ಬೀಜಿಂಗ್,ಮೇ.1- ಚೀನಾದ ಸ್ವದೇಶೀ ನಿರ್ಮಿತ ಮುಂದುವರೆದ ಮೂರನೇ ವಿಮಾನವಾಹಕ ಯುದ್ಧನೌಕೆ ಫ್ಯೂಜಿಯಾನ್ ಬುಧವಾರ ತನ್ನ ಪ್ರಾಥಮಿಕ ಪರೀಕ್ಷಾರ್ಥ ಸಂಚಾರ ಪ್ರಾರಂಭಿಸಿತು. ವಿವಾದಿತ ದಕ್ಷಿಣ ಚೀನಾ ಸಮುದ್ರ ಮತ್ತು ತೈವಾನ್ ಜಲಸಂಧಿಯಲ್ಲಿ ಅಮೆರಿಕದೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವುದರ ನಡುವೆಯೇ ಚೀನಾ ತನ್ನ ನೌಕಾಶಕ್ತಿ ವರ್ಧಿಸಿಕೊಳ್ಳುವ ಯತ್ನ ನಡೆಸಿದೆ.
ಈ ನೌಕೆ ಪ್ರಾಥಮಿಕವಾಗಿ ವಿಮಾನವಾಹಕ ಕಾರ್ಯಕ್ಷಮತೆ, ವಿಶ್ವಾಸಾರ್ಹತೆ ಮತ್ತು ಸ್ಥಿರತೆ ಮತ್ತು ಪ್ರೊಪಲ್ಷನ್ ಮತ್ತು ಎಲೆಕ್ಟ್ರಿಕಲ್ ವ್ಯವಸ್ಥೆಗಳ ಕಾರ್ಯದಕ್ಷತೆಯನ್ನು ಪರೀಕ್ಷಿಸುವ ಸಲುವಾಗಿ ಇಂದು ಬೆಳಿಗ್ಗೆ ಶಾೖೆಂ ಜಿಯಾಗ್ನನ್ ಶಿಪ್‌ಯಾರ್ಡ್‌ನಿಂದ ಹೊರಟಿತು ಎಂದು ಸರ್ಕಾರಿ ಸ್ವಾಮ್ಯದ ಕ್ಷಿನ್ ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಜೂನ್ 2022 ರಲ್ಲಿ ಸೇನೆಗೆ ಸೇರ್ಪಡೆಗೊಂಡ ಬಳಿಕ ಇಂದು ಬೆಳಿಗ್ಗೆ ಫ್ಯೂಜಿಯಾನ್ ತನ್ನ ಜೋಡಣೆ ಕಾಮಗಾರಿ ಮತ್ತು ಉಪಕರಣಗಳ ಹೊಂದಾಣಿಕೆ ವ್ಯವಸ್ಥೆಗಳು ಸಮರ್ಪಕವಾಗಿವೆಯೇ ಎಂಬುದನ್ನು ಪರೀಕ್ಷಿಸಿತು. ಅದು ಸಾಗರದ ತಾಂತ್ರಿಕ ಪರೀಕ್ಷೆಗಳ ಅಗತ್ಯಗಳನ್ನು ಪೂರೈಸಿದೆ.
ಈ ಪರೀಕ್ಷೆಗಳ ಮುನ್ನ `ಮಿಲಿಟರಿ ಚಟುವಟಿಕೆಗಳಿಗಾಗಿ’ ಇರುವ ಜಿಯಾಗ್ನಾನ್ ಬಂದರು ನೆಲೆಗೊಂಡಿರುವ ಯಾಂಗ್‌ತ್ಸೆ ನದಿಯ ಸುತ್ತ ಜಲಮಾರ್ಗ ಸಂಚಾರಕ್ಕೆ ನಿರ್ಬಂಧಗಳನ್ನು ವಿಧಿಸಿದೆ.ಈ ಸಂಚಾರ ನಿಯಂತ್ರಣ ಮೇ 9 ರ ತನಕ ಮುಂದುವರೆಯಲಿದೆ ಎಂದು ವರದಿ ತಿಳಿಸಿದೆ.