ಬೆಂಗಳೂರು, ಏ.2- ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರುತ್ತಲೇ ಇದ್ದು ತರಕಾರಿಗಳ ಇಳುವರಿಯಲ್ಲಿ ಕುಂಠಿತವಾಗಿ ಬೆಲೆಗಳು ಗಗನಕ್ಕೆರಿದ್ದು ಚಿಲ್ಲರೆ ತರಕಾರಿ ವ್ಯಾಪಾರಿಗಳು ಮಾರಾಟವನ್ನೇ ತಾತ್ಕಾಲಿಕವಾಗಿ ನಿಲ್ಲಿಸುವಂತಾಗಿದೆ. ರಾಜ್ಯಾದ್ಯಂತ ಬರಗಾಲ ಆವರಿಸಿದ್ದು ಬಹುತೇಕ ಜಿಲ್ಲೆ ತಾಲೂಕುಗಳಲ್ಲಿ ನೀರಿಗೆ ಸಮಸ್ಯೆ ಎದರುರಾಗಿ ರೈತರು ಬೆಳೆ ಬೆಳೆಯಲು ಮುಂದಾಗದ ಕಾರಣ ಉತ್ಪಾದನೆ ಕುಂಟಿತವಾಗಿ ಬೆಲೆ ಹೆಚ್ಚಳವಾಗಿದೆ.
ಕೊಳವೆ ಬಾವಿ ನೀರನ್ನು ನಂಬಿ ಬೆಳೆ ಬೆಳೆಯುತ್ತಿದ್ದ ರೈತರಿಗೆ ಸಕಾಲಕ್ಕೆ ಮಳೆಯಾಗದೆ ಅಂತರ್ಜಲ ಮಟ್ಟ ಪಾತಾಳ ತಲುಪಿದೆ. ಜೊತೆಗೆ ವಿದ್ಯುತ್ ಕೊರತೆಯಿಂದ ಬೆಳೆ ಬೆಳೆಯಲು ಹಿಂದೆಟು ಹಾಕಿದ್ದಾರೆ.
ಹೆಚ್ಚಿನ ಬಿಸಿಲಿನ ತಾಪ ಹಾಗೂ ತೆವಾಂಶದ ಸಮಸ್ಯೆಯಿಂದ ಇಳುವರಿ ಭಾರಿ ಕುಂಠಿತವಾಗಿದೆ ಸಾಮಾನ್ಯವಾಗಿ ತರಕಾರಿ ಬೆಳೆಗೆ ಹೆಚ್ಚಿನ ತೇವಾಂಶದೊಂದಿಗೆ ಉತ್ತಮ ವಾತಾವರಣ ಅವಶ್ಯಕವಾಗಿರುತ್ತದೆ. ಇವುಗಳಲ್ಲಿ ಯಾವುದೇ ವ್ಯತ್ಯಯವಾದರೂ ಇಳುವರಿಗೆ ಹೊಡೆತ ಬಿಳುತ್ತದೆ.
ಉಷ್ಣಾಂಶ ಹೆಚ್ಚಾದ ಕಾರಣ ಗೀಡಗಳು ಕಚ್ಚುವುದಿಲ್ಲ. ಜೊತೆಗೆ ಹೂ, ಕಾಯಿ ಕೂಡ ಕಟ್ಟುವುದಿಲ್ಲ ಒಂದು ವೇಳೆ ಕಾಯಿ ಕಚ್ಚಿದರೂ ಸರಿಯಾಗಿ ಬಾರದೆ ಉದುರಿ ಹೋಗುತ್ತವೆ.ರಾಮನಗರ, ಮಾಗಡಿ, ತುಮಕೂರು, ಬೆಂಗಳೂರು ಗ್ರಾಮಾಂತರ, ಹೊಸಕೋಟೆ, ನಂದಗುಡಿ, ಕನಕಪುರ ಸೇರಿದಂತೆ ವಿವಿಧೆಡೆಯಿಂದ ಬೆಂಗಳೂರಿಗೆ ಬಾರಿ ತರಕಾರಿ ಬರುತ್ತಿತ್ತು. ಆದರೆ ಈಗ ಗಣೀೕಯವಾಗಿ ಇಳಿಮುಖವಾಗಿದೆ.
ಅಲ್ಲಿನ ಸ್ಥಳಿಯ ಮಾರುಕಟ್ಟೆಗಳಿಗೆ ಮಾಲು ಸಾಕಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತರಕಾರಿ ಸರಬರಾಜಿನಲ್ಲಿ ವ್ಯತ್ಯಯವಾಗಿ ಬೆಲೆ ಹೆಚ್ಚಳವಾಗಿದೆ. ಹುರುಳಿಕಾಯಿ ಕೆಜಿಗೆ 200 ರೂ ತಲುಪಿದೆ, ಕ್ಯಾರೆಟ್ 100, ಟಮೋಟೋ 30, ಕ್ಯಾಪ್ಸಿಕಂ 80, ಆಲೂಗೆಡ್ಡೆ 40. ಬದನೆಕಾಯಿ 50, ಗೆಡ್ಡೆಕೋಸ್ 50, ಸೌತೆಕಾಯಿ 50 ರೂನಂತೆ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ.
ಇದರಿಂದ ಚಿಲ್ಲರೆ ವ್ಯಾಪಾರಿಗಳು ತರಕಾರಿ ತಂದು ಮರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ, ಬೆಲೆ ಹೆಚ್ಚಳದಿಂದ ಗ್ರಾಹಕರು ಖರೀದಿಗೆ ಮುಂದಾಗುತ್ತಿಲ್ಲ. ಇದರಿಂದ ತಂದ ತರಕಾರಿಗಳು ಒಣಗಿ ಹೋಗುತ್ತವೆ. ಇದರಿಂದ ಲಾಸ್ ಮಾಡಿಕೊಳ್ಳುವುದಕ್ಕಿಂತ ಕೆಲ ದಿನ ಮಾರಾಟ ನಿಲ್ಲಿಸೋದೆ ಒಳ್ಳೆಯದು ಎಂದು ತೀರ್ಮಾನಿಸಿದ್ದಾರೆ. ಸದ್ಯಕ್ಕೆ ಮಳೆ ಬಂದರೂ ಹೊಸ ತರಕಾರಿ ಬರಲು 2 ತಿಂಗಳಾದರೂ ಕಾಲವಕಾಶಬೇಕು ಸದ್ಯಕ್ಕೆ ಬೆಲೆ ಇಳಿಕೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ .