ಬೆಂಗಳೂರು, ಏ.30- ಮರು ಮತದಾನ ನಡೆದ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹನೂರು ತಾಲ್ಲೂಕಿನಲ್ಲಿ ಇಂಡಿಗನತ್ತ ಮತಗಟ್ಟೆಯಲ್ಲಿ ಶಾಂತಿಯುತ ಮತದಾನವಾಗಿದೆ. ಆದರೆ, ಮತದಾನ ಪ್ರಮಾಣ ತೀರಾ ಕಡಿಮೆಯಾಗಿದೆ, ಏಪ್ರಿಲ್ 26ರಂದು ಮತದಾನ ಬಹಿಷ್ಕರಿಸಿದಲ್ಲದೆ, ಇಂಡಿಗನತ್ತ ಮತಗಟ್ಟೆಯಲ್ಲಿ ಘರ್ಷಣೆಯಾಗಿ ಮತಯಂತ್ರಕ್ಕೆ ಹಾನಿ ಮಾಡಲಾಗಿದ್ದ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗ ನಿನ್ನೆ ಮರು ಮತದಾನ ನಡೆಸಿತ್ತು.
ಇಂಡಿಗನತ್ತ ಮತಗಟ್ಟೆಯಲ್ಲಿ 279 ಪುರುಷ, 249 ಮಹಿಳಾ ಮತದಾರರು ಸೇರಿದಂತೆ 528 ಮತದಾರರು ಇದ್ದು, ಇವರಲ್ಲಿ 32 ಪುರುಷ, 39 ಮಹಿಳಾ ಮತದಾರರು ಮಾತ್ರ ಮತ ಚಲಾಯಿಸಿದ್ದಾರೆ. ಒಟ್ಟಾರೆ 71 ಮತದಾರರು ಮಾತ್ರ ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ.13.45ರಷ್ಟ ಮಾತ್ರ ಮತದಾನವಾಗಿದೆ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.