ಬೆಂಗಳೂರು,ಏ.27- ಪ್ರಸಕ್ತ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಪ್ತಿ ಮಾಡಲಾದ ಹಣ, ಮದ್ಯ, ಡ್ರಗ್ಸ್ , ಉಚಿತ ಉಡುಗೊರೆ, ಚಿನ್ನ, ಬೆಳ್ಳಿ ಆಭರಣಗಳ ಪ್ರಮಾಣ ಏರುತ್ತಲೇ ಇದ್ದು ಈತನಕ 443.80 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ.
ಮಾದರಿ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ನಿನ್ನೆಯವರೆಗೆ ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ಹಣ ಹಾಗೂ ಇತರೆ ವಸ್ತುಗಳು ಪರಿಶೀಲನೆ ವೇಳೆ ಭಾರೀ ಪ್ರಮಾಣ ದಲ್ಲಿ ಪತ್ತೆಯಾಗುತ್ತಲೇ ಇವೆ.ರಾಜ್ಯ ಮುಖ್ಯ ಚುನಾವಣಾಧಿ ಕಾರಿ ಕಚೇರಿ ಪ್ರಕಟಣೆ ಪ್ರಕಾರ, ಪೊಲೀಸ್ ಕ್ಷಿಪ್ರ ಪಡೆಗಳು ಹಾಗೂ ಸ್ಥಿರ ಕಣ್ಗಾವಲು ತಂಡಗಳು 139.88 ಕೋಟಿ ರೂ. ಮೊತ್ತದ ನಗದು, ಮದ್ಯ, ಡ್ರಗ್ಸ್ , ಚಿನ್ನ, ಬೆಳ್ಳಿ, ಉಚಿತ ಉಡುಗೊರೆಗಳನ್ನು ವಶಪಡಿಸಿಕೊಂಡಿದೆ.
ಅಬಕಾರಿ ಇಲಾಖೆಯವರು 277.72 ಕೋಟಿ ರೂ. ಮೊತ್ತದ ನಗದು, ಮದ್ಯ ಹಾಗೂ ಡ್ರಗ್‌್ಸ ಅನ್ನು ವಶಪಡಿಸಿಕೊಂಡಿದ್ದು, ಆದಾಯ ತೆರಿಗೆ ಅಧಿ ಕಾರಿಗಳು 46.09 ಕೋಟಿ ರೂ. ಮೊತ್ತದ ನಗದು, ಚಿನ್ನ, ವಜ್ರವನ್ನು ವಶಪಡಿಸಿಕೊಂಡಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯವರು 80.11 ಕೋಟಿ ರೂ. ಮೊತ್ತದ ಚಿನ್ನ, ಬೆಳ್ಳಿ, ಉಚಿತ ಉಡುಗೊರೆ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ನಿನ್ನೆ ರಾಜ್ಯದಲ್ಲಿ 10.42 ಕೋಟಿ ರೂ. ಮೊತ್ತದ ನಗದು, ಮದ್ಯ, ಡ್ರಗ್‌್ಸ, ಚಿನ್ನ, ಉಚಿತ ಉಡುಗೊರೆಗಳನ್ನು ಜಪ್ತಿ ಮಾಡಲಾಗಿದೆ.
ಇದುವರೆಗೂ ರಾಜ್ಯದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ 2172 ಎಫ್‌ಐಆರ್‌ಗಳನ್ನು ದಾಖಲಿಸಿದ್ದು, 1916 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.ಆದಾಯ ತೆರಿಗೆ ಅಧಿ ಕಾರಿಗಳು ಯಲಹಂಕದಲ್ಲಿ 4.80 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ. ಕ್ಷಿಪ್ರಪಡೆಗಳು ಕೋರಮಂಗಲದಲ್ಲಿ 18,82,267 ರೂ. ನಗದನ್ನು ಕೆಜಿಎಫ್‌ನ ಬೇತಮಂಗಲದಲ್ಲಿ 47,56,000 ರೂ. ನಗದನ್ನು ಹಾಗೂ ಸ್ಥಿರ ಕಣ್ಗಾವಲು ತಂಡದವರು 20 ಲಕ್ಷ ರೂ. ನಗದನ್ನು ಚಾಮರಾಜಪೇಟೆಯ ರಾಯಲ್ ಸರ್ಕಲ್‌ನ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ.
ಮೈಸೂರು ಜಿಲ್ಲೆಯ ಕಾಳಸಿದ್ದನಹುಂಡಿ ಚೆಕ್ ಪೋಸ್ಟ್ ನಲ್ಲಿ 81,90,900 ರೂ. ನಗದು ಹಾಗೂ ಕುಂದಾಪುರದಲ್ಲಿ 43,34,128 ರೂ. ನಗದನ್ನು ಸ್ಥಿರಕಣ್ಗಾವಲು ತಂಡದವರು ವಶಪಡಿಸಿಕೊಂಡಿದ್ದಾರೆಂದು ಪ್ರಕಟಣೆ ತಿಳಿಸಿದೆ.