Friday, November 22, 2024
Homeರಾಷ್ಟ್ರೀಯ | Nationalಹೆಚ್ಚು ಹೆಚ್ಚು ಮತ ಚಲಾಯಿಸಲು ಪ್ರಿಯಾಂಕಾ ಗಾಂಧಿ ಮನವಿ

ಹೆಚ್ಚು ಹೆಚ್ಚು ಮತ ಚಲಾಯಿಸಲು ಪ್ರಿಯಾಂಕಾ ಗಾಂಧಿ ಮನವಿ

ನವದೆಹಲಿ, ಮೇ 7 (ಪಿಟಿಐ) : ಇಂದು ನಡೆಯುತ್ತಿರುವ ಲೋಕಸಭೆ ಚುನಾವಣೆಯ ಮೂರನೇ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಕಾಂಗ್ರೆಸ್‌‍ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ ಮಾತ್ರವಲ್ಲ ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವ ಚುನಾವಣೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಸಂಸತ್ತಿನ ಮೂರನೇ ಹಂತದ ಮತದಾನದಲ್ಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.ಎಕ್ಸ್ ನಲ್ಲಿ ಹಿಂದಿಯಲ್ಲಿ ಪೋಸ್ಟ್‌ ಮಾಡಿರುವ ಪ್ರಿಯಾಂಕಾ ಗಾಂಧಿ, ಪ್ರಿಯ ದೇಶದ ಜನರೇ, ಈ ಚುನಾವಣೆ ಪ್ರಜಾಪ್ರಭುತ್ವ ಮತ್ತು ದೇಶದ ಸಂವಿಧಾನವನ್ನು ರಕ್ಷಿಸುವ ಚುನಾವಣೆಯಾಗಿದೆ.

ಇದು ಐತಿಹಾಸಿಕ ನಿರುದ್ಯೋಗ, ವಿಪರೀತ ಹಣದುಬ್ಬರ, ಸಾಂಸ್ಥಿಕ ಭ್ರಷ್ಟಾಚಾರ ಮತ್ತು ಆರ್ಥಿಕತೆಯನ್ನು ಸೋಲಿಸುವ ಚುನಾವಣೆಯಾಗಿದೆ ಎಂದಿದ್ದಾರೆ.

ಪ್ರತಿಯೊಂದು ಮತವೂ ಮುಖ್ಯವಾಗಿದೆ. ಆಳವಾದ ಚಿಂತನೆಯ ನಂತರ ಮತ ಚಲಾಯಿಸಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ನಿಮ ವಿವೇಚನೆಯನ್ನು ಬಳಸಿ. ನಿಮ ಮತ್ತು ನಿಮ ಮಕ್ಕಳ ಭವಿಷ್ಯಕ್ಕಾಗಿ ಮತ ಚಲಾಯಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಮೂರನೇ ಹಂತದ ಚುನಾವಣೆಯಲ್ಲಿ ಸುಮಾರು 120 ಮಹಿಳೆಯರು ಸೇರಿದಂತೆ 1,300ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಹಂತದಲ್ಲಿ 8.39 ಕೋಟಿ ಮಹಿಳೆಯರು ಸೇರಿದಂತೆ 17.24 ಕೋಟಿ ಜನರು ಮತದಾನ ಮಾಡಲು ಅರ್ಹರಾಗಿದ್ದು, 18.5 ಲಕ್ಷ ಅಧಿಕಾರಿಗಳಿಂದ 1.85 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

RELATED ARTICLES

Latest News