ಮೈಸೂರು, ಅ.12- ಈ ಬಾರಿ ದಸರಾ ಮಹೋತ್ಸವದಲ್ಲಿ ಕುಸ್ತಿ ಪಂದ್ಯಾವಳಿ ಅಭಿಮಾನಿಗಳಿಗೆ ರೋಮಾಂಚನ ನೀಡಲಿದೆ. ಅ.15 ರಿಂದ ಅ.21ರವರೆಗೆ ಆರು ದಿನಗಳ ಕಾಲ ಸಿಎಂ ಕಪ್, ದಸರಾ ಕೇಸರಿ, ದಸರಾ ಕಂಠೀರವ ಹಾಗೂ ಮೈಸೂರು ವಿಭಾಗದ ಕುಮಾರ ಹಾಗೂ ಕಿಶೋರಿ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಪಂದ್ಯಾವಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಈ ಕುರಿತು ದಸರಾ ಕುಸ್ತಿ ಉಪಸಮಿತಿಯ ವಿಶೇಷಾಧಿಕಾರಿ, ಅಪರ ಪೊಲೀಸ್ ಅೀಧಿಕ್ಷಕಿ ಡಾ.ಬಿ.ಎನ್.ನಂದಿನಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅ.15 ರ ಸಂಜೆ 4 ಗಂಟೆಗೆ ಸಿಎಂ ಸಿದ್ದರಾಮಯ್ಯ ಕುಸ್ತಿಗೆ ಚಾಲನೆ ನೀಡುವರು. 16 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 2ರ ವರೆಗೆ ಕುಸ್ತಿಪಟುಗಳ ದೇಹ ತೂಕ, ನಂತರ 16ರ ಮಧ್ಯಾಹ್ನ 3 ರಿಂದ ಎಲ್ಲಾ ವಿಭಾಗದ ಪಂದ್ಯಾವಳಿ ಚಾಲನೆ ಸಿಗಲಿವೆ ಎಂದು ಹೇಳಿದರು.
ಇಸ್ರೇಲ್‍ನಲ್ಲಿರುವ ಭಾರತೀಯರ ರಕ್ಷಣೆಗೆ ‘ಆಪರೇಷನ್ ಅಜಯ್’ ಕಾರ್ಯಾಚರಣೆ ಆರಂಭ
17 ರಂದು ದಸರಾ ಕಿಶೋರಿ, ದಸರಾ ಕೇಸರಿ, ದಸರಾ ಕಂಠೀರವ ಹಾಗೂ ಮೈಸೂರು ವಿಭಾಗದ ದಸರಾ ಕುಮಾರ, ದಸರಾ ಕಿಶೋರಿ ತೂಕ ತೆಗೆದುಕೊಳ್ಳಲಾಗುವುದು. ಅಂದೆ ಸಿಎಂ ಕಪ್ ಕುಸ್ತಿ ಪಂದ್ಯಾವಳಿ ಸಹ ನಡೆಯಲಿದೆ ಎಂದು ನಂದಿನಿ ವಿವರಿಸಿದರು.