ಮಾಸ್ಕೋ, ಮೇ 7- ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ಅಧ್ಯಕ್ಷರಾಗಿ ಐದನೇ ಅವಧಿಗೆ ಅಧಿಕಾರ ಪಟ್ಟ ಅಲಂಕರಿಸಿದ್ದಾರೆ. ತಮ್ಮ ರಾಜಕೀಯ ವಿರೋಧಿಗಳನ್ನು ಬಗ್ಗುಬಡಿದ ನಂತರ ಉಕ್ರೇನ್‌ನಲ್ಲಿ ಯುದ್ಧ ಮುಂದುವರೆದಿರುವ ನಡುವೆ ತನ್ನ ಕೈಯಲ್ಲಿ ಎಲ್ಲಾ ಅಧಿಕಾರವನ್ನು ಕ್ರೋಢೀಕರಿಸಿಕೊಂಡು ಇಂದು ಐದನೇ ಅವಧಿಗೆ ತಮ್ಮ ರಾಜ್ಯಬಾರವನ್ನು ವಿದ್ಯಕ್ತವಾಗಿ ಶುರುಮಾಡಿದ್ದಾರೆ.
ಈಗಾಗಲೇ ಸುಮಾರು ಕಾಲು ಶತಮಾನ ಅಧಿಕಾರದಲ್ಲಿದ್ದು, ಜೋಸೆಫ್ ಸ್ಟಾಲಿನ್ ನಂತರ ಸುದೀರ್ಘ ಸೇವೆ ಸಲ್ಲಿಸಿದ ನಾಯಕ ಪುಟಿನ್‌ಎಂದು ಇತಿಹಾಸ ದಾಖಲಾಗಿದ್ದು , ಹೊಸ ಸೇವಾ ಅವಧಿಯು 2030 ರವರೆಗೆ ಇರಲಿದೆ.
ಆರ್ಥಿಕ ಕುಸಿತದಿಂದ ರಷ್ಯಾವನ್ನು ಹೊರತಂದು ಜಾಗತಿಕ ಭದ್ರತೆಗೆ ಬೆದರಿಕೆ ಹಾಕುವವರಿಗೆ ತಕ್ಕ ಶಸ್ತಿ ನೀಡಿ ಸೂಪರ್ ಪವರ್‌ಆಗಿ ಪರಿವರ್ತಿಸಿದ್ದಾರೆ. ವಿಶ್ವ ಸಮರ ನಂತರ ಯುರೋಪಿನ ಅತಿದೊಡ್ಡ ಸಂಘರ್ಷವಾಗಿ ಮಾರ್ಪಟ್ಟಿರುವ ಉಕ್ರೇನ್‌ನ 2022 ಆಕ್ರಮಣದ ನಂತರ, ರಷ್ಯಾ ಚೀನಾ, ಇರಾನ್ ಮತ್ತು ಉತ್ತರ ಕೊರಿಯಾದಂತಹ ದೇಶಗಳಿಗೆ ಬೆಂಬಲವಾಗಿ ನಂತಿದೆ.
ಇನ್ನು ಆರು ವರ್ಷಗಳ ಅವಧಿಯಲ್ಲಿ 71ರ ಹರೆಯದ ಪುಟಿನ್ ದೇಶ-ವಿದೇಶಗಳಲ್ಲಿ ಏನು ಮಾಡಲಿದ್ದಾರೆ ಎಂಬುದು ಸದ್ಯದ ಪ್ರಶ್ನೆ ಪ್ರಸ್ತುತ ತೆರಿಗೆಗಳನ್ನು ಹೆಚ್ಚಿಸುವ ಕ್ರಮಗಳನ್ನು ತೆಗೆದುಕೊಳ್ಳಬಹುದು ಮತ್ತು ಹೆಚ್ಚಿನ ಜನರನ್ನು ಮಿಲಿಟರಿಗೆ ಸೇರಲು ಒತ್ತಡ ಹೇರಬಹುದು ಎಂದು ವಿಶ್ಲೇಷಿಸಲಾಗಿದೆ. ಪ್ರಧಾನ ಮಂತ್ರಿ ಮತ್ತು ಕ್ಯಾಬಿನೆಟ್ ಸಚಿವರು ಸದ್ಯದಲ್ಲೇ ಅಸ್ತಿತ್ವಕ್ಕೆ ಬರಲಿದೆ.