Friday, November 22, 2024
Homeರಾಜ್ಯಹಿಂದೂ ದೇವಾಲಯದ ಬ್ರಹ್ಮರಥೋತ್ಸವ ಸಮಿತಿಗೆ ಮುಸ್ಲಿಂ ವ್ಯಕ್ತಿಯನ್ನು ಸೇರಿಸಿ ವಿವಾದವೆಬ್ಬಿಸಿದ ಕಾಂಗ್ರೆಸ್‌‍ ಸರ್ಕಾರ

ಹಿಂದೂ ದೇವಾಲಯದ ಬ್ರಹ್ಮರಥೋತ್ಸವ ಸಮಿತಿಗೆ ಮುಸ್ಲಿಂ ವ್ಯಕ್ತಿಯನ್ನು ಸೇರಿಸಿ ವಿವಾದವೆಬ್ಬಿಸಿದ ಕಾಂಗ್ರೆಸ್‌‍ ಸರ್ಕಾರ

ಬೆಂಗಳೂರು, ಮೇ 8- ಲೋಕಸಭೆ ಚುನಾವಣೆಯ ಹೋಸ್ತಿಲಿನಲ್ಲೇ ಕಾಂಗ್ರೆಸ್‌‍ ಸರ್ಕಾರ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದೆ. ದೇವಾಲಯದ ಬ್ರಹರಥೋತ್ಸವ ಸಮಿತಿಗೆ ಹಿಂದುಯೇತರ ವ್ಯಕ್ತಿಯನ್ನು ಸದಸ್ಯರನ್ನಾಗಿ ನೇಮಿಸುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕು ತಹಸೀಲ್ದಾರ್‌ ಆದೇಶದ ಪ್ರಕಾರ ಹೊಸಕೋಟೆಯ ಕೋಟೆಯಲ್ಲಿರುವ ಆವಿಮುಕ್ತೇಶ್ವರಸ್ವಾಮಿ ಬ್ರಹರಥೋತ್ಸವ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲು ಶಾಸಕರ ಸಲಹೆ ಮೇರೆಗೆ ಸಮಿತಿಯನ್ನು ರಚಿಸಲಾಗಿದೆ. ಅದರಲ್ಲಿ ನವಾಜ್‌ ಎಂಬ ವ್ಯಕ್ತಿಯ ಹೆಸರಿದ್ದು ಹಿಂದು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

ಮೇ 6ರಂದು ಹೊರಡಿಸಲಾದ ಆದೇಶದಲ್ಲಿ ಕೇಶವಮೂರ್ತಿಯವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ. ಕಾರ್ಯದರ್ಶಿಯನ್ನಾಗಿ ಗಾಯತ್ರಿ ವಿಜಯಕುಮಾರ್‌ ನೇಮಿಸಲಾಗಿದೆ. ಉಳಿದ 10 ಮಂದಿ ಸದಸ್ಯರಲ್ಲಿ ಹಿಂದುಯೇತರ ವ್ಯಕ್ತಿ ನವಾಜ್ ಯಾಕೆ ಎಂದು ಪ್ರಶ್ನೆಗಳು ಕೇಳಿ ಬರುತ್ತಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಆದೇಶದ ಪ್ರತಿಯನ್ನು ಹಂಚಿಕೊಳ್ಳಲಾಗುತ್ತಿದ್ದು, ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಲಾಗುತ್ತಿದೆ. ಇತ್ತೀಚೆಗೆ ಕಾನೂನು ತಿದ್ದು ಪಡಿ ತಂದು ಹಿಂದು ಧಾರ್ಮಿಕ ಸಂಸ್ಥೆಗಳ ಸಮಿತಿಗಳಲ್ಲಿ ಅನ್ಯ ಧರ್ಮಿಯರಿಗೆ ಅವಕಾಶ ಕಲ್ಪಿಸಲು ಅವಕಾಶ ಮಾಡಿಕೊಡಲಾಗಿದೆ. ಅದರ ಭಾಗವಾಗಿ ನವಾಜ್‌ ಅವಿಮುಕ್ತೇಶ್ವರ್‌ ಬ್ರಹರಥೋತ್ಸವ ಸಮಿತಿ ಸದಸ್ಯರಾಗಿ ನೇಮಕವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

RELATED ARTICLES

Latest News