ನವದೆಹಲಿ,ಮೇ.1-ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು 19ರೂ ಕಡಿತಗೊಳಿಸಿದೆ. ಮೇ ತಿಂಗಳ ಮೊದಲ ದಿನವೇ ಬೆಲೆ ಇಳೆಕೆ ಹೋಟಲ್‌ಗಳು ,ವಾಣಿಜ್ಯ ಕಾರ್ಖಾನೆಗಳಿಗೆ ಸ್ವಲ್ಪ ಮಟ್ಟಿಗೆ ಖುಷಿ ಕೊಟ್ಟಿದೆ. 19 ರೂ.ಗಳಷ್ಟು ಕಡಿತದ ನಂತರ ದೆಹಲಿಯಲ್ಲಿ ಪ್ರತಿ ವಾಣಿಜ್ಯ ಸಿಲಿಂಡರ್ ಬೆಲೆ 1745.50 ರೂಗೆ ಇಳಿದಿದೆ.
ತಿಂಗಳು ಸಹ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿದ್ದವು ಮತ್ತು ಏಪ್ರಿಲ್ 1 ರಂದು 30.50 ರೂ. ತೈಲ ಮಾರುಕಟ್ಟೆ ಕಂಪನಿಗಳು, ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1859 ರೂ.ಮುಂಬೈನಲ್ಲಿ 1698.50 ರೂ.ಗೆ ಮತ್ತು ಚೆನ್ನೈನಲ್ಲಿ 1911 ರೂ.ಗೆ ಲಭ್ಯವಾಗಲಿದೆ. ಪ್ರಸ್ತುತ ಗೃಹ ಬಳಕೆಗೆ ಬಳಸುವ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಇದೇ ವೇಲೆ ತೈಲ ಕಂಪನಿಗಳು ವಿಮಾನ ಇಂಧನದ ಬೆಲೆಯನ್ನು ಲೀಟರ್‌ಗೆ 749.25 ರೂ.ಗಳಷ್ಟು ಹೆಚ್ಚಿಸಿವೆ. ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ. ಈ ಹಿಂದೆ, ಏಪ್ರಿಲ್‌ನಲ್ಲಿ ರೂ 502.91/ಕೆಜಿ ಲೀಟರ್‌ಗೆ ಇಳಿಕೆಯಾಗಿದ್ದರೆ, ಮಾರ್ಚ್‌ನಲ್ಲಿ ವಿಮಾನ ಇಂಧನ ಬೆಲೆ ಲೀಟರ್‌ಗೆ ರೂ 624.37/ಕೆಜಿ ಏರಿಕೆಯಾಗಿತ್ತು.