ ದೀರ್ಘಾವಧಿಯ ಒಳಗೊಳ್ಳುವಿಕೆಯ ಸಿದ್ಧಾಂತದಿಂದ ವಿಮುಖವಾಗಿದೆ ಎಂದು ಆರೋಪಿಸಿದ್ದಾರೆ.

RELATED ARTICLES

Latest News