Friday, November 22, 2024
Homeರಾಷ್ಟ್ರೀಯ | Nationalಚರ್ಚೆಗೆ ಬರುವಂತೆ ರಾಹುಲ್‌-ಪ್ರಿಯಾಂಕಾಕೆ ಸ್ಮೃತಿ ಇರಾನಿ ಪಂಥಾಹ್ವಾನ

ಚರ್ಚೆಗೆ ಬರುವಂತೆ ರಾಹುಲ್‌-ಪ್ರಿಯಾಂಕಾಕೆ ಸ್ಮೃತಿ ಇರಾನಿ ಪಂಥಾಹ್ವಾನ

ಅಮೇಥಿ,ಮೇ.9- ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಮುಖ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ಪ್ರಿಯಾಂಕಾ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಸಚಿವೆ ಸ್ಮೃತಿಇರಾನಿ ಈ ಕುರಿತಂತೆ ಮಾತನಾಡಲು ಚರ್ಚೆಗೆ ಬರುವಂತೆ ಗಾಂಧಿಗಳಿಗೆ ಪಂಥಾಹ್ವಾನ ನೀಡಿದ್ದಾರೆ.

ಈ ಕುರಿತ ಚರ್ಚೆಗೆ ನಾನು ಯಾವುದೇ ದೂರದರ್ಶನ ವಾಹಿನಿಗಳಿಗೆ ಬರಲು ಸಿದ್ದಳಿದ್ದೇನೆ ನೀವೆ ಸಮಯ ಮತ್ತು ಸ್ಥಳ ನಿಗದಿಪಡಿಸಿ ಎಂದು ಅವರು ಸವಾಲು ಹಾಕಿದ್ದಾರೆ.ಬಿಜೆಪಿಯೊಂದಿಗೆ ಚರ್ಚೆಗೆ ಯಾವುದೇ ಚಾನೆಲ್‌‍, ಆಂಕರ್‌, ಸ್ಥಳ, ಸಮಯ ಮತ್ತು ಸಮಸ್ಯೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ನಾನು ಅವರಿಗೆ (ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್‌ ಗಾಂಧಿ) ಸವಾಲು ಹಾಕುತ್ತೇನೆ.

ದೋನೋ ಭಾಯಿ-ಬೆಹೆನ್‌ ಏಕ್‌ ತರಫ್‌ ಔರ್‌ ಬಿಜೆಪಿ ಕಾ ಏಕ್‌ ಪ್ರವಕ್ತ ಏಕ್‌ ತರಫ್‌, ದೂದ್‌ ಕಾ ದೂಧ್‌ ಪಾನಿ ಕಾ ಪಾನಿ ಹೋ ಜಾಯೇಗಾ (ಒಂದೆಡೆ ಸಹೋದರ-ಸಹೋದರಿ ಜೋಡಿ ಇರುತ್ತಾರೆ, ಮತ್ತೊಂದೆಡೆ ಬಿಜೆಪಿಯ ವಕ್ತಾರರು ಇರುತ್ತಾರೆ; ಎಲ್ಲವೂ ಸ್ಪಷ್ಟವಾಗುತ್ತದೆ)…ನಮ ಪಕ್ಷದಿಂದ ಸುಧಾಂಶು ತ್ರಿವೇದಿ ಅವರೇ ಸಾಕು ಅವರಿಂದಲೇ ಉತ್ತರವನ್ನು ಪಡೆಯಿರಿ ಎಂದು ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧಿಸುತ್ತಿರುವ ಇರಾನಿ ಕರೆ ನೀಡಿದ್ದಾರೆ.

ಅಮೇಥಿಯಲ್ಲಿ ಸ್ಮೃತಿ ಇರಾನಿ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ ಗಾಂಧಿಯನ್ನು 55,000 ಮತಗಳಿಂದ ಸೋಲಿಸಿ ಗಾಂಧಿ ಕುಟುಂಬದ ಸ್ಥಾನವನ್ನು ಕೊನೆಗೊಳಿಸಿದ್ದರು.

ಅಮೇಥಿ ಮತ್ತು ರಾಯ್‌ಬರೇಲಿ ಕ್ಷೇತ್ರಗಳು ಗಾಂಧಿ ಕುಟುಂಬದ ಹಳೆಯ ಟರ್ಫ್‌ಗಳೆಂದು ಪರಿಗಣಿಸಲಾದ ಎರಡು ಕ್ಷೇತ್ರಗಳು ಮತ್ತೆ ಕೇಂದ್ರಬಿಂದುವಾಗಿದ್ದು, ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ರಾಯ್‌ಬರೇಲಿಯಲ್ಲಿ ಅಖಾಡಕ್ಕೆ ಇಳಿದಿದ್ದಾರೆ ಮತ್ತು ಕುಟುಂಬದ ಆಪ್ತ ಸಹಾಯಕ ಕಿಶೋರಿ ಲಾಲ್‌ ಶರ್ಮಾ ಅಮೇಥಿಯಲ್ಲಿ ಸತಿ ಇರಾನಿ ವಿರುದ್ಧ ಕಣಕ್ಕಿಳಿದಿದ್ದಾರೆ.

ಅಖಿಲ ಭಾರತ ಕಾಂಗ್ರೆಸ್‌‍ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೇಲ್ಕಂಡ ಕ್ಷೇತ್ರಗಳಲ್ಲಿ ಪ್ರಚಾರದ ಮೂಲಕ ಯಾವಾಗಲೂ ಸಕ್ರಿಯರಾಗಿದ್ದಾರೆ, ಸೋಮವಾರದಿಂದ ರಾಯ್‌ ಬರೇಲಿಯಲ್ಲಿ ಬೀಡುಬಿಟ್ಟಿದ್ದಾರೆ ಮತ್ತು ತಂತ್ರ, ನಿರ್ವಹಣೆ ಮತ್ತು ಪ್ರಚಾರದಿಂದ ಚುನಾವಣಾ ಕಣವನ್ನು ಮುನ್ನಡೆಸುತ್ತಿದ್ದಾರೆ.

ಸೋನಿಯಾ ಗಾಂಧಿ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಯ್‌ ಬರೇಲಿಯಿಂದ ಸ್ಪರ್ಧಿಸಿದರು ಮತ್ತು ಭಾರತೀಯ ಜನತಾ ಪಕ್ಷದ ದಿನೇಶ್‌ ಪ್ರತಾಪ್‌ ಸಿಂಗ್‌ ಅವರನ್ನು 1.6 ಲಕ್ಷ ಮತಗಳ ಅಂತರದಿಂದ ಸೋಲಿಸಿದರು, ಆದಾಗ್ಯೂ, ಅವರ ಗೆಲುವಿನ ಅಂತರವು 2014 ಕ್ಕೆ ಹೋಲಿಸಿದರೆ ಶೇಕಡಾ 13 ರಷ್ಟು ಕಡಿಮೆಯಾಗಿತ್ತು.

RELATED ARTICLES

Latest News