Friday, November 22, 2024
Homeರಾಷ್ಟ್ರೀಯ | Nationalಮತಗಟ್ಟೆ ಸಿಬ್ಬಂದಿ ಸಾಗಿಸುತ್ತಿದ್ದ ಬಸ್‌‍ಗೆ ಬೆಂಕಿ

ಮತಗಟ್ಟೆ ಸಿಬ್ಬಂದಿ ಸಾಗಿಸುತ್ತಿದ್ದ ಬಸ್‌‍ಗೆ ಬೆಂಕಿ

ಬೆತುಲ್‌, ಮೇ.8-ಮಧ್ಯಪ್ರದೇಶದ ಬೇತುಲ್‌ ಜಿಲ್ಲೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ಸಾಗಿಸುತ್ತಿದ್ದ ಬಸ್‌‍ಗೆ ಬೆಂಕಿ ಹೊತ್ತಿಕೊಂಡಿದ್ದು, ಕೆಲವು ಇವಿಎಂಗಳಿಗೆ ಹಾನಿಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಜಿಲ್ಲೆಯ ಗೋಲಾ ಗ್ರಾಮದ ಬಳಿ ಈ ಘಟನೆ ನಡೆದಿದೆ ಆದರೆ, ಘಟನೆಯಲ್ಲಿ ಯಾವುದೇ ಮತಗಟ್ಟೆ ಸಿಬ್ಬಂದಿ ಮತ್ತು ಬಸ್‌‍ ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಬೆತುಲ್‌ ಜಿಲ್ಲಾಧಿಕಾರಿ ನರೇಂದ್ರ ಸೂರ್ಯವಂಶಿ ತಿಳಿಸಿದ್ದಾರೆ.

ಬೂತ್‌ ಸಂಖ್ಯೆ 275, 276, 277, 278, 279 ಮತ್ತು 280 ಸೇರಿದಂತೆ ನಾಲ್ಕು ಮತಗಟ್ಟೆಗಳ ಇವಿಎಂಗಳಿಗೆ ಬೆಂಕಿಯಿಂದ ಹಾನಿಯಾಗಿದೆ ಅಗ್ನಿಶಾಮಕ ದಳವು ಬೆಂಕಿಯನ್ನು ನಂದಿಸಿದ್ದು ಅಷ್ಟರಲ್ಲಿ ಬಸ್‌‍ ಸಂಪೂರ್ಣವಾಗಿ ಸುಟ್ಟುಹಾಕಿದೆ ಎಂದು ಅವರು ಹೇಳಿದರು.

ಘಟನೆಯ ಸಮಯದಲ್ಲಿ ಬಸ್‌‍ನಲ್ಲಿ ಆರು ಮತಗಟ್ಟೆಗಳು ಮತ್ತು ಅಷ್ಟೂ ಇವಿಎಂಗಳು ಇದ್ದವು, ಅವುಗಳಲ್ಲಿ ನಾಲ್ಕು ಇವಿಎಂಗಳು ಹಾನಿಗೊಳಗಾಗಿವೆ ಮತ್ತು ಎರಡು ಸುರಕ್ಷಿತವಾಗಿವೆ ಎಂದು ಸೂರ್ಯವಂಶಿ ಹೇಳಿದರು.

ಪರಿಣಾಮ ನಾಲ್ಕು ಇವಿಎಂಗಳಲ್ಲಿ ಕಂಟ್ರೋಲ್‌ ಯೂನಿಟ್‌ ಅಥವಾ ಬ್ಯಾಲೆಟ್‌ ಯೂನಿಟ್‌ ಹಾನಿಯಾಗಿದೆ ಘಟನೆಯಿಂದ ಇವಿಎಂಗಳಲ್ಲಿ ದಾಖಲಾದ ಮತ ಎಣಿಕೆಯ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಈ ಕುರಿತು ಚುನಾವಣಾ ಆಯೋಗಕ್ಕೆ ತಮ್ಮ ವರದಿಯನ್ನು ಕಳುಹಿಸಲಾಗುವುದು ಮತ್ತು ಹಾನಿಗೊಳಗಾದ ಮತಗಟ್ಟೆಗಳಲ್ಲಿ ಮರು ಮತದಾನದ ಬಗ್ಗೆ ಚುನಾವಣಾ ಸಂಸ್ಥೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಬೇತುಲ್‌ ಲೋಕಸಭಾ ಕ್ಷೇತ್ರದಲ್ಲಿ ನಿನ್ನೆ ನಡೆದ ಚುನಾವಣೆಯಲ್ಲಿ ಒಟ್ಟು ಶೇ.72.65ರಷ್ಟು ಮತದಾನವಾಗಿದೆ

RELATED ARTICLES

Latest News